Sports

U19 ವಿಶ್ವಕಪ್‌ : ಇಂದು ಭಾರತ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್‌

U19 ವಿಶ್ವಕಪ್‌ : ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ಗೆದ್ದವರು ಫೈನಲ್‌ ತಲುಪಲಿದ್ದಾರೆ. ಇದಕ್ಕೂ ಮುನ್ನ ಭಾರತವು ನಾಲ್ಕು ಬಾರಿ ಕಿರಿಯರ ವಿಶ್ವಕಪ್‌ ಮುಡಿಗೇರಿಸಿಕೊಂಡಿದೆ.

ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 6ಕ್ಕೆ ಪಂದ್ಯ ಶುರುವಾಗಲಿದೆ. ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ನೋಡಬಹುದಾಗಿದೆ.

ಮೊಹಮ್ಮದ್‌ ಕೈಫ್‌ ಅವರ ನೇತೃತ್ವದಲ್ಲಿ ಭಾರತವು 2000 ನೇ ಇಸವಿಯಲ್ಲಿ ಕಿರಿಯರ ವಿಶ್ವಕಪ್‌ ಗೆದ್ದಿತ್ತು. ಆನಂತರ ವಿರಾಟ್‌ ಅವರ ನಾಯಕತ್ವದಲ್ಲಿ 2008ರಲ್ಲಿ ಗೆದ್ದು ಬೀಗಿತ್ತು. ಇದಾದ ಬಳಿಕ 2012 ರಲ್ಲಿ ಉನ್ಮುಕ್ತ್ ಚಂದ್ ನಾಯಕತ್ವದಲ್ಲಿ ಭಾರತ ತಂಡವು ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2018ರಲ್ಲಿಯೂ ಟೀಂ ಇಂಡಿಯಾ ವಿಶ್ವಕಪ್‌ ಚಾಂಪಿಯನ್ಸ್‌ ಆಗಿದ್ದರು.

ಈಗಾಗಲೇ 5 ಬಾರಿ ಫೈನಲ್‌ ಪ್ರವೇಶಿಸಿರುವ ಭಾರತ ಇಂದು ನಡೆಯುವ ಪಂದ್ಯದಲ್ಲಿ ಗೆದ್ದರೆ 6 ಬಾರಿ ಫೈನಲ್‌ ಪ್ರವೇಶಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Share Post