BengaluruPolitics

ವಿಧಾನಸಭೆ ಮುಂಗಾರು ಅಧಿವೇಶನ; ಸರ್ಕಾರದ ವಿರುದ್ಧ ಬ್ರಹ್ಮಾಸ್ತ್ರಗಳು ರೆಡಿ!

ಬೆಂಗಳೂರು; ಇಂದಿನಿಂದ ಕರ್ನಾಟಕ ವಿಧಾನಸಭೆಯ ಮುಂಗಾರು ಅಧಿವೇಶನ ನಡೆಯಲಿದೆ.. 9 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿಹಾಕಲು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಜಂಟಿಯಾಗಿ ಕಾರ್ಯತಂತ್ರ ರೂಪಿಸಿವೆ.. ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣವೇ ವಿಪಕ್ಷಗಳ ಪ್ರಮುಖ ಅಸ್ತ್ರವಾಗಿದೆ.. ಮುಡಾ ಹಗರಣ ವಿಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿಯಲು ಸಜ್ಜಾಗಿವೆ..

ಇದನ್ನೂ ಓದಿ; 60 ನಾಯಿಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಮೊಸಳೆ ತಜ್ಞ!

ಈ ಬಾರಿ ಮೂವರು ಮಾಜಿ ಸಿಎಂಗಳು ಸದನದಲ್ಲಿ ಕಾಣಿಸೋದಿಲ್ಲ.. ಬಸವರಾಜ ಬೊಮ್ಮಾಯಿ ಹಾಗೂ ಕುಮಾರಸ್ವಾಮಿಯವರು ಲೋಕಸಭೆಗೆ ಆಯ್ಕೆಯಾಗಿರುವುದರಿಂದ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.. ಹೀಗಾಗಿ ಅವರು ಕಲಾಪಕ್ಕೆ ಬರೋದಕ್ಕೆ ಆಗೋದಿಲ್ಲ.. ಇದರ ಜೊತೆಗೆ ಚುನಾವಣಾ ರಾಜಕೀಯದಿಂದ ಯಡಿಯೂರಪ್ಪ ಹಿಂದೆ ಸರಿದಿರುವುದರಿಂದ ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.. ಹೀಗಾಗಿ ಅವರು ಕೂಡಾ ಬರೋದಿಲ್ಲ.. ಹೀಗಾಗಿ ವಿಪಕ್ಷ ನಾಯಕ ಆರ್‌.ಅಶೋಕ್‌ ಹಾಗೂ ವಿಜಯೇಂದ್ರ ಅವರೇ ಮುಖ್ಯ ಆಕರ್ಷಣೆ. ಇವರಿಬ್ಬರೇ ಸರ್ಕಾರದ ವಿರುದ್ಧ ಹೋರಾಟ ಸಂಘಟಿಸಲಿದ್ದಾರೆ..

ಇದನ್ನೂ ಓದಿ; 60 ನಾಯಿಗಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಮೊಸಳೆ ತಜ್ಞ!

ಗ್ಯಾರೆಂಟಿಗಳ ಹೆಸರಲ್ಲಿ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿದೆ.. ಈ ವಿಚಾರವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬೀಳುವ ಸಾಧ್ಯತೆ ಇದೆ..

Share Post