ಬೇಸಿಗೆಯಲ್ಲಿ ಹೊಸ ತೊಡಕಿನ ಮಾಂಸ ಹೀಗೆ ಜೀರ್ಣಿಸಿಕೊಳ್ಳಿ!
ಬೇಸಿಗೆಯ ಧಗೆ ಹೆಚ್ಚಾಗಿದೆ… ತಿಂದಿದ್ದು ಸರಿಯಾಗಿ ಜೀರ್ಣ ಆಗುತ್ತಿಲ್ಲ.. ಕಾಯಿಲೆಗಳು ಕೂಡಾ ಹೆಚ್ಚಾಗುತ್ತಿವೆ.. ಇದರ ಮಧ್ಯೆ ಯುಗಾದಿ ಹಬ್ಬ ಬಂದಿದೆ.. ನಿನ್ನೆ ಯೂಗಾದಿ ಹಬ್ಬದಂದು ಎಲ್ಲರೂ ಚೆನ್ನಾಗಿ ಸಿಹಿಯೂಟ ಸವಿದಿರುತ್ತಾರೆ… ಇವತ್ತು ಹೊಸತೊಡಕು.. ಮಾಂಸಪ್ರಿಯರಿಗೆ ಇದು ವಿಶೇಷವಾದ ದಿನ.. ಹೊಡತೊಡಕಿನ ದಿನ ಹೊಟ್ಟೆ ಬಿರಿಯುವಷ್ಟೆ ಮಾಂಸಾಹಾರ ಸೇವನೆ ಮಾಡುತ್ತಾರೆ.. ಮೊದಲೇ ಮಾಂಸ ಬೇಗ ಜೀರ್ಣವಾಗೋದಿಲ್ಲ.. ಈಗ ಬೇಸಿಗೆಯಲ್ಲಿ ಜೀರ್ಣವಾಗೋದು ಇನ್ನೂ ಕಷ್ಟ.. ಬೇಸಿಗೆಐ ಧಗೆಯ ನಡುವೆ ಹೊಸತೊಡಕಿನ ಮಾಂಸಾಹಾರ ಮನುಷ್ಯನಿಗೆ ಸಾಕಷ್ಟು ಹಿಂದೆ ಕೊಡುತ್ತದೆ.. ಇದು ಗೊತ್ತಿದ್ದರೂ ಮಾಂಸಾಹಾರ ಪ್ರಿಯರು ಹೊಟ್ಟೆತುಂಬಾ ಮಾಂಸಾಹಾರ ಸೇವಿಸುತ್ತಾರೆ.. ಹೀಗಾಗಿ, ಮಾಂಸಾಹಾರ ಬೇಗ ಜೀರ್ಣವಾಗಲು ಹಾಗೂ ಯಾವುದೇ ಆರೋಗ್ಯ ತೊಂದರೆಯಾಗದಿರಲು ಈ ದಿನ ಒಂದಷ್ಟು ಪಾನೀಯಗಳನ್ನು ಸೇವಿಸುವುದು ಒಳ್ಳೆಯದು..
ಇದನ್ನೂ ಓದಿ; ಬಿಜೆಪಿ-ಜೆಡಿಎಸ್ ಒಕ್ಕಲಿಗ ನಾಯಕರ ಹೊಸತೊಡಕು ಪಾಲಿಟಿಕ್ಸ್!
ಮಾಂಸಾಹಾರ ಜೀರ್ಣವಾಗಲು ಪಾನೀಯಗಳನ್ನು ಸೇವಿಸಿ;
ಸಸ್ಯಾಹಾರಿ ಆಹಾರಗಳೇ ತುಂಬಾನೇ ತೊಂದರೆ ಕೊಡುವಂತೆ.. ಬಿಸಲಿನ ಧಗೆಗೆ ಸರಿಯಾಗಿ ಜೀರ್ಣವೇ ಆಗೋದಿಲ್ಲ.. ಹೀಗಿರುವಾಗ ಮಾಂಸಾಹಾರ ಜೀರ್ಣವಾಗೋದು ಕಷ್ಟ.. ಹೀಗಾಗಿ, ಮಾಂಸಾಹಾರ ಸೇವಿಸಿದವರು ಪಾನೀಯಗಳನ್ನು ಹೆಚ್ಚಿಗೆ ಸೇವಿಸಬೇಕು.. ಇದರಿಂದಾಗಿ ಮಾಂಸಾಹಾರ ಬೇಗ ಜೀರ್ಣವಾಗಲು ಸಹಕರಿಸುತ್ತದೆ..
ಇದನ್ನೂ ಓದಿ; ಹಬ್ಬದ ರಾತ್ರಿಯೇ ಭೀಕರ ಅಪಘಾತ; ಬಸ್ ಅಪಘಾತದಲ್ಲಿ 11 ಮಂದಿ ದುರ್ಮರಣ!
ನಿಂಬೆಹಣ್ಣಿನ ಜ್ಯೂಸ್ ಹೆಚ್ಚು ಕುಡಿಯಬೇಕು.. ಹಾಗೆ ಮಾಡುವುದರಿಂದ ದೇಹ ಸೇರಿರುವ ಮಾಂಸ ಬೇಗ ಜೀರ್ಣವಾಗುತ್ತದೆ.. ಇದರಿಂದಾಗಿ ಹೊಟ್ಟೆಯುಬ್ಬರ, ಹೊಟ್ಟೆ ನೋವು ಮುಂತಾದ ಸಮಸ್ಯೆ ಬರೋದಿಲ್ಲ.. ಹೀಗಾಗಿ ಹೊಸತೊಡಕಿನ ದಿನ ಮಾಂಸಾಹಾರ ಸೇವನೆಯ ಜೊತೆ ಜೊತೆಗೆ ಹೆಚ್ಚು ನಿಂಬೆ ಜ್ಯೂಸ್ ಕುಡಿಯವುದು ಒಳ್ಳೆಯದು..
ಇದರ ಜೊತೆಗೆ ಹೆಚ್ಚು ನೀರು ಕುಡಿಯಬೇಕು.. ದಿನಕ್ಕೆ ಮೂರು ನಾಲ್ಕು ಲೀಟರ್ ನೀರು ಕುಡಿದರೆ ಒಳ್ಳೆಯದು.. ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ.. ದೇಹ ಹೈಡ್ರೇಟ್ ಆಗಿದ್ದು, ಪಚನಕ್ರಿಯೆ ಚೆನ್ನಾಗಿ ಆಗುತ್ತದೆ.. ಇನ್ನು ಮಜ್ಜಿಗೆ ಕೂಡಾ ತುಂಬಾನೇ ಉಪಯುಕ್ತಕಾರಿ.. ಬೇಸಿಗೆಯಲ್ಲಿ ಎಲ್ಲರೂ ಕೂಡಾ ಮಜ್ಜಿಗೆ ಕುಡಿಯುತ್ತಾರೆ.. ಇನ್ನು ಮಾಂಸಾಹಾರ ಸೇವಿಸಿದಾಗ, ಮಜ್ಜಿಗೆಯನ್ನು ತೆಳುವಾಗಿ ಮಾಡಿಕೊಂಡು ಹೆಚ್ಚು ಕುಡಿಯಬೇಕು.. ಇದರಿಂದಾಗಿ ಮಾಂಸಾಹಾರ ಬೇಗನೆ ಜೀರ್ಣವಾಗುತ್ತದೆ..
ಇದನ್ನೂ ಓದಿ; ಜೇನು ತುಪ್ಪದಿಂದ ಎಷ್ಟು ಉಪಯೋಗವೋ ಅಷ್ಟೇ ತೊಂದರೆಗಳಿವೆ, ಎಚ್ಚರಿಕೆ!
ಹಣ್ಣಿನ ಜ್ಯೂಸ್‌ಗಳು ಕೂಡಾ ತುಂಬಾನೆ ಉಪಯುಕ್ತವಾಗುತ್ತದೆ.. ಎಲ್ಲಾ ರೀತಿಯ ಹಣ್ಣಿನ ಜ್ಯೂಸ್ ಗಳು ಕೂಡಾ ಜೀರ್ಣಕ್ರಿಯೆಗೆ ಸಹಕರಿಸುತ್ತವೆ.. ಅದರಲ್ಲೂ ಜೀರಾ ಜ್ಯೂಸ್ ತುಂಬಾ ಉಪಯೋಗಕಾರಿಯಾಗುತ್ತದೆ.. ಇನ್ನು ಮೊಸರಿಗೆ ಜೀರಿಗೆ, ಪುದೀನಾ ಸೇರಿಸಿ ಸೇವನೆ ಮಾಡಬಹುದು.. ಇದು ಕೂಡಾ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ..
ಇದನ್ನೂ ಓದಿ; ಒಟ್ಟಿಗೆ 17 ಮೊಮ್ಮಕ್ಕಳ ಮದುವೆ ಮಾಡಿದ ಚಾಲಾಕಿ ಅಜ್ಜ!