ಮಹಿಳೆಯ ಮೂಗಲ್ಲಿ ರಕ್ತ, ಬಾಯಲ್ಲಿ ನೊರೆ, ಕ್ಷಣಾರ್ಧದಲ್ಲಿ ಸಾವು!; ಏನಿದು ವಿಚಿತ್ರ
ಬೆಂಗಳೂರು; ಆಪರೇಷನ್ ಥಿಯೇಟರ್‌ಗೆ ಹೋಗುತ್ತಿದ್ದಂತೆ ಮಹಿಳೆಯ ಮೂಗಿನಲ್ಲಿ ರಕ್ತ, ಬಾಯಲ್ಲಿ ನೊರೆ ಬಂದು ಕ್ಷಣಾರ್ಧದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.. ಬಹುತೇಕ ಆರೋಗ್ಯವಾಗಿಯೇ ಇದ್ದ ಮಹಿಳೆಗೆ ಗರ್ಭಕೋಶದಲ್ಲಿ ಸಣ್ಣ ಗುಳ್ಳೆ ಇದೆ ಎಂಬ ಕಾರಣಕ್ಕೆ ಆಪರೇಷನ್ ಮಾಡಿಸಲು ಹೇಳಿದ್ದರು.. ಅದರಂತೆ ಮಹಿಳೆ ಆಪರೇಷನ್ ಮಾಡಿಸಿಕೊಳ್ಳುಲು ಆರಾಮಾಗಿ ನಡೆದುಕೊಂಡೇ ಆಸ್ಪತ್ರೆಗೆ ಬಂದಿದ್ದಳು.. ಸಣ್ಣ ಆಪರೇಷನ್ ಎಂದು ವೈದ್ಯರು ಹೇಳಿದ್ದರು.. ಆದ್ರೆ ಆಪರೇಷನ್ ಥಿಯೇಟರ್‌ಗೆ ಹೋಗುತ್ತಿದ್ದಂತೆ ಮಹಿಳೆ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ..
ಇದನ್ನೂ ಓದಿ; ದಕ್ಷಿಣ ಕನ್ನಡದ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಕತ್ರಿನಾ ಕೈಫ್ ಭೇಟಿ
ಬೆಂಗಳೂರಿನ ಯಶವಂತಪುರದ ತುಳಸಿ ಜೈನ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.. ದಿವ್ಯಾ ಎಂಬಾಕೆಯೇ ಸಾವನ್ನಪ್ಪಿರುವ ಮಹಿಳೆಯಾಗಿದ್ದಾರೆ.. ಇವರಿಗೆ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದು, ಗರ್ಭಕೋಶದಲ್ಲಿ ಗುಳ್ಳೆ ಕಾಣಿಸಿಕೊಂಡಿತ್ತು.. ಹೀಗಾಗಿ ಅವರು ಮೊದಲಿಗೆ ಮುದ್ರಾ ಎಂಬ ಆಸ್ಪತ್ರೆಯಲ್ಲಿ ತೋರಿಸಿದ್ದರು.. ಅಲ್ಲಿನ ವೈದ್ಯರು ತುಳಸಿ ಜೈನ್ ಆಸ್ಪತ್ರೆಗೆ ರೆಫರ್ ಮಾಡಿದ್ದರು ಎಂದು ತಿಳಿದುಬಂದಿದೆ.. ಮೊದಲಿಗೆ ಮಹಿಳೆಗೆ ಇಸಿಜಿ ಸೇರಿದಂತೆ ಹಲವು ಟೆಸ್ಟ್‌ಗಳನ್ನು ಮಾಡಿದ್ದಾರೆ.. ಎಲ್ಲವೂ ನಾರ್ಮಲ್ ಬಂದಿದ್ದು, ಅದರ ನಂತರವೇ ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಲಾಗಿದೆ..
ಇದನ್ನೂ ಓದಿ; 60 ನಾಯಿಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಮೊಸಳೆ ತಜ್ಞ!
ಆದ್ರೆ ದಿವ್ಯಾ ಅವರನ್ನು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋದ ಕೆಲವೇ ಕ್ಷಣಗಳನ್ನು ಆಕೆಯ ಬಾಯಿಂದ ರಕ್ತ ಬಂದಿದ್ದು, ಬಾಯಲ್ಲಿ ನೊರೆ ಬಂದಿದೆ ಎಂದು ತಿಳಿದುಬಂದಿದೆ.. ಇದಾದ ಕೆಲವೇ ನಿಮಿಷಗಳಲ್ಲಿ ದಿವ್ಯಾ ಮೃತಪಟ್ಟಿದ್ದಾರೆ.. ಮಹಿಳೆಯ ಕಡೆಯವರು ಆಸ್ಪತ್ರೆಯವರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ.. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..