ಕಾಂಗ್ರೆಸ್‌ಗೆ ಕರೆತರುವಲ್ಲಿ ಡಿ.ಕೆ.ಸುರೇಶ್ ಪ್ರಮುಖ ಪಾತ್ರ; ಯೋಗೇಶ್ವರ್
ಬೆಂಗಳೂರು; ನಾವು ಯಾವುದೇ ಬೇಡಿಕೆ ಮುಂದಿಡದೇ ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ.. ಇನ್ನು ನಾನು ಪಕ್ಷ ಬದಲಿಸುವುದಿಲ್ಲ ಎಂದು ಸಿ.ಪಿ.ಯೋಗೇಶ್ವರ್ ಹೇಳಿದರು.. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ ನಂತರ ಅವರು ಮಾತನಾಡಿದರು.. ಡಿ.ಕೆ.ಸುರೇಶ್ ಅವರು ನನ್ನನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ..
ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜಕೀಯ ಜೀವ ಶುರು ಮಾಡಿದೆ. ನಂತರ ನಾನು ಪಕ್ಷದ ಬದಲಾವಣೆ ಮಾಡಿದ್ದೆ.. ಈಗ ನಾನು ಕಾಂಗ್ರೆಸ್ ಮರು ಸೇರ್ಪಡೆಯಾಗಿದ್ದೇನೆ.. ಇನ್ನು ನಾನು ಪಕ್ಷ ಬದಲಿಸೋದಿಲ್ಲ. ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂಬ ವಿಶ್ವಾಸ ಇದೆ ಎಂದು ಯೋಗೇಶ್ವರ್ ಹೇಳಿದ್ದಾರೆ.. ಜೆಡಿಎಸ್ ಎನ್‌ಡಿಎ ಸೇರ್ಪಡೆಯಾದ ಮೇಲೆ ನಮ್ಮ ಕ್ಷೇತ್ರದಲ್ಲಿ ನನಗೆ ಪೂರಕ ರಾಜಕೀಯ ವಾತಾವರಣ ಇರಲಿಲ್ಲ.. ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳು ನನಗೆ ಬೇಸರ ತರಿಸಿದ್ದವು.. ನಾವೇ ಕಟ್ಟಿದ ಮನೆಯಲ್ಲಿ ನಮಗೇ ವಾಸ ಮಾಡೋದಕ್ಕೆ ಆಗೋಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು.. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಸಿ.ಪಿ.ಯೋಗೇಶ್ವರ್ ಹೇಳಿದರು..
ಕಾಂಗ್ರೆಸ್ ಸರ್ಕಾರ ಹಲವಾರ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಂಡಿದೆ.. ನಮ್ಮ ಜಿಲ್ಲೆಯಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.. ನಾನೂ ಕೂಡಾ ಅದರ ಭಾಗವಾಗಬೇಕು.. ಅಭಿವೃದ್ಧಿ ದೃಷ್ಟಿಯಿಂದ ನಾನು ಕಾಂಗ್ರೆಸ್ ಸೇರಿದ್ದೇನೆ ಎಂದು ಯೋಗೇಶ್ವರ್ ಇದೇ ವೇಳೆ ಹೇಳಿದ್ದಾರೆ..