Politics

ಶ್ರೀಗಳು ಆಶೀರ್ವಾದ ಮಾಡಿ, ವಿಭೂತಿ ಇಡ್ತಾರೆ ಅಷ್ಟೇ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ಇಂದು ಬಿಜೆಪಿ ಹಾಗೂ ಜೆಡಿಎಸ್‌ ಒಕ್ಕಲಿಗರ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದ್ದಲ್ಲದೆ, ಮೊದಲ ಹಂತದ ಚುನಾವಣೆಯ 14 ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿ ಆದಿಚುಂಚನಗಿರಿ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದಾರೆ.. ಈ ಮೂಲಕ ದಕ್ಷಿಣ ಕರ್ನಾಟಕ ಭಾಗದಲ್ಲಿ ಹೆಚ್ಚಿರುವ ಒಕ್ಕಲಿಗ ಮತಗಳನ್ನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.. ಆದ್ರೆ ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸ್ವಾಮೀಜಿಗಳು ಎಲ್ಲರಿಗೂ ಆಶೀರ್ವಾದ ಮಾಡುತ್ತಾರೆ ಅಷ್ಟೇ.. ಅವರು ಯಾರನ್ನೂ ಬೆಂಬಲಿಸೋದಿಲ್ಲ ಎಂದು ಹೇಳಿದ್ದಾರೆ..

ಇದನ್ನೂ ಓದಿ; ಬೇಸಿಗೆಯಲ್ಲಿ ಹೊಸ ತೊಡಕಿನ ಮಾಂಸ ಹೀಗೆ ಜೀರ್ಣಿಸಿಕೊಳ್ಳಿ!

ಶ್ರೀಗಳು ಆಶೀರ್ವಾದ ಮಾಡಿ, ವಿಭೂತಿ ಇಡ್ತಾರೆ;

ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಗಳು ನಾಯಕರ ಜೊತೆ ಆದಿಚುಂಚನಗಿರಿ ಶ್ರೀಗಳನ್ನು ಭೇಟಿ ಮಾಡಿರುವ ಬಗ್ಗೆ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದರು.. ಒಕ್ಕಲಿಗರ ಮತಗಳನ್ನ ಸೆಳೆಯೋದು ಅಷ್ಟು ಸುಲಭವಲ್ಲ ಎಂದ ಡಿ.ಕೆ.ಶಿವಕುಮಾರ್‌ ಅವರು, ನಿರ್ಮಲಾನಂದ ಶ್ರೀಗಳು ಯಾರ ಪರವೂ ಇಲ್ಲ. ಅವ್ರು ಬಂದೋರಿಗೆ ಆಶೀರ್ವಾದ ಮಾಡಿ ವಿಭೂತಿ ಇಡ್ತಾರೆ ಅಷ್ಟೇ. ನಮ್ಮ ಅಭ್ಯರ್ಥಿಗಳು ಕೂಡಾ ಸ್ವಾಮೀಜಿಗಳ ಬಳಿ ಹೋಗಿದ್ದರು. ಹಾಗೇ ಈಗ ಇವರೂ ಕೂಡಾ ಹೋಗಿದ್ದಾರೆ. ಆದರೆ ಸ್ವಾಮೀಜಿ ಮಾತ್ರ ಯಾರ ಪರವೂ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ; ಬಿಜೆಪಿ-ಜೆಡಿಎಸ್‌ ಒಕ್ಕಲಿಗ ನಾಯಕರ ಹೊಸತೊಡಕು ಪಾಲಿಟಿಕ್ಸ್‌!

ಒಕ್ಕಲಿಗರು, ಸ್ವಾಮೀಜಿಗಳು ದಡ್ಡರಲ್ಲ;

ಒಕ್ಕಲಿಗ ಮತದಾರರು ಹಾಗೂ ಒಕ್ಕಲಿಗ ಸ್ವಾಮೀಜಿಗಳು ದಡ್ಡರಲ್ಲ.. ಅವರು ಎಲ್ಲರನ್ನೂ ಮಾತನಾಡಿಸುತ್ತಾರೆ.. ಆಶೀರ್ವಾದ ಮಾಡುತ್ತಾರೆ.. ಆದ್ರೆ ಸ್ವಾಮೀಜಿಗಳು ಯಾರ ಪರವಾಗಿಯೂ ನಿಲ್ಲುವುದಿಲ್ಲ. ನಮ್ಮ ಪರವೂ ಮಾತನಾಡುವುದಿಲ್ಲ, ಅವರ ಪರವೂ ಮಾತಾಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

Share Post