InternationalTechnology

ಇತಿಹಾಸ ಸೃಷ್ಟಿಸಿದ ನಾಸಾ: ಸೂರ್ಯನನ್ನು ತಾಕಿದ ಸೋಲಾರ್‌ ಪ್ರೊಬ್‌

ಅಮೆರಿಕಾ: ಸೂರ್ಯನ ಗುಣಲಕ್ಷಣಗಳನ್ನು ತಿಳಿದುಕೊಳ್ಳುವ ತನ್ನ ಕನಸನ್ನು ನಾಸಾ ನನಸು ಮಾಡಿಕೊಂಡಿದೆ. 2018ಉಡಾವಣೆ ಮಾಡಿದ್ದ Parker Solar Probe ಉಪಗ್ರಹ ಸೂರ್ಯನನ್ನು ತಲುಪಿದೆ. ಇಲ್ಲಿವರೆಗೂ ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಪ್ರಯತ್ನಿಸಿದ ಎಲ್ಲಾ ಯೋಜನೆಗಳು ವಿಫಲಗೊಂಡಿದ್ದವು. ಆದ್ರೆ ಮೊಟ್ಟ ಮೊದಲ ಬಾರಿಗೆ ನಾಸಾ ಒಂದು ಹೊಸ ಅಧ್ಯಾಯವನ್ನು ಬರೆದಿದೆ. 2018ರಲ್ಲಿ ಉಡಾವಣೆ ಮಾಡಿರುವ ಈ ಉಪಗ್ರಹವು ಮೂರು ವರ್ಷಗಳ ಬಳಿಕ ಸೂರ್ಯನನ್ನು ತಲುಪಿದೆ. ನಾಸಾ ಉಡಾವಣೆ ಮಾಡಿದ ಉಪಗ್ರಹ ನೀಡಿರುವ ಮಾಹಿತಿ ನೋಡಿ ವಿಜ್ಞಾನಿಗಳು ಬೆರಗಾಗಿದ್ದಾರೆ. ಸೂರ್ಯುನ ಮೇಲೆ ಏನಿದೆ? ಹೇಗಿದೆ? ಅದರ ವಿಸ್ತೀರ್ಣ, ಲಕ್ಷಣ ಮೊದಲಾದವುಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆಯನ್ನು ಪ್ರಾರಂಭಿಸಿದ್ದಾರೆ. ನಾಸಾ ಕಳುಹಿಸಿದ ಸೋಲಾರ್‌ ಪ್ರೋಬ್‌ ಸೂರ್ಯನನ್ನು ತಲುಪಿರುವುದಷ್ಟೇ ಅಲ್ಲದೆ ಅಲ್ಲಿನ ವಾತಾವರಣದ ಬಗ್ಗೆ ಅಪರೂಪದ ಮಾಹಿತಿ ನೀಡಿದೆ. ಸೂರ್ಯನ ವಿಪರೀತವಾದ ಉಷ್ಣವಲಯವನ್ನು ʻಕೊರೊನಾʼ ಅಂತ ಕರೆಯಲಾಗುತ್ತಂತೆ. ಅಲ್ಲದೆ ಸೂರ್ಯನ ಅಂಗಳ ಭೂಮಿಯ ಹಾಗೆ ಗಟ್ಟಿಯಾಗಿಲ್ಲ ಎಂದು ತಿಳಿಸಿದೆ. ಸೂರ್ಯನ ತೀವ್ರ ಉಷ್ಣಾಂಶ ದ್ರವ ರೂಪದಲ್ಲಿ ಬೆಂಕಿ ಉಂಡೆಗಳಾಗಿ ಮೇಲಕ್ಕೆ ಚಿಮ್ಮುತ್ತಲಿವೆಯಂತೆ. ಸೂರ್ಯನ ʻಕೊರೊನಾʼ ಸಂಬಂಧಿತ ಫೋಟೋಗಳ ಆಧಾರದ ಮೇಲೆ ಸುಮಾರು 69,57,000ಕಿ.ಮೀನಿಂದ 1,39,14,000ಕಿ.ಮೀ.ವರೆಗೆ ಬೆಂಕಿ ಉಂಡೆಗಳು ಚಿಮ್ಮುತ್ತವೆ ಎಂದು ಅಂದಾಜಿಸಲಾಗಿದೆ. ಸೋಲಾರ್‌ ಪ್ರೋಬ್‌ 12,52,260ಕಿ.ಮೀ. ಕ್ರಮಿಸುತ್ತಿದ್ದಂತೆ ಸೂರ್ಯನ ದ್ರವ ರೂಪದ ಉಷ್ಣಾಂಶ ತಗುಲಿರುವ ಅನುಭವವಾಗಿರುವ ಅಂಶವನ್ನು ನಾಸಾಗೆ ಕಳುಹಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Share Post