Cinema

ಸುದೀಪ್‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಂದಿಗೆ 26 ವಸಂತ

ಬೆಂಗಳೂರು : ಕನ್ನಡದ ಬಿಗ್‌ಬಾಸ್‌, ಅಭಿನಯ ಚಕ್ರವರ್ತಿ, ಕಿಚ್ಚ ಎಂದೆಲ್ಲಾ ಕರೆಸಿಕೊಳ್ಳುವ ಕಿಚ್ಚ ಸುದೀಪ್‌ ಅವರು ಇಂದು ಚಿತ್ರರಂಗಕ್ಕೆ ಕಾಲಿಟ್ಟು 26 ವರ್ಷಗಳು ಕಳೆದಿವೆ.

ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು, ಹಿಂದಿಯಲ್ಲಿಯೂ ತಮ್ಮ ಛಾಪು ಮೂಡಿಸಿಸರುವ ಕಿಚ್ಚ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು 26 ವರ್ಷಗಳ ಹಿಂದೆ ಪಾದಾರ್ಪಣೆ ಮಾಡಿದ್ದು ತಾಯವ್ವ ಸಿನಿಮಾ ಮೂಲಕ, ನಂತರ ಮಾಡಿದ್ದು ಪ್ರತ್ಯರ್ಥ. ಎರಡು ಸಿನಿಮಾ ಸೋತರು ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದು ಸ್ಪರ್ಷ ಸಿನಿಮಾ ಮೂಲಕ. ಆನಂತರ ಹುಚ್ಚ ಸಿನಿಮಾ ಬ್ಲಾಕ್‌ ಬಸ್ಟರ್‌ ಹಿಟ್‌ ಆಯ್ತು.

ಇನ್ನು 2008ರಲ್ಲಿ ಫೂಂಕ್‌ ಸಿನಿಮಾದಲ್ಲಿ ಕಾಣಿಸಿಕೊಂಡ ಸುದೀಪ್‌ ಬಾಲಿವುಡ್‌ನಲ್ಲಿಯೂ ಛಾಪು ಮೂಡಿಸಿದ್ದರು.  ಈಗ ಅವರ ವಿಕ್ರಾಂತ್‌ ರೋಣ ರಿಲೀಸ್‌ಗೆ ಸಜ್ಜಾಗಿದೆ. ಇಂದು ಸುದೀಪ್‌ ಪತ್ನಿ ಪ್ರಿಯ ಅವರು ಕಳೆದ ವರ್ಷದ ಫೋಟೋ ಶೇರ್‌ ಮಾಡುವ ಮೂಲಕ ವಿಶ್‌ ಮಾಡಿದ್ದರು. ಅದಕ್ಕೆ ಸುದೀಪ್‌ ರಿಪ್ಲೈ ಮಾಡಿದ್ದಾರೆ

Share Post