CrimeInternational

ವಿಮಾನದ ಟರ್ಬೈನ್‌ ಬ್ಲೇಡ್‌ಗೆ ಸಿಲುಕಿ ವ್ಯಕ್ತಿ ಪೀಸ್‌ ಪೀಸ್‌!

ಆಂಸ್ಟರ್ಡ್ಯಾಮ್; ಮಾನದ ಟರ್ಬೈನ್​ ಬ್ಲೇಡ್​ಗೆ ಸಿಲುಕಿ ವ್ಯಕ್ತಿಯೊಬ್ಬ ಪೀಸ್‌ ಪೀಸ್‌ ಆಗಿದ್ದಾನೆ..  ಆಂಸ್ಟರ್ಡ್ಯಾಮ್​​ನ ಶಿಪೋಲ್​ ವಿಮಾನ ನಿಲ್ದಾಣದಿಂದ ಡೆನ್ಮಾರ್ಕ್​ನ ಬಿಲ್ಲುಂಡೆಗೆ  ಹೊರಟಿದ್ದ ವಿಮಾನದಲ್ಲಿ ಈ ದುರ್ಘಟನೆ ನಡೆದಿದೆ.. ಇನ್ನೇ ಟೇಕಾಫ್‌ ಆಗಬೇಕು ಎನ್ನುವ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು, ವ್ಯಕ್ತಿ ಹಲವಾರು ಪೀಸ್‌ಗಳಾಗಿದ್ದಾನೆ.. ಆತನ ಗುರುತು ಕೂಡಾ ಪತ್ತೆಯಾಗುತ್ತಿಲ್ಲ..

ಡಚ್​ ಏರ್​ಲೈನ್​ ಕೆಎಲ್​ಎಂ ವಿಮಾನದಲ್ಲಿ ಈ ದುರ್ಘಟನೆ ನಡೆದಿದೆ.. ವಿಮಾನದ ಸ್ಪಿನ್ನಿಂಗ್​​ ಟರ್ಬೈನ್​ ಬ್ಲೇಡ್​ಗೆ ಸಿಲುಕಿ ಈ ಘಟನೆ ನಡೆದಿದೆ.. ಕೆಎಲ್​​1341 ವಿಮಾನ ಬಿಲ್ಲುಂಡ್​ಗೆ ಹಾರಲು ತಯಾರಿ ನಡೆಸಿತ್ತು.. ಆಗ ಅದು ಹೇಗೆ ಸಿಲುಕಿದನೋ ಏನೋ ವ್ಯಕ್ತಿ ದಾರುಣವಾಗಿ ಸಾನ್ನಪ್ಪಿದ್ದಾನೆ.. ಇದರಿಂದಾಗಿ, ಪ್ರಯಾಣ ಮುಂದೂಡಲಾಯಿತು.. ವಿಮಾನದಿಂದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.. ಬೇರೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ..

 

Share Post