BengaluruPolitics

ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ಬೆಳಗಾವಿ ಸಾಹುಕಾರ್‌ಗೆ ಒಲಿಯುತ್ತಾ ಸಿಎಂ ಪಟ್ಟ..?

ಬೆಂಗಳೂರು; ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ ಕೇಸ್‌ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.. ಮುಡಾ ಕೇಸ್‌ನಿಂದ ಸಿದ್ದರಾಮಯ್ಯ ಸ್ಥಾನಕ್ಕೆ ಕಂಟಕ ಬರುತ್ತದೋ ಇಲ್ಲವೋ ಆದರೆ, ಸಿದ್ದರಾಮಯ್ಯ ಕುರ್ಚಿ ಕಳೆದುಕೊಂಡರೆ ಮುಂದೆ ಯಾರು ಎಂಬುದರ ಬಗ್ಗೆ ಅಂತೂ ಚರ್ಚೆ ನಡೆದಿದೆ.. ಕಾಂಗ್ರೆಸ್‌ನಲ್ಲೇ ಹಲವರು ನಾನೂ ಸಿಎಂ ಆಕಾಂಕ್ಷಿ ಎಂದು ಖರ್ಚೀಪ್‌ ಹಾಕಲು ಶುರು ಮಾಡಿದ್ದಾರೆ.. ಈ ನಡುವೆ ಸಿದ್ದರಾಮಯ್ಯ ಸ್ಥಾನ ತುಂಬುವ ನಾಯಕರು ಕಾಂಗ್ರೆಸ್‌ನಲ್ಲಿ ಯಾರಿದ್ದಾರೆ.. ಈ ಪರಿಸ್ಥಿತಿಗೆ ಯಾರು ಸೂಕ್ತ ಎಂಬ ವಿಚಾರ ಬಂದಾಗ ಎಲ್ಲರಿಗೂ ಕಾಣಿಸುತ್ತಿರುವುದು ಬೆಳಗಾವಿ ಸಾಹುಕಾರ್‌ ಸತೀಶ್‌ ಜಾರಕಿಹೊಳಿಯವರು..
ಸತೀಶ್‌ ಜಾರಕಿಹೊಳಿಯವರು ಸಿದ್ದರಾಮಯ್ಯನವರ ಪಾಳಯದಲ್ಲೇ ಬೆಳೆದವರು.. ಆದ್ರೆ ತಮ್ಮದೇ ಆದ ಇಮೇಜ್‌ ಬೆಳೆಸಿಕೊಂಡಿದ್ದಾರೆ.. ಅಹಿಂದ ನಾಯಕರ ವಿಶ್ವಾಸ ಗಳಿಸಿಕೊಂಡಿದ್ದಾರೆ.. ಜೊತೆಗೆ ಸಿದ್ದರಾಮಯ್ಯ ರೀತಿಯಲ್ಲೇ ಯಾವುದೇ ಕಳಂಕವನ್ನು ತನ್ನ ಮೈಮೇಲೆ ಎಳೆದುಕೊಂಡಿಲ್ಲ.. ಹೀಗಾಗಿ, ಸತೀಶ್‌ ಜಾರಕಿಹೊಳಿಯವರೇ ಸಿಎಂ ಸ್ಥಾನಕ್ಕೆ ಹೆಚ್ಚು ಸೂಕ್ತ ಎಂಬ ಚರ್ಚೆಗಳು ಶುರುವಾಗಿವೆ..
ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲಾ ದಲಿತ ಸಿಎಂ ಕೂಗೂ ಕೇಳಿಬರುತ್ತಲೇ ಇದೆ.. ದಲಿತರಿಗೆ ಸಿಎಂ ಪಟ್ಟ ಕಟ್ಟಿದರೆ ಕಾಂಗ್ರೆಸ್‌ ಶಕ್ತಿ ಮತ್ತಷ್ಟು ಹೆಚ್ಚಾಗುವುದು ಕೂಡಾ ಗ್ಯಾರೆಂಟಿ.. ಈ ಕಾರಣದಿಂದ ಈ ಬಾರಿ ಸಿಎಂ ಬದಲಾಗುವುದಾದರೆ ದಲಿತರಿಗೇ ಸಿಎಂ ಸ್ಥಾನ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಹಾಗೇನಾದರೂ ಆದರೆ ಸತೀಶ್‌ ಜಾರಕಿಹೊಳಿಗೇ ಸಿಎಂ ಸ್ಥಾನ ಸಿಗುವುದು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ.. ಯಾಕಂದ್ರೆ, ಕಾಂಗ್ರೆಸ್‌ನಲ್ಲೇ ಎಸ್‌ಟಿ ಸಮುದಾಯದ 15 ಶಾಸಕರಿದ್ದಾರೆ.. ಇವರೆಲ್ಲರ ಬೆಂಬಲ ಸತೀಶ್‌ ಜಾರಕಿಹೊಳಿಗೆ ಸಿಗಲಿದೆ.. ಇದರ ಜೊತೆಗೆ ಅಹಿಂದ ಸಮುದಾಯಗಳ 35ಕ್ಕೂ ಹೆಚ್ಚು ಶಾಸಕರಿದ್ದು, ಅವರ ಬೆಂಬಲವೂ ಸತೀಶ್‌ ಜಾರಕಿಹೊಳಿಗೆ ಸಿಗುವುದರಲ್ಲಿ ಅನುಮಾನವಿಲ್ಲ.. ಅಂದರೆ 50ಕ್ಕೂ ಹೆಚ್ಚು ಶಾಸಕರ ಬೆಂಬಲ ಸತೀಶ್‌ ಜಾರಕಿಹೊಳಿಗೆ ಸಿಗುವುದು ಬಹುತೇಕ ಪಕ್ಕಾ.. ಆದ್ರೆ ಅಷ್ಟೊಂದು ಶಾಸಕರ ಬೆಂಬಲ ಪಡೆಯುವ ಮತ್ತೊಬ್ಬ ನಾಯಕ ಸದ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಇಲ್ಲ.. ಹೀಗಾಗಿ, ಸಿಎಂ ಸ್ಥಾನ ತುಂಬುವ ಶಕ್ತಿ ಸತೀಶ್‌ ಜಾರಕಿಹೊಳಿಗೆ ಇದೆ ಎಂದೇ ಚರ್ಚೆ ನಡೆಯುತ್ತಿದೆ..
ಸತೀಶ್‌ ಜಾರಕಿಹೊಳಿಯವರು 1998ರಲ್ಲಿ ಮೊದಲ ಬಾರಿ ಶಾಸಕರಾದರು. ಅಂದಿನಿಂದ ಅವರು ಯಾವುದೇ ದೊಡ್ಡ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿಲ್ಲ.. ಅಷ್ಟೇ ಏಕೆ ಹಲವು ಹುದ್ದೆಗಳನ್ನು ಅಲಂಕರಿಸಿದರೂ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ.. ಮೌಢ್ಯ ವಿರೋಧಿ ಹೋರಾಟದ ಜೊತೆಗೆ ಸತೀಶ್‌ ಜಾರಕಿಹೊಳಿ ನಾಯಕರಾಗಿ ಹೊರಹೊಮ್ಮಿದ್ದಾರೆ.. ಇವರಿಗೆ ರಾಜ್ಯಾದ್ಯಂತ ದೊಡ್ಡ ಜನಬಲವಿದೆ.. ಬೆಳಗಾವಿ ಭಾಗದಲ್ಲಂತೂ ಇವರದ್ದೇ ಸಾಮ್ರಾಜ್ಯ.. ಹೆಚ್ಚು ವಿವಾದಿತ ಹೇಳಿಕೆ ನೀಡದ, ಸದಾ ಸೌಮ್ಯವಾಗಿರುವ ಇವರು ಸೈಲೆಂಟಾಗೇ ತಂತ್ರಗಾರಿಕೆಗಳನ್ನು ಮಾಡುತ್ತಾರೆ.. ಕಾಂಗ್ರೆಸ್‌ ಹೈಕಮಾಂಡ್‌ಗೂ ಇವರು ಹತ್ತಿರವಾಗಿದ್ದಾರೆ.. ಜನಬಲದ ಜೊತೆಗೆ ಇವರಿಗೆ ಹಣಬಲವೂ ಇದೆ..
ರಾಜ್ಯದಲ್ಲಿ ಅಹಿಂದ ಸಂಘಟನೆ ದೊಡ್ಡ ಮಟ್ಟದಲ್ಲಿ ಬೆಳೆಯೋದಕ್ಕೆ ಇವರೂ ಕೂಡಾ ಪ್ರಮುಖ ಕಾರಣ.. ಹೀಗಾಗಿ ರಾಜ್ಯಾದ್ಯಂತ ಅಹಿಂದ ನಾಯಕರು ಸತೀಶ್‌ ಜಾರಕಿಹೊಳಿಯವರ ಬೆನ್ನಿಗೆ ನಿಲ್ಲುವುದರಲ್ಲಿ ಅನುಮಾನವಿಲ್ಲ.. ಹೀಗಾಗಿ ಸಿಎಂ ಸ್ಥಾನ ಸತೀಶ್‌ ಜಾರಕಿಹೊಳಿ ಸೂಕ್ತ ಎಂಬ ಮಾತುಗಳು ಕೇಳಿಬರುತ್ತಿವೆ..

Share Post