Sports

IPL ನಲ್ಲಿ ಪಾಲ್ಗೊಳ್ಳದಿರಲು ಕಾರಣ ತಿಳಿಸಿದ ಮಿಚೆಲ್‌ ಸ್ಟಾರ್ಕ್

ಬೆಂಗಳೂರು : ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಬೌಲರ್‌ ಎನಿಸಿಕೊಂಡಿರುವ ಮಿಚೆಲ್‌ ಸ್ಟಾರ್ಕ್‌ ಕಳೆದ ಎರಡು ಸೀಸನ್‌ಗಳಿಂದ ಆಡಿರಲಿಲ್ಲ. ಇದಕ್ಕೆ ಕಾರಣ ಏನು ಎಂದು ವೇಗಿ ಮಿಚೆಲ್‌ ಸ್ಟಾರ್ಕ್‌ ತಿಳಿಸಿದ್ದಾರೆ

2014 ರಲ್ಲಿ ಹರಾಜಿನಲ್ಲಿದ್ದ ಸ್ಟಾರ್ಕ್​ ಅವರನ್ನು RCB ತಂಡ ಖರೀದಿಸಿತ್ತು. ಆರ್​ಸಿಬಿ ಪರ 2 ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸ್ಟಾರ್ಕ್ 27 ಪಂದ್ಯಗಳಿಂದ 34 ವಿಕೆಟ್ ಕಬಳಿಸಿದ್ದರು. ನಂತರ 2018ರಲ್ಲಿ ಕೆಕೆಆರ್‌ ಖರೀದಿಸಿತ್ತು ಆದರೆ ಗಾಯದ ಕಾರಣದಿಂದ ಅವರು ಆಡಿರಲಿಲ್ಲ. ನಂತರ ಅವರು ಯಾವ ಮೆಗಾ ಆಕ್ಷನ್‌ನಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಈ ಬಾರಿಯ ಮೆಗಾ ಆಕ್ಷನ್‌ನಲ್ಲಿಯೂ ಮಿಚೆಲ್‌ ಹೆಸರು ಕಾಣಿಸಿಕೊಂಡಿಲ್ಲ. ಅದಕ್ಕೆ ಕಾರಣ ಏನು ಎಂಬುದು ಈಗ ತಿಳಿಸಿದ್ದಾರೆ. ಐಪಿಎಲ್‌ ಬಯೋ ಬಬ್ಬಲ್‌ನಲ್ಲಿ ನಡೆಯಲಿದೆ. ನಾನು ತುಂಬಾ ದಿನ ಬಯೋ ಬಬ್ಬಲ್‌ನಲ್ಲಿ ಕಾಲ ಕಳೆಯಲು ಬಯಸುತ್ತಿಲ್ಲ ಅದರಿಂದ ನಾನು ಕೊನೆ ಘಳಿಗೆಯಲ್ಲಿ ಹಿಂದೆ ಸರಿದಿದ್ದೇನೆ ಎಂದು ಮಿಚೆಲ್‌ ಸ್ಟಾರ್ಕ್‌ ಹೇಳಿದ್ದಾರೆ.

ಐಪಿಎಲ್‌ಗೆ ನಾನು ಹಿಂದಿರುಗುವ ಸಮಯ ಬರುತ್ತದೆ. ಅಲ್ಲಿಯವರೆಗೂ ನಾನು ಅಸ್ಟ್ರೇಲಿಯಾ ಪರ ಎಷ್ಟು ಸಾಧ್ಯವೋ ಅಷ್ಟು ಆಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Share Post