Politics

ಈ ಬಾರಿ ಮಹಿಳೆ ಪ್ರಧಾನಿಯಾಗ್ತಾರಂತೆ!; ನೊಣವಿನಕೆರೆ ಗುರೂಜಿ ಕಾಲಜ್ಞಾನ ನಿಜವಾಗುತ್ತಾ..?

ತುಮಕೂರು; ಎಲ್ಲರೂ ಈ ಬಾರಿಯೂ ಮೋದಿಯವರೇ ಪ್ರಧಾನಿಯಾಗ್ತಾರೆ ಎನ್ನುತ್ತಿದ್ದಾರೆ. ಬಿಜೆಪಿ ಪಕ್ಷವೊಂದಕ್ಕೇ 400 ಸ್ಥಾನ ಬರುತ್ತೆ ಎಂದು ಹೇಳುತ್ತಿದ್ದಾರೆ. ಲೋಕಸಭಾ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲೂ ಎನ್‌ಡಿಎನೇ ಅಧಿಕಾರ ಹಿಡಿಯುತ್ತೆ ಎಂದು ವರದಿ ಬಂದಿದೆ. ಗುರೂಜಿಯೊಬ್ಬರು ಮಾತ್ರ ಮಹಿಳೆಯೊಬ್ಬರು ಪ್ರಧಾನಿಯಾಗ್ತಾರೆ ಅಂತ ಕಾಲಜ್ಞಾನ ನುಡಿದಿದ್ದಾರೆ.

ನೊಣವಿನಕೆರೆಯ ಯಶ್ವಂತ ಗುರೂಜಿ ಭವಿಷ್ಯ;

ನೊಣವಿನಕೆರೆಯ ಯಶ್ವಂತ ಗುರೂಜಿ ಭವಿಷ್ಯ; ನೊಣವಿನಕೆರೆಯ ಯಶ್ವಂತ ಗುರೂಜಿಯವರು ಶಿವರಾತ್ರಿ ಪ್ರಯುಕ್ತ ಕಾಲಜ್ಞಾನ ನುಡಿದಿದ್ದಾರೆ. ಈ ಗುರೂಜಿ ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷ 135 ಸ್ಥಾನ ಗಳಿಸಲಿದೆ ಎಂದು ಹೇಳಿದ್ದರು. ಅದರಂತೆ ಕಾಂಗ್ರೆಸ್‌ 135 ಸ್ಥಾನ ಗಳಿಸಿತ್ತು. ತೆಲಂಗಾಣದಲ್ಲೂ ಕಾಂಗ್ರೆಸ್‌ ಗೆಲ್ಲುತ್ತೆ ಎಂದು ಅವರು ಮೊದಲೇ ಹೇಳಿದ್ದರು.. ಹೀಗಾಗಿ ಶಿವರಾತ್ರಿ ಪ್ರಯುಕ್ತ ಅವರು ಹೇಳಿದ ಭವಿಷ್ಯದ ಬಗ್ಗೆ ಕುತೂಹಲ ಕೆರಳಿಸಿದೆ. ಲೋಕಸಭಾ ಚುನಾವಣೆಯಲ್ಲಿ ಮಹಿಳೆಯೊಬ್ಬರು ಪ್ರಧಾನಿಯಾಗುತ್ತಾರೆ ಎನ್ನುವುದರ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ.

ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗ್ತಾರಾ..?;

ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗ್ತಾರಾ..?; ಯಶ್ವಂತ ಗುರೂಜಿ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಒಕ್ಕೂಟ ಅಧಿಕಾರ ಹಿಡಿಯುತ್ತೆ. ಪ್ರಿಯಾಂಕಾ ಗಾಂಧಿ ಪ್ರಧಾನಿಯಾಗ್ತಾರಂತೆ.. ಈ‌ ಬಾರಿ ಸ್ತ್ರೀ ಒಬ್ಬರು, ಪುರುಷನ ಎದುರು ದುರ್ಗಿಯಾಗಿ ನಿಂತು ಅಧಿಕಾರ ಮಾಡುತ್ತಾರೆ. ನಂತರ ತಾಯಿ ಮಮತೆಯಿಂದ ಅಧಿಕಾರವನ್ನ ಬೇರೆಯವರಿಗೆ ಬಿಟ್ಟುಕೊಡುತ್ತಾರೆ ಎಂದು ಯಶ್ವಂತ ಗುರೂಜಿ ಹೇಳಿದ್ದಾರೆ

ಶಿವರಾತ್ರಿಗೆ ಮುಂಚೆ ಚುನಾವಣೆ ನಡೆದಿದ್ದರೆ ಮೋದಿಗೆ ಯೋಗವಿತ್ತು;

ಶಿವರಾತ್ರಿಗೆ ಮುಂಚೆ ಚುನಾವಣೆ ನಡೆದಿದ್ದರೆ ಮೋದಿಗೆ ಯೋಗವಿತ್ತು; ಯಶ್ವಂತ್‌ ಗುರೂಜಿ ಪ್ರಕಾರ ಶಿವರಾತ್ರಿಗೆ ಮುಂಚೆ ಚುನಾವಣೆ ನಡೆದಿದ್ದರೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತೆ ಪ್ರಧಾನಿಯಾಗುವ ಯೋಗವಿತ್ತಂತೆ. ಆದ್ರೆ ಈ ಆ ಯೋಗ ಇರೋದು ಪ್ರಿಯಾಂಕಾ ಗ್ರಾಂಧಿಗೆ ಮಾತ್ರವಂತೆ. ಬಳಿಕ ಅವರು ರಾಹುಲ್‌ ಗಾಂಧಿಗೆ ಅಧಿಕಾರ ಬಿಟ್ಟುಕೊಡುತ್ತಾರಂತೆ.  ಪ್ರಧಾನಿ ಮೋದಿಯವರಿಗೆ ಅನಾರೋಗ್ಯ ಕಾಡಬಹುದು. ಇದೇ ವೇಳೆ ಪ್ರಿಯಾಂಕ ಗಾಂಧಿಗೆ ಹಂಸಕ, ಚಂದ್ರಮಂಗಳ, ಬುಧಾಧಿತ್ಯ ಯೋಗ ಶುರುವಾಗಿದೆ. ಈ ಯೋಗದಿಂದಲೇ ಪ್ರಧಾನಿ ಪಟ್ಟಕ್ಕೆ ಏರೋ ಅವಕಾಶ ಒದಗಿಬರಲಿದೆ. ಅನ್ಯ ಪಕ್ಷಗಳ ಬೆಂಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಯಶವಂತ ಗುರೂಜಿ ತಮ್ಮ ಕಾಲಜ್ಞಾನದಲ್ಲಿ ಹೇಳಿದ್ದಾರೆ.

ಗುರೂಜಿ ಹೇಳಿದ್ದು ನಿಜವಾದರೆ ಅದೊಂದು ಪವಾಡವಾಗುತ್ತದೆ;

ಗುರೂಜಿ ಹೇಳಿದ್ದು ನಿಜವಾದರೆ ಅದೊಂದು ಪವಾಡವಾಗುತ್ತದೆ; ಯಾವ ಸಮೀಕ್ಷೆಗಳೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ ಎಂದು ಹೇಳುತ್ತಿಲ್ಲ. ಇಡೀ ದೇಶದಲ್ಲಿ ಬಹುಪಾಲು ಜನ ಮೋದಿಯವರೇ ಪ್ರಧಾನಿಯಾಗಬೇಕು ಎಂದು ಬಯಸುತ್ತಿದ್ದಾರೆ.. ಜೊತೆಗೆ ಬಿಜೆಪಿಗೆ ಈಗ ಒಳ್ಳೆಯ ವಾತಾವರಣವಿದೆ. ಹೀಗಿದ್ದರೂ ಕೂಡಾ ಯಶವಂತ ಗುರೂಜಿ ಕಾಂಗ್ರೆಸ್‌ ಅಧಿಕಾರ ಹಿಡಿಯುತ್ತೆ ಎಂದು ಹೇಳುತ್ತಿದ್ದಾರೆ. ಅದೂ ಕೂಡಾ ಮಹಿಳೆ ಪ್ರಧಾನಿಯಾಗುತ್ತೆ ಎಂದು ಹೇಳುತ್ತಿದ್ದಾರೆ. ಒಂದು ಕಡೆ ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ಲ ಎಂದು ಹೇಳಿಬಿಟ್ಟಿದ್ದಾರೆ. ಹೀಗಿದ್ದರೂ ಕೂಡಾ ಅವರೇ ಪ್ರಧಾನಿಯಾಗುತ್ತಾರೆ ಎಂದು ಹೇಳಿರುವುದು ಕುತೂಹಲಕ್ಕೆಕಾರಣವಾಗಿದೆ. ಗುರೂಜಿ ಹೇಳಿದ್ದೇ ನಿಜವಾದರೆ ಅದೊಂದು ಪವಾಡವಾಗಲಿದೆ.

Share Post