NationalPolitics

ರಾಹುಲ್‌ ಗಾಂಧಿ ಅಂಬಾನಿ, ಅದಾನಿ ಹೆಸರೆತ್ತುತ್ತಿಲ್ಲ ಯಾಕೆ..?; ಪ್ರಧಾನಿ ಮೋದಿ ಪ್ರಶ್ನೆ

ತೆಲಂಗಾಣದ ವೇಮುಲವಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿದರು. ಈ ವೇಳೆ ಅಂಬಾನಿ ಮತ್ತು ಅದಾನಿ ಹೆಸರನ್ನು ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮೋದಿ ಟೀಕಿಸಿದರು.

”ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಯುವರಾಜ ಎದ್ದಾಗಿನಿಂದ ಅದೇ ಜಪ ಮಾಡ್ತಿದ್ದಾರೆ. ರಫೇಲ್ ಕೇಸ್ ವಜಾಗೊಂಡಾಗಿನಿಂದಲೂ ಅವರು ಹೊಸ ಜಪ ಮಾಡುತ್ತಿದ್ದಾರೆ. ಐವರು ಕೈಗಾರಿಕೋದ್ಯಮಿಗಳು.. ಐವರು ಕೈಗಾರಿಕೋದ್ಯಮಿಗಳು.. ಐವರು ಕೈಗಾರಿಕೋದ್ಯಮಿಗಳು.. ಅದರ ನಂತರ ಅವರು ಅಂಬಾನಿ – ಅದಾನಿ, ಅಂಬಾನಿ – ಅದಾನಿ ಎಂದು ಹೇಳಲು ಪ್ರಾರಂಭಿಸಿದರು.

ಆದರೆ, ಚುನಾವಣೆ ಸಮೀಪಿಸುತ್ತಿದ್ದಂತೆ ಅವರು ಅಂಬಾನಿ ಮತ್ತು ಅದಾನಿಯನ್ನು ಹೆಸರು ಪ್ರಸ್ತಾಪಿಸುವುದನ್ನೇ ನಿಲ್ಲಿಸಿದ್ದಾರೆ. ಇಂದು ನಾನು ತೆಲಂಗಾಣದಿಂದ ಕೇಳುತ್ತಿದ್ದೇನೆ. ಅಂಬಾನಿ ಮತ್ತು ಅದಾನಿಯಿಂದ ಎಷ್ಟು ಹಣ ಸಂಗ್ರಹಿಸಿದ್ದಾರೆ ಎನ್ನುವುದನ್ನು ಪ್ರಿನ್ಸ್ ಹೇಳಬೇಕು. ಎಷ್ಟು ಚೀಲ ಕಪ್ಪು ಹಣ ಅವರಿಗೆ ಬಂದಿದೆ..? ನೋಟುಗಳು ಕಾಂಗ್ರೆಸ್ ಪಕ್ಷಕ್ಕೆ ತಲುಪಿವೆಯೇ?” ಎಂದು ಬಹಿರಂಗ ಸಭೆಯಲ್ಲಿ ಮೋದಿ ಪ್ರಶ್ನಿಸಿದರು.

“ಏನು ಒಪ್ಪಂದ? ರಾತ್ರೋರಾತ್ರಿ ಅಂಬಾನಿ ಮತ್ತು ಅದಾನಿಯನ್ನು ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಅದರಲ್ಲಿ ಖಂಡಿತವಾಗಿಯೂ ಏನೋ ಒಂದು ಮತಲಬ್‌ ಇದೆ. ಅಂಬಾನಿ ಮತ್ತು ಅದಾನಿಯನ್ನು ಐದು ವರ್ಷಗಳ ಕಾಲ ನಿಂದಿಸಲಾಯಿತು ಮತ್ತು ರಾತ್ರೋರಾತ್ರಿ ಎಲ್ಲವನ್ನೂ ನಿಲ್ಲಿಸಲಾಯಿತು. ಅಂದರೆ, ನೀವು ಟೆಂಪೋ ತುಂಬಿದ ಹಣವನ್ನು ಸ್ವೀಕರಿಸಿದ್ದೀರಿ. ನೀವು ದೇಶದ ಜನತೆಗೆ ಉತ್ತರ ನೀಡಬೇಕು,” ಎಂದು ಮೋದಿ ಹೇಳಿದರು.

ಅಂಬಾನಿ-ಅದಾನಿ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಹಳ ದಿನಗಳಿಂದ ಪ್ರಧಾನಿ ಮೋದಿಯವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅದಾನಿ ಗ್ರೂಪ್‌ಗೆ ಸಹಾಯ ಮಾಡಲು ಸರ್ಕಾರ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಒಂದು ವರ್ಷದ ಹಿಂದೆ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಗೌತಮ್ ಅದಾನಿ ಅವರೊಂದಿಗೆ ವಿಮಾನದಲ್ಲಿ ಕುಳಿತಿರುವ ಫೋಟೋಗಳನ್ನು ಸಂಸತ್ತಿನಲ್ಲಿ ಪ್ರದರ್ಶಿಸಿದ್ದರು. ಆ ಫೋಟೋಗಳನ್ನು ತೋರಿಸಿದ ರಾಹುಲ್ ಗಾಂಧಿ, ಗೌತಮ್ ಅದಾನಿ ಮತ್ತು ಪ್ರಧಾನಿ ಮೋದಿಯವರ ಸಂಬಂಧವನ್ನು ಪ್ರಶ್ನಿಸಿದರು.

Share Post