ಮಗುವಿಗೆ ಜನ್ಮ ನೀಡಿದ 13 ವರ್ಷದ ಬಾಲಕಿ; ಅಪರಾಧಿ ಹುಡುಕಲು DNA ಪರೀಕ್ಷೆ!
ಮಧ್ಯಪ್ರದೇಶ; 13 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಇದಕ್ಕೆ ಕಾರಣನಾದ ವ್ಯಕ್ತಿಗಾಗಿ ಹುಡುಕಾಟ ನಡೆದಿದೆ.. ಪೊಲೀಸರು ಡಿಎನ್‌ಎ ಪರೀಕ್ಷೆ ಮೂಲಕ ಆರೋಪಿಯನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ..
ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ತಾಯಿಯ ಜೊತೆ ಇದ್ದ 13 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.. ಮಗು ಹಾಗು ತಾಯಿ ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದಾರೆ.. ಬಾಲಕಿ ತಾಯಿ ಮಗುವನ್ನು ಸಾಕುವುದಕ್ಕೆ ನಿರಾಕರಿಸಿದ್ದಾರೆ.. ಹೀಗಾಗಿ ಮಗುವನ್ನು ಶಿಶು ಕಲ್ಯಾಣ ಸಮಿತಿಯವರು ಮಗುವನ್ನು ಸಾಕಲು ನಿರ್ಧಾರ ಮಾಡಿದ್ದಾರೆ..
ಬಾಲಕಿಯ ಸಹೋದರ ಹಾಗು ನೆರೆಹೊರೆಯ ಇಬ್ಬರ ಮೇಲೆ ಪೊಲೀಸರಿಗೆ ಅನುಮಾನವಿದೆ.. ಹೀಗಾಗಿ ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.. ಅವರ ಹೇಳಿಕೆಗಳನ್ನು ಆಧರಿಸಿ ಮುಂದಿನ ತೀರ್ಮಾನ ಮಾಡಲಾಗುತ್ತದೆ.. ಡಿಎನ್‌ಎ ಪರೀಕ್ಷೆಗೊಳಪಡಿಸಿ ಮಗುವಿನ ತಂದೆ ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಹೇಳಲಾಗುತ್ತಿದೆ..