CrimeDistricts

ಶಿವಮೊಗ್ಗದಲ್ಲಿ ನಡುರಸ್ತೆಯಲ್ಲೇ ಗ್ಯಾಂಗ್‌ ವಾರ್‌; ಇಬ್ಬರ ಬರ್ಬರ ಹತ್ಯೆ

ಶಿವಮೊಗ್ಗ; ಶಿವಮೊಗ್ಗದಲ್ಲಿ ರೌಡಿ ಶೀಟರ್‌ ಕಾಳಗಗಳು ಹೆಚ್ಚಾಗುತ್ತಲೇ ಇವೆ.. ಇಂದೂ ಕೂಡಾ ಶಿವಮೊಗ್ಗ ನಗರದಲ್ಲಿ ಗ್ಯಾಂಗ್‌ ವಾರ್‌ ನಡೆದಿದ್ದು, ಇದರಲ್ಲಿ ಇಬ್ಬರು ಹತರಾಗಿದ್ದಾರೆ.. ನಡು ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.. ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಈ ಕೃತ್ಯ ಎಸಗಲಾಗಿದೆ..
ಶೋಹೆಬ್ ಅಲಿಯಾಸ್​​ ಸೇಬು ಎಂಬ ರೌಡಿ ಶೀಟರ್‌ ಭೀಕರವಾಗಿ ಹತ್ಯೆಯಾಗಿದ್ದಾನೆ.. ಇನ್ನೊಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ.. ರೌಡಿ ಶೀಟರ್ ಶೋಹೆಬ್ ಮೇಲೆ ಯಾಸೀನ್ ಕುರೇಶಿ ಗ್ಯಾಂಗ್ ಅಟ್ಯಾಕ್ ಮಾಡಿದೆ.. ಈ ವೇಳೆ ಪ್ರತಿದಾಳಿಯೂ ನಡೆದಿದೆ ಎಂದು ತಿಳಿದುಬಂದಿದೆ.. ಮಾರಕಾಸ್ತ್ರಗಳಿಂದ ಅಟ್ಯಾಕ್‌ ಮಾಡಿದ್ದಲ್ಲದೆ, ಚಪ್ಪಡಿ ಕಲ್ಲು ಎತ್ತಿಹಾಕಿ ಭೀರಕವಾಗಿ ಹತ್ಯೆ ಮಾಡಲಾಗಿದೆ.. ರೌಡಿ ಶೀಟರ್ ಯಾಸೀನ್ ಕುರೇಶಿ ಜಸ್ಟ್​ ಮಿಸ್​ ಆಗಿದ್ದಾನೆ. ರೌಡಿ ಶೀಟರ್ ಯಾಸೀನ್ ಕುರೇಶಿಗೂ ಕೂಡ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

Share Post