BengaluruNewsPolitics

ಚನ್ನಪಟ್ಟಣಕ್ಕೆ ಮೈತ್ರಿ ಅಭ್ಯರ್ಥಿ ಯಾರು..?; ನಿಖಿಲ್‌ ಹಿಂದೆ ಸರಿದರಾ..?

ಬೆಂಗಳೂರು; ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್‌ ಕಣಕ್ಕಿಳಿಯೋದು ಫಿಕ್ಸ್‌ ಆಗಿದೆ.. ನಾಳೆಯೇ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.. ಸಿ.ಪಿ.ಯೋಗೇಶ್ವರ್‌ ಕಾಂಗ್ರೆಸ್‌ ಸೇರುತ್ತಿದ್ದಂತೆ ಚನ್ನಪಟ್ಟಣದ ರಾಜಕೀಯ ಚಿತ್ರಣ ಬದಲಾಗಿದೆ.. ಸತತ ಎರಡು ಬಾರಿ ಚನ್ನಪಟ್ಣಣದಲ್ಲಿ ಸೋಲು ಕಂಡಿರುವ ಸಿ.ಪಿ.ಯೋಗೇಶ್ವರ್‌ ಅವರು ಕಾಂಗ್ರೆಸ್‌ ಸೇರಿ ಡಿ.ಕೆ.ಸಹೋದರರಿಗೆ ಶಕ್ತಿ ತುಂಬಿದ್ದಾರೆ.. ಚನ್ನಪಟ್ಟಣ ಗೆಲ್ಲಿಸಿಕೊಟ್ಟು, ಕುಮಾರಸ್ವಾಮಿಗೆ ಟಾಂಗ್‌ ಕೊಡಲು ಮುಂದಾಗಿದ್ದಾರೆ.. ಆದ್ರೆ ಈಗ ಜೆಡಿಎಸ್‌ ಅಭ್ಯರ್ಥಿ ಯಾರು ಅನ್ನೋದೇ ಪ್ರಶ್ನೆ..

    ಯೋಗೇಶ್ವರ್‌ ಒಪ್ಪೋದಾದರೆ ಜೆಡಿಎಸ್‌ ಚಿಹ್ನೆಯಡಿ ಸ್ಪರ್ಧೆ ಮಾಡೋದಕ್ಕೆ ಅವಕಾಶ ನೀಡಲು ಕುಮಾರಸ್ವಾಮಿ ರೆಡಿ ಇದ್ದರು.. ಆದ್ರೆ ಯೋಗೇಶ್ವರ್‌ ಯಾವ ಕಾರಣಕ್ಕೂ ಇದನ್ನು ಒಪ್ಪಲಿಲ್ಲ… ಬದಲಾಗಿ ಅವರು ಕಾಂಗ್ರೆಸ್‌ ಗಾಳಕ್ಕೆ ಬಿದ್ದಿದ್ದಾರೆ.. ಡಿಕೆ ಸಹೋದರರಿಗೆ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರ ನೇತೃತ್ವದ ಪಕ್ಷಕ್ಕೆ ಸೋಲುಣಿಸಬೇಕೆಂಬ ಛಲ ಇದೆ.. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸೋಲಿನ ಸೇಡು ತೀರಿಸಿಕೊಳ್ಳಲು ಡಿ.ಕೆ.ಸಹೋದರರು ನೇರ ಯೋಗೇಶ್ವರ್‌ರನ್ನು ಕರೆತಂದು ಕಣಕ್ಕಿಳಿಸುತ್ತಿದ್ದಾರೆ.. ಹೀಗಾಗಿ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ..

ಯೋಗೇಶ್ವರ್‌ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತೇನೆ ಎಂದಾಗಲೇ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡೋದಕ್ಕೆ ಹಿಂದೆ ಸರಿದಿದ್ದರು.. ಈಗಾಗಲೇ ಎರಡು ಬಾರಿ ಸೋಲು ಕಂಡಿರುವ ನಿಖಿಲ್‌ ಕುಮಾರಸ್ವಾಮಿಗೆ ಮೂರನೇ ಬಾರಿಗೆ ಸೋಲು ಕಂಡರೆ ಎಂಬ ಭಯ ಇದೆ.. ಈಗ ಬೇರೆ ಯೋಗೇಶ್ವರ್‌ ಕಾಂಗ್ರೆಸ್‌ ಸೇರಿದ್ದಾರೆ.. ಇದರಿಂದಾಗಿ ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳು ಹಾಗೂ ಯೋಗೇಶ್ವರ್‌ ಅವರ ಮತ ಬ್ಯಾಂಕ್‌ ಒಂದಾದಂತಾಗಿದೆ.. ಜೊತೆಗೆ ರಾಜ್ಯದಲ್ಲಿ ಆಡಳಿತದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದೆ.. ಹೀಗಾಗಿ ಕಾಂಗ್ರೆಸ್‌ ಪಕ್ಷಕ್ಕೇ ಉತ್ತಮ ವಾತಾವರಣ ಕಂಡುಬರುತ್ತಿದೆ.. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ನಿಖಿಲ್‌ ಕುಮಾರಸ್ವಾಮಿಯಾಗಲೀ, ಅನಿತಾ ಕುಮಾರಸ್ವಾಮಿಯಾಗಲೀ ಸ್ಪರ್ಧೆ ಮಾಡೋದು ಡೌಟು ಎಂದೇ ಹೇಳಲಾಗುತ್ತಿದೆ..

ಇಷ್ಟು ದಿನ ತಮ್ಮ ಕುಟುಂಬದಲ್ಲೇ ಒಬ್ಬರನ್ನು ಸ್ಪರ್ಧೆಗಿಳಿಸಲು ಕುಮಾರಸ್ವಾಮಿ ತಂತ್ರಗಾರಿಕೆ ಮಾಡುತ್ತಿದ್ದರು.. ಆದ್ರೆ ಈಗ ಆ ತಂತ್ರಗಾರಿಕೆ ಬದಲಾಗುವ ಸಾಧ್ಯತೆ ಇದೆ.. ಸಾಮಾನ್ಯ ಕಾರ್ಯಕರ್ತ ಎಂಬ ತಂತ್ರಗಾರಿಕೆ ಹುಟ್ಟಿಕೊಳ್ಳುವ ಸಾಧ್ಯತೆ ಇದೆ.. ಯಾರೇ ಸ್ಪರ್ಧಿಸಲಿ ನಾವು ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸುತ್ತೇನೆ ಎಂದು ಹೇಳಬಹುದು.. ತಮ್ಮ ಕುಟುಂಬದವರನ್ನು ಬಿಟ್ಟು ಚನ್ನಪಟ್ಟಣದ ಕಾರ್ಯಕರ್ತರೊಬ್ಬರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ..

 

Share Post