ಶಂಕಿತ ಉಗ್ರನನ್ನು ಸಂಪರ್ಕಿಸಿದ್ದ ಯುವಕ ಸಿಕ್ಕಿಬಿದ್ದ; ಬಾಂಬರ್ ಹಿಡಿಯೋದು ಈಗ ಸುಲಭ!
ಬಳ್ಳಾರಿ; ಮಾರ್ಚ್ 1 ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಮಹತ್ವದ ಸುಳಿವನ್ನು ಪತ್ತೆ ಹಚ್ಚಿದ್ದಾರೆ.. ಬಳ್ಳಾರಿಯಲ್ಲಿ ಯುವಕನೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಆತ ಶಂಕಿತ ಉಗ್ರನ ಸಂಪರ್ಕ ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬೆಂಗಳೂರಿಗೆ ಕರೆತಂದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ; ಮಾಜಿ ಸಿಎಂ ಸದಾನಂದಗೌಡ ಕಾಂಗ್ರೆಸ್ ಸೇರುತ್ತಾರಾ..?; ಡಿ.ಕೆ.ಶಿವಕುಮಾರ್ ಈ ಬಗ್ಗೆ ಹೇಳಿದ್ದೇನು..?
ಬುಡಾ ಕಾಂಪ್ಲೆಕ್ಸ್ ಬಳಿ ಶಂಕಿತ ಉಗ್ರನ ಭೇಟಿ;
ಬೆಂಗಳೂರು ರಾಮೇಶ್ವರಂ ಕೆಫೆ ಬಳಿ ಸ್ಫೋಟಕ ಇಟ್ಟ ಬಳಿಕ ಶಂಕಿತ ಉಗ್ರ ಬಳ್ಳಾರಿಗೆ ಬಂದಿದ್ದ.. ಸಿಸಿಟಿವಿ ದೃಶ್ಯಾವಳಿಯಲ್ಲಿ ಇದು ಸೆರೆಯಾಗಿದೆ. ಇದರ ಆಧಾರದ ಮೇಲೆ ತನಿಖೆ ನಡೆಸಿದಾಗ ಶಂಕಿತ ಉಗ್ರನನ್ನು ಬುಡಾ ಕಾಂಪ್ಲೆಕ್ಸ್ ಬಳಿ ಶಬ್ಬೀರ್ ಎಂಬಾತನನ್ನು ಭೇಟಿ ಮಾಡಿದ್ದ. ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ದೃಶ್ಯ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಬಳ್ಳಾರಿಯಲ್ಲಿ ಶಬ್ಬೀರ್ ನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಆತನನ್ನು ಬೆಂಗಳೂರಿಗೆ ಕರೆತಂದಿದ್ದಾರೆ. ಶಬ್ಬೀರ್ ಶಂಕಿತ ಉಗ್ರನನ್ನು ಫೋನ್ ನಲ್ಲೂ ಸಂಪರ್ಕ ಮಾಡಿದ್ದ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಬ್ಬೀರ್‌ಗೂ ರಾಮೇಶ್ವರಂ ಕೆಫೆ ಬಳಿ ಸ್ಫೋಟ ನಡೆಸಿದ ವ್ಯಕ್ತಿಗೂ ನಂಟಿದೆ. ಆತನ ಬಗ್ಗೆ ಮಾಹಿತಿ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್, ಟ್ರಂಪ್ ಫೈಟ್
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶಬ್ಬೀರ್;
ಎನ್‌ಐಎ ವಶಕ್ಕೆ ಪಡೆದಿರುವ ಶಬ್ಬೀರ್ ತೋರಣಗಲ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಬ್ಲಾಸ್ಟ್ ನಡೆದ ದಿನ ರಾತ್ರಿ 9 ಗಂಟೆ 10 ನಿಮಿಷಕ್ಕೆ ಬಳ್ಳಾರಿಯ ಬುಡಾ ಕಾಂಪ್ಲೆಕ್ಸ್ ಬಳಿ ಶಂಕಿತ ಉಗ್ರನನ್ನು ಭೇಟಿ ಮಾಡಿದ್ದಾನೆ. ಆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದರ ಆಧಾರದ ಮೇಲೆ ತನಿಖೆ ಮುಂದುವರೆಸಲಾಗಿದೆ. ಎನ್‌ಐಎ ಅಧಿಕಾರಿಗಳು ಶಬ್ಬೀರ್ ನ ಹಿನ್ನೆಲೆಯನ್ನು ಕೆದಕುತ್ತಿದ್ದು, ಈ ಹಿಂದೆ ಏನಾದರೂ ಇಂತಹ ಕೃತ್ಯಗಳನ್ನು ಭಾಗಿಯಾಗಿದ್ದನಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಆತನ ಫೋನ್‌ನಲ್ಲಿರುವ ನಂಬರ್‌ಗಳನ್ನು ಕೂಡಾ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತ ಬಾಂಬರ್ ಶಬ್ಬೀರ್‌ಗೆ ಅಣ್ಣನ ಮಕ್ಕಳಿಂದ ಪರಿಚಯವಾಗಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ; Water Crisis; ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ; ಇವರಿಗೆಲ್ಲಾ ಶೇ.20ರಷ್ಟು ನೀರು ಕಟ್!
ಶಂಕಿತ ಉಗ್ರ ತಿರುಪತಿ ಅಥವಾ ಹೈದರಾಬಾದ್‌ನಲ್ಲಿರುವ ಶಂಕೆ;
ಶಂಕಿತ ಉಗ್ರ ಒಂದು ಕಡೆ ನಿಲ್ಲುತ್ತಿಲ್ಲ. ದಿನವೂ ಸ್ಥಳ ಬದಲಾವಣೆ ಮಾಡುತ್ತಿದ್ದಾನೆ. ಈಗ ಆತ ತಿರುಪತಿ ಅಥವಾ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ದಿನ ಶಂಕಿತ ಉಗ್ರ ಚೆನ್ನೈನಿಂದ ತಿರುಪತಿಗೆ ರೈಲಿನಲ್ಲಿ ಬಂದಿದ್ಧಾನೆ. ಅಲ್ಲಿಂದ ಆತ ಬಸ್‌ನಲ್ಲಿ ಬೆಂಗಳೂರಿನ ಕೆಆರ್ ಪುರಂಗೆ ಬಂದಿದ್ದಾನೆ. ಅಲ್ಲಿ ಇಳಿದು ಬಿಎಂಟಿಸಿ ಬಸ್ ಹಿಡಿದು ರಾಮೇಶ್ವರಂ ಕೆಫೆಗೆ ಬಂದಿದ್ದ ಎಂದು ತಿಳಿದುಬಂದಿದೆ. ಸ್ಫೋಟ ಇಟ್ಟ ಮೇಲೆ ಆತ ಬಳ್ಳಾರಿಗೆ ಬಂದಿದ್ದ ಅನ್ನೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.