ಬೆಂಗಳೂರಿನ ಆಸ್ಪತ್ರೆಗಳಲ್ಲೂ ನೀರಿಗಾಗಿ ಹಾಹಾಕಾರ; ಬತ್ತಿದ 7 ಸಾವಿರ ಬೋರ್‌ವೆಲ್‌ಗಳು!
ಬೆಂಗಳೂರು; ಬೆಂಗಳೂರಿನಲ್ಲಿ ಬೇಸಿಗೆ ಶುರುವಿನಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ.. ಇದರಿಂದಾಗಿ, ವರ್ಕ್ ಫ್ರಮ್ ಹೋಮ್ ಮಾಡುವವರು ಬೆಂಗಳೂರು ಬಿಟ್ಟು ಸ್ವಗ್ರಾಮಗಳಿಗೆ ಹೋಗಿದ್ದಾರೆ.. ಕೆಲವೊಂದು ಕಡೆ ಅನಿವಾರ್ಯವಾಗಿ ವರ್ಕ್‌ಫ್ರಂ ಹೋಮ್ ಕೊಟ್ಟು ಮನೆಗೆ ಕಳುಹಿಸಲಾಗಿದೆ.. ಇನ್ನೊಂದೆಡೆ ಕೈಗಾರಿಕೆಗಳಲ್ಲಿ ನೀರಿಲ್ಲದೆ ತೊಂದರೆಯಾಗುತ್ತಿದೆ.. ಇದಿಷ್ಟೇ ಆಗಿದ್ದರೆ ಓಕೆ ಅನ್ನಬಹುದಿತ್ತೇನೋ.. ಆದ್ರೆ ಇದೀಗ ಬೆಂಗಳೂರಿನ ಆಸ್ಪತ್ರೆಗಳಲ್ಲೂ ನೀರಿನ ಸಮಸ್ಯೆ ತಲೆದೋರಿದೆ.. ವೈದ್ಯರು, ರೋಗಿಗಳು, ಸಿಬಂದಿ ನೀರಿಲ್ಲದೆ ಪರದಾಡುತ್ತಿದ್ದಾರೆ..
ಇದನ್ನೂ ಓದಿ; ಬೆಂಗಳೂರಿನ ಶಾಲೆ ಬಳಿ ಜಿಲೆಟಿನ್ ಕಡ್ಡಿ, ಡಿಟೋನೇಟರ್‌ಗಳ ಪತ್ತೆ!
ನೀರು ಪೂರೈಸುವಂತೆ ಸರ್ಕಾರಕ್ಕೆ ಪತ್ರ;
ಬಹುತೇಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ನೀರಿನ ಅಭಾವ ಇದೆ.. ಬೇಸಿಗೆಯಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿರುವುದರಿಂದ ರೋಗಿಗಳ ಸಂಖ್ಯೆಯೂ ಅಧಿಕವಾಗಿದೆ.. ಇದರಿಂದಾಗಿ ಆಸ್ಪತ್ರೆಗಳಲ್ಲಿ ನೀರು ಹೆಚ್ಚು ಖರ್ಚಾಗುತ್ತಿದೆ.. ದಿನಕ್ಕೆ ಒಂದು ಬೆಡ್‌ಗೆ 40 ಲೀಟರ್ ನೀರು ಬೇಕು.. ಆದ್ರೆ ರೋಗಿಗಳು, ವೈದ್ಯರು ಹಾಗೂ ಸಿಬ್ಬಂದಿಗೆ ಬೇಕಾಗುವಷ್ಟು ನೀರು ಪೂರೈಕೆಯಾಗುತ್ತಿಲ್ಲ.. ಬೋರ್‌ವೆಲ್‌ಗಳು ಕೂಡಾ ಬತ್ತಿಹೋಗಿವೆ.. ಇದರಿಂದಾಗಿ ಆಸ್ಪತ್ರೆಗಳವರು ಪರದಾಡುತ್ತಿದ್ದಾರೆ.. ಹೀಗಾಗಿ ಸಮರ್ಪಕವಾಗಿ ಆಸ್ಪತ್ರೆಗಗಳಿಗೆ ನೀರು ಪೂರೈಸುವಂತೆ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದಿದೆ.. ಆದ್ರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ; ಸ್ವಂತ ಅಕ್ಕನನ್ನೇ ಮದುವೆಯಾದ ಭೂಪ; ಕಾರಣ ಕೇಳಿದ್ರೆ ಥೂ ಅಂತೀರಿ!
ಟ್ಯಾಂಕರ್ ನೀರು ಕೂಡಾ ಸಮಯಕ್ಕೆ ಸಿಗುತ್ತಿಲ್ಲ;
ಈ ಹಿಂದೆಯೂ ಆಗಾಗ ನೀರಿನ ಸಮಸ್ಯೆಯಾಗುತ್ತಿತ್ತು.. ಆಗ ಟ್ಯಾಂಕರ್‌ನವರಿಗೆ ಕರೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ನೀರು ತಂದು ಹಾಕುತ್ತಿದ್ದರು.. ಆದ್ರೆ ಈ ನೀರು ಬುಕ್ ಮಾಡಬೇಕಿದೆ.. ನಾವು ಹೀಗ ಹೇಳಿದರೆ ಎರಡು ಮೂರು ದಿನವಾದ ಮೇಲೆ ಟ್ಯಾಂಕರ್‌ನವರು ನೀರು ಪೂರೈಕೆ ಮಾಡುತ್ತಾರೆ.. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ತುಂಬಾನೇ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ; ಮಂಡ್ಯ ಬಳಿ ಬರೋಬ್ಬರಿ 1 ಕೋಟಿ ರೂಪಾಯಿ ವಶ!
ಪರೀಕ್ಷೆ ಸಮಯದಲ್ಲಿ ಶಾಲೆಗಳಲ್ಲೂ ನೀರಿಲ್ಲ;
ಈ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುತ್ತಿವೆ.. ಆದ್ರೆ ಈಗಲೂ ಶಾಲೆಗಳಲ್ಲಿ ನೀರಿನ ಸಮಸ್ಯೆ ಇದೆ.. ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಬಾಯಾರಿಕೆಯಾದರೆ ಕುಡಿಯುವ ನೀರು ಸಿಗದಂತಹ ಪರಿಸ್ಥಿತಿ ಇದೆ.. ಇನ್ನು ಟಾಯ್ಲೆಟ್‌ಗಳಲ್ಲೂ ನೀರು ಇಲ್ಲ.. ಇದರಿಂದ ವಿದ್ಯಾರ್ಥಿಗಳು ಕೂಡಾ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಶಾಲೆಗಳಲ್ಲಿ ನೀರಿನ ಸಮಸ್ಯೆ ದೊಡ್ಡದಾಗಿದ್ದು ವಿದ್ಯಾರ್ಥಿಗಳು ಶಿಕ್ಷಕರು ಪರದಾಡುತ್ತಿದ್ದಾರೆ. ಹೀಗಾಗಿ ಪರೀಕ್ಷೆಗಳು ಕಂಪ್ಲೀಟ್ ಮುಗಿಯುವವರೆಗೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೀರು ಪೂರೈಸುವಂತೆ ಶಾಲೆಗಳ ಒಕ್ಕೂಟದಿಂದ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ.
ಇದನ್ನೂ ಓದಿ; ಕಾಂಗ್ರೆಸ್ ಎರಡನೇ ಪಟ್ಟಿಗಾಗಿ ಸರ್ಕಸ್; ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು ನಗರಕ್ಕೆ ದಿನಕ್ಕೆ ಎಷ್ಟು ನೀರು ಬೇಕು..?
ಬೆಂಗಳೂರು ಮಹಾನಗರಕ್ಕೆ ದಿನಕ್ಕೆ ಕುಡಿಯುವ ನೀರಿಗೆ ಹಾಗೂ ಕೈಗಾರಿಕೆ ಉದ್ದೇಶಕ್ಕೆ 2600 ಮಿಲಿಯನ್ ಲೀಟರ್ ನೀರು ಬೇಕು. ಆದ್ರೆ ಇದರಲ್ಲಿ 500 ಮಿಲಿಯನ್ ಲೀಟರ್ ನೀರಿನ ಕೊರತೆಯಾಗಿದೆ.. ಹೀಗಂತ ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಕಾವೇರಿ ನದಿಯಿಂದ 1,450 ಎಂಎಲ್‌ಡಿ ಹಾಗೂ ಬೋರ್‌ವೆಲ್‌ಗಳಿಂದ 650 ಎಂಎಲ್‌ಡಿ ನೀರನ್ನು ನಗರಕ್ಕೆ ಪೂರೈಕೆ ಮಾಡಲಾಗುತ್ತಿತ್ತು. ಆದ್ರೆ ಈಗ ನೀರಿನ ಸಮಸ್ಯೆಯಾಗಿರುವುದರಿಂದ 500 ಎಂಎಲ್‌ಡಿ ನೀರಿನ ಕೊರತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; ಮಂಡ್ಯಕ್ಕೆ ಕುಮಾರಸ್ವಾಮಿಯೇ ಫಿಕ್ಸ್; ಅಖಾಡಕ್ಕೆ ರೆಡಿ ಅಂತಿದ್ದಾರೆ ಮಾಜಿ ಸಿಎಂ!
ಬತ್ತಿಹೋದ 7000 ಬೋರ್‌ವೆಲ್‌ಗಳು;
ಬೆಂಗಳೂರಿನಲ್ಲಿ ಒಟ್ಟು 14,000 ಬೋರ್‌ವೆಲ್‌ಗಳಿವೆ. ಇವುಗಳಲ್ಲಿ 6,900 ಬೋರ್‌ವೆಲ್‌ಗಳು ಬತ್ತಿ ಹೋಗಿವೆ.. ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಪೈಕಿ 55 ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಈ 110 ಗ್ರಾಮಗಳ ಅಗತ್ಯತೆಗಳನ್ನು ಪೂರೈಸಲು 775 ಎಂಎಲ್‌ಡಿ ನೀರು ಬೇಕಾಗಿದೆ. ಹೀಗಾಗಿ ಹೊಸದಾಗಿ 313 ಸ್ಥಳಗಳಲ್ಲಿ ಬೋರ್‌ವೆಲ್‌ಗಳನ್ನು ಹಾಕಿಸಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ; ರಾಜ್‌ಕುಮಾರ್ ಅವರಿಗೂ ರಾಜಕೀಯ ಬೇಕಿತ್ತು; ಶಿವರಾಜ್‌ಕುಮಾರ್