ಭಾರತಕ್ಕೆ ಶಾರ್ದೂಲ್ ಆಸರೆ – ಎರಡನೇ ಇನ್ನಿಂಗ್ಸ್ ಅಲ್ಪ ಮುನ್ನಡೆ
ಜೋಹನ್ಸ್‌ಬರ್ಗ್ : ಎರಡನೇ ಟೆಸ್ಟ್ ನಲ್ಲಿ ಶಾರ್ದೂಲ್ ಠಾಕೂರ್ ಭಾರತಕ್ಕೆ ಆಸರೆ ಆಗಿದ್ದಾರೆ. ದ.ಆಫ್ರಿಕಾವನ್ನು ಬೇಗ ಔಟ್ ಮಾಡುವಲ್ಲಿ ಠಾಕೂರ್ ಯಶಸ್ವಿಯಾಗಿದ್ದಾರೆ. ಎರಡನೇ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಶಾರ್ದೂಲ್ ಅವರು ದ.ಆಫ್ರಿಕಾದವರ 7 ವಿಕೆಟ್ ಕಿತ್ತಿದ್ದಾರೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 58 ರನ್‍ಗಳ ಮುನ್ನಡೆ ಪಡೆದುಕೊಂಡಿದೆ.
ಮೊದಲ ದಿನದಾಟದಲ್ಲಿ 35 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ ಎರಡನೇ ದಿನಕ್ಕೆ 229 ರನ್‌ಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಪರ ಶಾರ್ದೂಲ್ ಠಾಕೂರ್ 17.5 ಓವರ್ ಎಸೆದು 61 ರನ್ ಕೊಟ್ಟು 7 ವಿಕೆಟ್ ಪಡೆದು ಮಿಂಚಿದರು. ಇನ್ನುಳಿದಂತೆ ಮೊಹಮ್ಮದ್ ಶಮಿ 2 ಮತ್ತು ಬುಮ್ರಾ 1 ವಿಕೆಟ್ ಕಿತ್ತರು.
ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 20 ಓವರ್‌ಗಳಲ್ಲಿ 85 ರನ್‍ಗಳಿಗೆ 2 ವಿಕೆಟ್ ಕಳೆದುಕೊಂಡು 58 ರನ್‍ಗಳ ಮುನ್ನಡೆಯಲ್ಲಿದೆ.