LifestyleTechTechnology

ನಿಮ್ಮ ಫೋನ್‌ ಬಳಕೆ ಈ ರೀತಿ ಇದ್ದರೆ ಅದು ಸ್ಫೋಟಗೊಳ್ಳೋದು ಗ್ಯಾರೆಂಟಿ!

ಬೆಂಗಳೂರು; ಈಗ ಪ್ರತಿಯೊಬ್ಬರ ಬಳಿಯೂ ಮೊಬೈಲ್‌ ಫೋನ್‌ ಇದೆ.. ಅದ್ರಲ್ಲೂ ಕೂಡಾ ಸ್ಮಾರ್ಟ್‌ ಫೋನ್‌ಗಳನ್ನು ಹೊಂದಿರುವವರೇ ಹೆಚ್ಚು.. ಈಗ ಮೊಬೈಲ್‌ಗಳನ್ನು ಜನ ಅನಿವಾರ್ಯಕ್ಕಷ್ಟೇ ಬಳಕೆ ಮಾಡೋದಿಲ್ಲ.. ಮೊಬೈಲ್‌ ಬಳಸೋದನ್ನೇ ಜೀವನ ಮಾಡಿಕೊಂಡಿದ್ದಾರೆ.. ದಿನದ ಬಹುತೇಕ ಸಮಯದಲ್ಲಿ ಮೊಬೈಲ್‌ ಬಳಸುತ್ತಿರುತ್ತಾರೆ… ಮೊಬೈಲ್‌ಗಳನ್ನು ನಿರಂತರವಾಗಿ ಬಳಸುವುದರಿಂದ ಅವು ಬಿಸಿಯಾಗುತ್ತವೆ.. ದೀರ್ಫಕಾಲದ ಬಳಕೆ ಹಾಗೂ ಆನ್‌ಲೈನ್‌ ಗೇಮ್‌ಗಳನ್ನು ಆಡುವುದರಿಂದ ಮೊಬೈಲ್‌ಗಳು ಬಿಸಿಯಾಗುತ್ತವೆ.. ಇದರ ಜೊತೆ ಹಲವು ಅವಾಂತರಗಳು ಸೃಷ್ಟಿಯಾಗುತ್ತವೆ.. ನಾವು ಮೊಬೈಲ್‌ ದಾಸರಾಗಿ ಕೆಲಸ ಮುಂಜಾಗ್ರತೆಗಳನ್ನು ಕೈಗೊಳ್ಳದೇ ಮೊಬೈಲ್‌ ಬಳಸುತ್ತಾ ಹೋದರೆ ಅದು ಸ್ಫೋಟಗೊಳ್ಳೋದು ಗ್ಯಾರೆಂಟಿ..

ಇದನ್ನೂ ಓದಿ; ವಿಧಾನಸಭೆ ಮುಂಗಾರು ಅಧಿವೇಶನ; ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರಗಳು ರೆಡಿ!

ಸ್ಪಾರ್ಟ್‌ ಫೋನ್‌ಗಳನ್ನು ಚಾರ್ಜ್‌ ಮಾಡುವಾಗ ತುಂಬಾನೇ ಜಾಗ್ರತೆ ವಹಿಸಬೇಕು.. ಕೆಲವರು ರಾತ್ರಿಯಿಡೀ ಚಾರ್ಜ್‌ಗೆ ಹಾಕಿ ಸುಮ್ಮನಿದ್ದುಬಿಡುತ್ತಾರೆ.. ಹಂಡ್ರೆಡ್‌ ಪರ್ಸೆಂಟ್‌ ಚಾರ್ಜ್‌ ಆಗುತ್ತಿದ್ದಂತೆ ಅದನ್ನು ತೆಗೆದಿಡುವುದು ಒಳ್ಳೆಯದು.. ಮೊಬೈಲ್‌ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ 2 ರಿಂದ 4 ಗಂಟೆಗಳ ಚಾರ್ಜ್‌ ಮಾಡಿದರೆ ಬ್ಯಾಟರಿ ಫುಲ್‌ ಆಗುತ್ತದೆ.. ಬ್ಯಾಟರಿ ಫುಲ್‌ ಆದ ಮೇಲೂ ಚಾರ್ಜ್‌ಗೆ ಇಟ್ಟಿದ್ದರೆ ಮೊಬೈಲ್‌ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.. ಇನ್ನು ತುಂಬಾ ಜನಕ್ಕೆ ಮೊಬೈಲ್‌ ಚಾರ್ಜ್‌ ಆಗುವ ತನಕ ಕಾಯುವ ವ್ಯವದಾನವಿರೋದಿಲ್ಲ.. ಚಾರ್ಜ್‌ಗೆ ಹಾಕಿಕೊಂಡೇ ಮೊಬೈಲ್‌ ಬಳಸುತ್ತಿರುತ್ತಾರೆ.. ಅಷ್ಟೇ ಏಕೆ, ಚಾರ್ಜ್‌ಗೆ ಹಾಕಿಕೊಂಡೇ ಮಾತನಾಡುತ್ತಿರುತ್ತಾರೆ.. ಇದರಿಂದ ಮೊಬೈಲ್‌ ಹೆಚ್ಚು ಬಿಸಿಯಾಗುತ್ತದೆ.. ಇದರಿಂದ ಬ್ಯಾಟರಿ ಮೇಲೆ ಹೆಚ್ಚು ಒತ್ತಡ ಬಿದ್ದು ಅದು ಸ್ಫೋಟಗೊಂಡು ಅನಾಹುತವಾಗುತ್ತದೆ..

ಇದನ್ನೂ ಓದಿ;ಮಹಿಳೆಯ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ, ಕ್ಷಣಾರ್ಧದಲ್ಲಿ ಸಾವು!; ಏನಿದು ವಿಚಿತ್ರ

ಇನ್ನು ತುಂಬಾ ಜನ ಹೊರಗಡೆ ಬಿಸಿಲಿನಲ್ಲಿ ಕೆಲಸ ಮಾಡುತ್ತಿರುತ್ತಾರೆ.. ಅವರು ಮೊಬೈಲ್‌ ಅನ್ನು ಕೂಡಾ ಬಿಸಿಲಿನಲ್ಲಿ ಇಟ್ಟರೆ ಅದರಲ್ಲಿ ಕೂಡಾ ತೊಂದರೆ ಹೆಚ್ಚು.. ಬಿಸಿಲಿಗೆ ಮೊಬೈಲ್‌ ಬಿಸಿಯಾದರೂ ಅದು ಸ್ಫೋಟಗೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ.. ಇನ್ನು ಮೊಬೈಲ್‌ ಬ್ಯಾಟರಿ ಹಾಳಾಗಿ ಊದಿಕೊಂಡಿದ್ದರೆ ಅದನ್ನು ಬದಲಾಯಿಸುವುದು ಒಳ್ಳೆಯದು.. ಜೊತೆ ಮೊಬೈಲ್‌ಗೆ ಕೂಡಾ ವಿಶ್ರಾಂತಿ ಕೊಡಬೇಕಾದ ಅವಶ್ಯಕತೆ ಇದು.. ಮೊಬೈಲ್‌ನ್ನು ನಿರಂತರವಾಗಿ ಬಳಸಿದರೂ ಕೂಡಾ ಅದು ಸ್ಫೋಟಗೊಳ್ಳುವ ಸಾಧ್ಯತೆಯೇ ಹೆಚ್ಚು..

Share Post