InternationalSports

ಕೇವಲ 62 ರನ್‌ಗೆ ಮುಗ್ಗರಿಸಿದ ನ್ಯೂಜಿಲೆಂಡ್‌

ಮುಂಬೈ: ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ತಂಡ ಕೇವಲ 62 ರನ್ನಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಟೀಂ ಇಂಡಿಯಾದ ರವಿಚಂದ್ರನ್ ಅಶ್ವಿನ್ (8ಕ್ಕೆ 4) ಹಾಗೂ ಮೊಹಮ್ಮದ್ ಸಿರಾಜ್ (19ಕ್ಕೆ 3) ಕರಾರುವಾಕ್‌ ದಾಳಿಗೆ ನ್ಯೂಜಿಲೆಂಡ್‌ ಮುಗ್ಗರಿಸಿದೆ.


ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್‌ ಗಳಿಸಿತು. ಎಜಾಜ್ ಪಟೇಲ್ ಐತಿಹಾಸಿಕ 10 ವಿಕೆಟ್ ಸಾಧನೆ ಮಾಡಿದ, ಅನಿಲ್‌ ಕುಂಬ್ಲೆ ದಾಖಲೆಯನ್ನು ಸರಿಗಟ್ಟಿದರು. ಕಿವೀಸ್ ಪರ ನಾಯಕ ಲಾಥಮ್ (10) ಹಾಗೂ ಕೈಲ್ ಜೇಮಿಸನ್ (17) ಹೊರತುಪಡಿಸಿದರೆ ಇತರೆ ಯಾವ ಬ್ಯಾಟ್ಸ್‌ಮನ್‌ ಕೂಡಾ ಎರಡಂಕಿಯನ್ನು ತಲುಪಲಿಲ್ಲ. ಭಾರತದ ಪರ ಅಶ್ವಿನ್ ಕೇವಲ 8 ರನ್ ಕೊಟ್ಟು ನಾಲ್ಕು ವಿಕೆಟ್ ಕಬಳಿಸಿದರು. ಮೊಹಮ್ಮದ್ ಸಿರಾಜ್ ಮೂರು ಹಾಗೂ ಜಯಂತ್ ಯಾದವ್ ಒಂದು ವಿಕೆಟ್ ಕಬಳಿಸಿದರು.

Share Post