Bengaluru

ಜೆಡಿಎಸ್‌ ಪಕ್ಷದಿಂದ ಎಲ್‌.ಆರ್‌.ಶಿವರಾಮೇಗೌಡ ಉಚ್ಚಾಟನೆ

ಬೆಂಗಳೂರು: ನಾಗಮಂಗಲದ ಜೆಡಿಎಸ್‌ ಮುಖಂಡ ಎಲ್‌.ಆರ್‌.ಶಿವರಾಮೇಗೌಡರನ್ನು ಉಚ್ಚಾಟನೆ ಮಾಡಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಕೆ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಸೂಚನೆ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಇತ್ತೀಚೆಗೆ ನಾಗಮಂಗಲ ಕ್ಷೇತ್ರ ಕಾರ್ಯಕರ್ತೆಯೊಬ್ಬರಿಗೆ ಕರೆ ಮಾಡಿದ್ದ ಎಲ್‌.ಆರ್‌.ಶಿವರಾಮೇಗೌಡ ಅವರು, ದಿವಂಗತ ಜಿ.ಮಾದೇಗೌಡರ ಬಗ್ಗೆ ಅವಹೇಳನಕರ ರೀತಿಯಲ್ಲಿ ಮಾತನಾಡಿದ್ದರು. ಅದರ ವಿಡಿಯೋ ವೈರಲ್‌ ಆಗಿತ್ತು. ಶಿವರಾಮೇಗೌಡರ ಈ ಹೇಳಿಕೆ ಜೆಡಿಎಸ್‌ ಪಕ್ಷಕ್ಕೆ ಮುಜುಗರ ತಂದೊಡ್ಡಿತ್ತು. ಹೀಗಾಗಿ, ಶಿವರಾಮೇಗೌಡರನ್ನು ಪಕ್ಷದಿಂದ ಕಿತ್ತೊಗೆಯಿರಿ ಎಂದು ಹೆಚ್‌.ಡಿ.ಕುಮಾರಸ್ವಾಮಿಯವರು ಸೂಚನೆ ನೀಡಿದ್ದರು.

ಮಾಜಿ ಸಿಎಂ ಕುಮಾರಸ್ವಾಮಿಯವರ ಸೂಚನೆ ಹಿನ್ನೆಲೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಕೆ.ಕುಮಾರಸ್ವಾಮಿಯವರು, ಶಿವರಾಮೇಗೌಡರನ್ನು ಉಚ್ಚಾಟಿಸಿದ್ದಾರೆ.

 

Share Post