IPL 2022 Mega Auction : ಫೆ 12, 13ಕ್ಕೆ ಬೆಂಗಳೂರಿನಲ್ಲಿ
ಬೆಂಗಳೂರು : IPL 2022 ಮೆಗಾ ಆಕ್ಷನ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ಬಾರಿ ಮೆಗಾ ಆಕ್ಷನ್ ಬೆಂಗಳೂರಿನಲ್ಲಿಯೇ ನಡೆಯಲಿದೆ. ಕೊರೊನಾ ಕಾರಣದಿಂದ ಮೆಗಾ ಆಕ್ಷನ್ ಅನ್ನು ಬೇರೆ ಕಡೆ ನಡೆಸಲು ಬಿಸಿಸಿಐ ಆಲೋಚಿಸಿತ್ತು.
ಕೊರೊನಾ ನಡುವೆಯೇ ಟೂರ್ನಿ ನಡೆಸಲು ಬಿಸಿಸಿಐ ಪ್ಲಾನ್ ನಡೆಸುತ್ತಿದೆ. ಮುಂಚೆ ನಿಗದಿಯಾದಂತೆಯೇ ಫೆಬ್ರುವರಿ 12 ಮತ್ತು ಫೆಬ್ರುವರಿ 13ಕ್ಕೆ ಮೆಗಾ ಆಕ್ಷನ್ ಬೆಂಗಳೂರಿನಲ್ಲಿಯೇ ನಡೆಯಲಿದೆ.
ಈ ಬಾರಿ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸಲಿವೆ. ಹೊಸದಾಗಿ ಎರಡು ತಂಡಗಳು ಸೇರ್ಪಡೆಯಾಗಿವೆ. ಲಕ್ನೌ ಮತ್ತು ಅಹಮದಾಬಾದ್. ಕೆ.ಎಲ್ ರಾಹುಲ್ ಲಕ್ನೌ ತಂಡದ ನಾಯಕರಾದರೆ ಅಹಮದಾಬಾದ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದಾರೆ.
ಎಲ್ಲಾ ತಂಡಗಳು ಮೂರು ಆಟಗಾರರನ್ನು ಉಳಿಸಿಕೊಂಡಿದೆ. ಈ ಬಾರಿಯ ಮೆಗಾ ಆಕ್ಷನ್ನಲ್ಲಿ ದೊಡ್ಡ ದೊಡ್ಡ ಆಟಗಾರರು ಇರಲಿದ್ದಾರೆ. ಇನ್ನು ಈ ಬಾರಿಯ ಆಕ್ಷನ್ಗೆ ಕ್ರಿಸ್ ಗೇಯ್ಲ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಜೊಫ್ರಾ ಆರ್ಚರ್ ಇನ್ನು ಮುಂತಾದವರು ನೋಂದಾಯಿಸಿಕೊಂಡಿಲ್ಲ.