NationalPolitics

ಎನ್‌ಡಿಎ ಮೈತ್ರಿ ಕಡಿದುಕೊಂಡ ಅಣ್ಣಾಡಿಎಂಕೆ; ತಮಿಳುನಾಡು ಬಿಜೆಪಿಗೆ ಬಿಗ್‌ ಶಾಕ್‌

ಚೆನ್ನೈ; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ಬಿಜೆಪಿಗೆ ಬಿಗ್‌ ಶಾಕ್‌ ಆಗಿದೆ. ಯಾಕಂದ್ರೆ, ಬಿಜೆಪಿ ನೇತೃತ್ವದ ಎನ್‌ಡಿಎನಲ್ಲಿ ಅಣ್ಣಾಡಿಎಂಕೆ ಪಕ್ಷ ಕೂಡಾ ಇತ್ತು. ಆದ್ರೆ ಇದೀಗ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಅಣ್ಣಾಡಿಎಂಕೆ ಪಾರ್ಟಿ ಕಡಿದುಕೊಂಡಿದೆ. ಇದರಿಂದಾಗಿ ತಮಿಳುನಾಡಿನಲ್ಲಿ ಬಿಜೆಪಿ ಏಕಾಂಗಿಯಾಗಿದೆ.

ಚೆನ್ನೈನಲ್ಲಿ ನಿನ್ನೆ ಎಐಎಡಿಎಂಕೆ ಪಕ್ಷದ ಸಭೆಯ ನಡೆಯಿತು. ಈ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಎನ್‌ಡಿಎನಿಂದ ಹೊರಬರೋದಕ್ಕೆ ಪಕ್ಷದ ನಾಯಕರು ಸರ್ವಾನುಮತದ ಅಂಗೀಕಾರ ಸೂಚಿಸಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಅವರು, ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಮಾತನಾಡಿದ್ದರು. ಇದರಿಂದಾಗಿ ಎಐಎಡಿಎಂಕೆ ನಾಯಕರಿಗೆ ನೋವಾಗಿತ್ತು. ಈ ಬಗ್ಗೆ ಎನ್‌ಡಿಎ ನಾಯಕರಿಗೆ ದೂರು ನೀಡಲಾಗಿತ್ತು. ಆದರೂ ಅಣ್ಣಾಮಲೈ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿ ಎಐಎಡಿಎಂಕೆ ಎನ್‌ಡಿಎನಿಂದ ಹೊರಬಂದಿದೆ.

 

Share Post