Politics

ಮಾಜಿ ಸಿಎಂ ಸದಾನಂದಗೌಡ ಕಾಂಗ್ರೆಸ್‌ ಸೇರುತ್ತಾರಾ..?; ಡಿ.ಕೆ.ಶಿವಕುಮಾರ್‌ ಈ ಬಗ್ಗೆ ಹೇಳಿದ್ದೇನು..?

ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಮತ್ತೆ ಪಕ್ಷಾಂತರ ವಿಚಾರದ ಮುನ್ನೆಲೆಗೆ ಬಂದಿದೆ. ಈ ಹಿಂದೆಯೇ ಮಾಜಿ ಸಿಎಂ ಡಿ.ವಿ.ಸದಾನಂದಗೌಡರು ಕಾಂಗ್ರೆಸ್‌ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು.. ಈಗ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಮತ್ತೊಮ್ಮೆ ಟಿಕೆಟ್‌ ಬಯಸಿದ್ದಾರೆ.. ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರೆ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕೂಡಾ ಸಕಾರಾತ್ಮಕ ರೀತಿಯಲ್ಲಿ ಮಾತನಾಡಿದ್ದಾರೆ.. ಹೀಗಾಗಿ, ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ; ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್‌, ಟ್ರಂಪ್‌ ಫೈಟ್‌

ಬಹಳಷ್ಟು ಜನ ಭೇಟಿಯಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌;

ಮಾಜಿ ಸಿಎಂ ಸದಾನಂದಗೌಡರು ಎರಡು ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವರೂ ಆಗಿದ್ದರು.. ಇದೀಗ ಮತ್ತೆ ಅವರು ಟಿಕೆಟ್‌ ಬಯಸಿದ್ದಾರೆ.. ಆದ್ರೆ ಬಿಜೆಪಿ ಹೈಕಮಾಂಡ್‌ ಅವರಿಗೆ ಟಿಕೆಟ್‌ ನೀಡೋದು ಡೌಟು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದಾನಂದಗೌಡರು ಮುನಿಸಿಕೊಂಡು ಕಾಂಗ್ರೆಸ್‌ ಸೇರುತ್ತಾರೆ ಎಂದು ಗುಸುಗುಸು ಸದ್ದು ಕೇಳಿಬರುತ್ತಿದೆ. ಈ ಬಗ್ಗೆ ಡಿ.ಕೆ.ಶಿವಕುಮಾರ್‌ ಕೂಡಾ ಅಚ್ಚರಿ ಹೇಳಿಕೆ ನೀಡಿದ್ದಾರೆ. ಬಹಳಷ್ಟು ನಮ್ಮನ್ನು ಸಂಪರ್ಕ ಮಾಡುತ್ತಿದ್ದಾರೆ.. ಸದಾನಂದಗೌಡರು ಕಾಂಗ್ರೆಸ್‌ ಸೇರುತ್ತಾರೆ ಅಂದ್ರೆ ನಾವು ಸ್ವಾಗತ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ; Rameshwaram cafe Case; ಸ್ಫೋಟಕ್ಕೂ ಮೊದಲ ಟ್ರಯಲ್‌ ಬ್ಲಾಸ್ಟ್‌ ಮಾಡಿದ್ದನಂತೆ ಶಂಕಿತ; ಆತ ಕರ್ನಾಟಕದವನೇನಾ..?

ಹಾಲಿ ಬಿಜೆಪಿ ಸಂಸದರು ಕಾಂಗ್ರೆಸ್‌ಗೆ ಬರುತ್ತಾರೆ ಎಂದ ಡಿಕೆಶಿ;

ಕಲಬುರಗಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ.. ನಿನ್ನೆ ಜಯಪ್ರಕಾಶ್‌ ಹೆಗ್ಡೆ ಹಾಗೂ ಎಂಪಿ ಕುಮಾರಸ್ವಾಮಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಇನ್ನೂ ಒಂದಷ್ಟು ಹಾಲಿ ಸಂಸದರು ಕಾಂಗ್ರೆಸ್‌ಗೆ ಬರಲಿದ್ದಾರೆ. ನಮ್ಮನ್ನು ಸಂಪರ್ಕ ಮಾಡುತ್ತಿದ್ದಾರೆ.. ಅವರ ಹೆಸರು ಈಗ ಬಹಿರಂಗ ಮಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅವರ ಮಾತಿನಲ್ಲಿ ಬಿಜೆಪಿಯಿಂದ ಬಂಡೆದ್ದು ಬರುವವರಿಗಾಗಿ ಕಾಂಗ್ರೆಸ್‌ ಕಾಯುತ್ತಿದೆ ಎನ್ನುವ ಅರ್ಥವಿದ್ದಂತೆ ಕಾಣುತ್ತಿತ್ತು.

ಇದನ್ನೂ ಓದಿ; Water Crisis; ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ; ಇವರಿಗೆಲ್ಲಾ ಶೇ.20ರಷ್ಟು ನೀರು ಕಟ್‌!

ಮಾರ್ಚ್‌ 15ಕ್ಕೆ ಕಾಂಗ್ರೆಸ್‌ ಮೂರನೇ ಪಟ್ಟಿ ರಿಲೀಸ್‌;

ಇನ್ನು ನಿನ್ನೆ ಕಾಂಗ್ರೆಸ್‌ ಎರಡನೇ ಪಟ್ಟಿ ರಿಲೀಸ್‌ ಮಾಡಲಾಗಿದೆ.. ಅದ್ರಲ್ಲಿ ರಾಜ್ಯದ ಯಾವ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಆದ್ರೆ ಮಾರ್ಚ್‌ 15ರಂದು ಮೂರನೇ ಪಟ್ಟಿ ರಿಲೀಸ್‌ ಆಗಲಿದ್ದು, ಅದರಲ್ಲಿ ರಾಜ್ಯ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಉತ್ತಮ ಅಭ್ಯರ್ಥಿ ಸಿಗುತ್ತಿಲ್ಲ. ಈ ಬೆನ್ನಲ್ಲೇ ಸದಾನಂದಗೌಡ ಹೆಸರು ಕೇಳಿಬರುತ್ತಿದೆ.. ಸದಾನಂದಗೌಡರು ಕಾಂಗ್ರೆಸ್‌ಗೆ ಬಂದರೆ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತದಾ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ; ಕಾಂಗ್ರೆಸ್ ಗೆ ಕೆಲವೆಡೆ ಅಭ್ಯರ್ಥಿಗಳಿಲ್ಲ; ಇದ್ದರೂ ಗೆಲ್ಲೋ ವಿಶ್ವಾಸವಿಲ್ಲ!

 

Share Post