HealthLifestyle

ಮೂಲವ್ಯಾಧಿ ಸಮಸ್ಯೆಗೆ ಮನೆಮದ್ದು ಬಳಸಿ

ಬೆಂಗಳೂರು: ಇತ್ತೀಚೆಗೆ ಸಾಮಾನ್ಯವಾಗಿ ಮೂಲವ್ಯಾಧಿಯಿಂದ ಬಳಲುವವರ ಸಂಖ್ಯೆ ಜಾಸ್ತಿ. ಒಂದು ವೇಳೆ ಅದು ಬಂದರೆ ಕೂರಕ್ಕೆ ಆಗ್ತಾಯಿಲ್ಲ, ನಡೆಯಕ್ಕೂ ಆಗ್ತಯಿಲ್ಲ, ಮಲಗಕ್ಕೂ ಆಗ್ತಾಯಿಲ್ಲ ಅಂತ ಗೋಳಾಡುತ್ತಾರೆ. ನರಕ ತೋರಿಸುವ ಮೂಲವ್ಯಾಧಿಗೆ ಮುಖ್ಯ ಕಾರಣ ಜೀವನ ಶೈಲಿ. ಮೂಲವ್ಯಾಧಿಯನ್ನು ಆಂಗ್ಲ ಭಾಷೆಯಲ್ಲಿ ಪೈಲ್ಸ್ ಅಂತ ಕರೆಯುತ್ತೇವೆ. ಅತಿಯಾದ ಮಾಂಸ ಸೇವಿಸುವುದರಿಂದ ಹೆಚ್ಚಾಗಿ ಮೂಲವ್ಯಾಧಿ ಕಾಡಬಹುದು. ಆದರೆ ಮೂಲವ್ಯಾಧಿ ಬಗ್ಗೆ ಆತಂಕ ಬೇಡ. ನಾವು ಇಲ್ಲಿ ತಿಳಿಸಿದ ಕೆಲ ಮದ್ದುಗಳು ಮೂಲವ್ಯಾಧಿಯನ್ನು ನಿವಾರಿಸಬಹುದು.
ಹಂದಿ ಮಾಂಸ ಸೇವನೆ: ಸಾಮಾನ್ಯವಾಗಿ ದೇಹಕ್ಕೆ ಹೆಚ್ಚು ಉಷ್ಣತೆ ನೀಡುವ ಆಹಾರ ಸೇವಿಸಿದಾಗ ಮೂಲವ್ಯಾಧಿ ಕಾಣಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ವೈದ್ಯರು ದೇಹಕ್ಕೆ ತಂಪು ನೀಡುವ ಆಹಾರವನ್ನು ಸೇವಿಸಲು ಸೂಚಿಸುತ್ತಾರೆ.
ನಿಂಬೆ ಗಿಡದ ಹೂ: ಮಲದ ಜೊತೆ ವಿಪರೀತ ರಕ್ತ ಹೋಗುವುದು ಮೂಲವ್ಯಾಧಿಯ ಲಕ್ಷಣ. ಮಲದ ಜೊತೆ ರಕ್ತಸ್ರಾವವಾಗುತ್ತಿದ್ದರೆ ನಿಂಬೆ ಗಿಡದ ಹೂ ಮತ್ತು ಬೇರನ್ನು ಅರಿದು, ಅಕ್ಕಿ ತೊಳೆದ ನೀರಿಗೆ ಸೇರಿಸಿ ಸೇವಿಸಿದರೆ ಒಳ್ಳೆಯದು.
ಸಿಹಿಗುಂಬಳ ಬಳಸಿ: ಸಿಹಿಗುಂಬಳವನ್ನು ಊಟದ ಜೊತೆ ಹೆಚ್ಚು ಬಳಸಬೇಕು.
ಹುಣಸೆ ಬೀಜ: ಇದು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಇದ್ದೆ ಇರುತ್ತದೆ.ಮೊದಲು ಹುಣಸೆ ಬೀಜದ ಸಿಪ್ಪೆ ತೆಗೆಯಿರಿ. ಹುಣಸೆ ಬೀಜದೊಳಗಿರುವ ಬಿಳಿ ಬಣ್ಣದ ಬೀಜವನ್ನು ನುಣುವಾಗುವಂತೆ ರುಬ್ಬಿ. ಅದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇರಿವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ.

Share Post