ಒಂಭತ್ತು ದಿನಗಳಲ್ಲಿ 9,166ರಷ್ಯಾ ಸೈನಿಕರನ್ನು ಕೊಂದಿದ್ದೇವೆ-ಉಕ್ರೇನ್ ಅಧ್ಯಕ್ಷ
ಉಕ್ರೇನ್: ರಷ್ಯಾ ಒಂಭತ್ತನೇ ದಿನವೂ ಉಕ್ರೇನ್ ವಿರುದ್ಧ ತನ್ನ ಯುದ್ಧವನ್ನು ಮುಂದುವರೆಸಿದೆ. ಈ ಯುದ್ಧದಲ್ಲಿ ಉಕ್ರೇನ್ ಜೊತೆಗೆ ರಷ್ಯಾ ಕೂಡ ತೀವ್ರವಾಗಿ ನಷ್ಟವನ್ನನುಭವಿಸಿದೆ. ಸೇನಾ ಪಡೆ ಮತ್ತು ಶಸ್ತ್ರಾಸ್ತ್ರಗಳ ವಿಷಯದಲ್ಲಿ ರಷ್ಯಾ ಕೂಡ ಸಾಕಷ್ಟು ನಷ್ಟವನ್ನು ಕಂಡಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸೋಲಿಸಲು ಉಕ್ರೇನ್ ಸೈನಿಕರ ಸಂಖ್ಯೆ ಸಾಕಾಗುವುದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಒಂಬತ್ತು ದಿನಗಳಲ್ಲಿ 9,166 ರಷ್ಯಾ ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಅಧಿಕೃತವಾಗಿ ಘೋಷಿಸಿದೆ.
ಒಂಬತ್ತು ದಿನಗಳಲ್ಲಿ 9,166 ರಷ್ಯಾ ಸೈನಿಕರನ್ನು ಹೊಡೆದುರುಳಿಸಿದ್ದೇವೆ. 33 ರಷ್ಯಾದ ವಿಮಾನಗಳನ್ನು ನಾಶ ಮಾಡಿದ್ದೇವೆ. 37 ಹೆಲಿಕಾಪ್ಟರ್‌ಗಳು, ಎರಡು ದೋಣಿಗಳು, 60 ಇಂಧನ ಟ್ಯಾಂಕರ್‌ಗಳು, 404 ಕಾರುಗಳು ಮತ್ತು 251 ಯುದ್ಧ ಟ್ಯಾಂಕರ್ ಗಳನ್ನು ನಾಶಪಡಿಸಿರುವುದಾಗಿ ಉಕ್ರೇನ್ ತಿಳಿಸಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಶಪಡಿಸಿಕೊಳ್ಳಲು ಯುದ್ಧವನ್ನು ಮುಂದುವರೆಸಿದ್ದಾರೆ. ಈಗಾಗಲೇ ಹಲವಾರು ನಗರಗಳನ್ನು ವಶಪಡಿಸಿಕೊಂಡಿರುವ ರಷ್ಯಾ ಶುಕ್ರವಾರ (ಮಾರ್ಚ್ 4, 2022) ಉಕ್ರೇನ್‌ನಲ್ಲಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪ್ರೋಜಿಯಾ ಪರಮಾಣು ಸ್ಥಾವರವನ್ನು ಕೂಡಾ ವಶಪಡಿಸಿಕೊಂಡಿದೆ.
ರಾಕೆಟ್ ಗಳಿಂದ ದಾಳಿ ನಡೆಸಿ ಅಣು ಸ್ಥಾವರವನ್ನು ವಶಪಡಿಸಿಕೊಂಡರು. ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳ ಬೆಂಬಲ ಇರುವುದರ ಬಗ್ಗೆ ಪುಟಿನ್ ಚಿಂತಿಸುತ್ತಿಲ್ಲ. ಅಗತ್ಯ ಬಿದ್ದರೆ ಉಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ನಡೆಸಲು ಪುಟಿನ್ ಸಿದ್ಧನಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ.