Bengaluru

ವೈಟ್ ಫೀಲ್ಡ್ ಕೆಐಎಡಿಬಿ ಭೂಮಿ ವ್ಯವಹಾರ ಅಪರ ಮುಖ್ಯ ಕಾರ್ಯದರ್ಶಿಯಿಂದ ತನಿಖೆ: ಸಚಿವ ನಿರಾಣಿ

ಬೆಂಗಳೂರು: ವೈಟ್‌ಫೀಲ್ಡ್‌ ಸಾದರಮಂಗಲ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ವತಿಯಿಂದ ಹಂಚಿಕೆ ಮಾಡಲಾದ ಭೂಮಿಯ ವ್ಯವಹಾರದ ಬಗ್ಗೆ ಅಪರ ಮುಖ್ಯುಕಾರ್ಯದರ್ಶಿಯಿಂದ ತನಿಖೆ ನಡೆಸುವುದಾಗಿ ಬೃಹತ್ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಬುಧವಾರ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆ ಕೇಳಿ, 1972ರಲ್ಲಿ ಕಾಡುಗೋಡಿ ಸರ್ವೆ ನಂಬರ್ 1 ನಿವೇಶನ ಸಂಖ್ಯೆ 6 ರಲ್ಲಿ 78 ಎಕರೆ ಜಮೀನನ್ನು ಸ್ಟೇರ್ ಇಂಡಿಯಾ ಸಂಸ್ಥೆಗೆ ನೀಡಲಾಗಿತ್ತು ಎಂದು ಹೇಳಿದರು. ಈ ಮಧ್ಯೆ ಆ ಸಂಸ್ಥೆ ಸ್ಟೇರ್ ಇಂಡಿಯಾ ಹೆಸರನ್ನು ಕಾನ್ ಕಾರ್ಡ್ ಎಂದು ಬದಲಾವಣೆ ಮಾಡಿಕೊಂಡಿದೆ. ವಿವಾದ ಸೃಷ್ಟಿಯಾಗಿ ಭೂಮಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಒಳಪಟ್ಟಿದೆ ಎಂದು ತಿಳಿಸಿದರು.

ಕಂಪೆನಿ ಈವೆಗೂ ಉತ್ಪಾದನೆ ಆರಂಭಿಸಿಲ್ಲ. ಉದ್ದೇಶ ಬದಲಾವಣೆ ಮಾಡಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮುಂದಾಗಿದೆ. ಈ ಹಗರಣವನ್ನು ಸದನ ಸಮಿತಿಯ ತನಿಖೆಗೆ ಒಳಪಡಿಸಬೇಕು ಎಂದು ಮರಿತಿಬ್ಬೇಗೌಡ ವಿವರಿಸಿದರು. ಸಚಿವ ನಿರಾಣಿ ಉತ್ತರ ನೀಡಿ, 52 ವರ್ಷದಿಂದ ಭೂಮಿ ವರ್ಗಾವಣೆ ವ್ಯವಹಾರ ನಡೆದಿದೆ. ಕೆಲವೊಂದು ಪ್ಲಾನ್ ಬದಲಾವಣೆ ಮಾಡಿದೆ, ಮೂರು ಎಕರೆ ಸಮಸ್ಯೆ ಇದೆ ಶೇ.30ರಷ್ಟು ಹಣ ಪಾವತಿಸಿ ಬಾಕಿ ಉಳಿಸಿಕೊಂಡ ಹಲವು ಪ್ರಕರಣಗಳು ಉಳಿದಿವೆ. ಅಂತಹದ್ದರಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಕೆಐಎಡಿಬಿಗೆ ಬಾಕಿ ಬರಬೇಕಿದೆ. ಮತ್ತೊಮ್ಮೆ ಕಡತವನ್ನು ಪರಿಶೀಲಿಸುತ್ತೇನೆ ಎಂದರು.

Share Post