ಪ್ರಚಾರ ವಾಹನದಿಂದ ಬಿದ್ದ ತೆಲಂಗಾಣ ಸಿಎಂ ಪುತ್ರ ಕೆಟಿಆರ್
ಹೈದರಾಬಾದ್; ಚುನಾವಣಾ ಪ್ರಚಾರದ ವೇಳೆ ತೆಲಂಗಾಣ ಸಿಎಂ ಚಂದ್ರಶೇಖರರಾವ್ ಅವರ ಪುತ್ರ ಹಾಗೂ ಸಚಿವ ಕೆಟಿಆರ್ ಅವರು ಪ್ರಚಾರ ವಾಹನದಿಂದ ಬಿದ್ದಿದ್ದಾರೆ. ರೋಡ್ ಶೋ ಮಾಡುತ್ತಿದ್ದ ವೇಳೆ ವಾಹನದ ಡ್ರೈವರ್ ದಿಢೀರ್ ಅಂತ ಬ್ರೇಕ್ ಹಾಕಿದ್ದರಿಂದಾಗಿ ಕೆಟಿಆರ್ ಹಾಗೂ ವಾಹನದಲ್ಲಿದ್ದ ಇತರ ನಾಯಕರು ಮುದ್ದಕ್ಕೆ ಬಿದ್ದಿದ್ದಾರೆ.
ನಿಜಾಮಾಬಾದ್ ಜಿಲ್ಲೆ ಆರ್ಮೂರುನಲ್ಲಿ ನಾಮಪತ್ರ ಸಲ್ಲಿಸುವ ರ್ಯಾಲಿ ವೇಳೆ ಈ ಘಟನೆ ನಡೆದಿದೆ. ಆರ್ಮೂರು ಪಟ್ಟಣದ ಹಳೆ ಆಲೂರು ರಸ್ತೆಯಲ್ಲಿ ಘಟನೆ ನಡೆದಿದೆ. ರಾಜ್ಯಸಭಾ ಸದಸ್ಯ ಸುರೇಶ್ ರೆಡ್ಡಿ ಹಾಗೂ ಶಾಸಕ ಜೀವನ್ ರೆಡ್ಡಿ ರಥದಿಂದ ಕೆಳಗೆ ಬಿದ್ದರೆ, ಕೆಟಿಆರ್ ವಾಹನದ ಮೇಲೆ ಬಿದ್ದಿದ್ದಾರೆ. ಅಪಘಾತದಲ್ಲಿ ಕೆಟಿಆರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಯಾರಿಗೂ ಏನೂ ತಿಳಿಯದ ಕಾರಣ ಜೀವನ್ ರೆಡ್ಡಿ ಜತೆಗೆ ಕೆಟಿಆರ್ ನಾಮಪತ್ರ ಸಲ್ಲಿಕೆ ಕೇಂದ್ರಕ್ಕೆ ತೆರಳಿದ್ದರು. ಈ ಘಟನೆ ಕುರಿತು ಸಚಿವ ಕೆಟಿಆರ್ ಪ್ರತಿಕ್ರಿಯಿಸಿದ್ದಾರೆ.