ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸ್ತಾರಂತೆ ಸೋನಿಯಾ ಅಳಿಯ!
ಲೋಕಸಭಾ ಚುನಾವಣೆ ಘೋಷಣೆ ನಡುವೆಯೇ ಕಾಂಗ್ರೆಸ್ ಪಕ್ಷದಿಂದ ಹಲವು ನಾಯಕರು ಹೊರಹೋಗುತ್ತಿದ್ದಾರೆ.. ಹೀಗಿರುವಾಗಲೇ ಸೋನಿಯಾ ಗಾಂಧಿ ಅಳಿಯ ಹಾಗೂ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ನಾನಿದೀನಿ ಎಂದು ಮುಂದೆ ಬಂದಿದ್ದಾರೆ.. ರಾಬರ್ಟ್ ವಾದ್ರಾ ನಾನು ರಾಜಕೀಯ ಪ್ರವೇಶಕ್ಕೆ ಸಿದ್ಧ ಎಂದು ಹೇಳುತ್ತಿದ್ದಾರೆ.. ಉತ್ತರ ಪ್ರದೇಶದ ಅಮೇಠಿಯಿಂದ ಲೋಕಸಭೆಗೆ ಸ್ಪರ್ಧಿಸಲು ಸಿದ್ಧ ಎಂದು ರಾಬರ್ಟ್ ವಾದ್ರಾ ಘೋಷಿಸಿದ್ದಾರೆ.
ಇದನ್ನೂ ಓದಿ; ಮಾವುತನನ್ನು ತುಳಿದು ಸಾಯಿಸಿದ ದೇವಸ್ಥಾನದ ಆನೆ!
ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸ್ತಾರಂತೆ ವಾದ್ರಾ.!;
2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ವಿರುದ್ಧ ಸೋಲನುಭವಿಸಿದ್ದರು.. ಅದಾದ ಮೇಲೆ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದ ಮೇಲೆ ಹೋಪ್ ಕಳೆದುಕೊಂಡಿದ್ದಾರೆ.. ಈ ಬಾರಿ ಅವರು ಅಮೇಥಿಯಲ್ಲಿ ಸ್ಪರ್ಧೆ ಮಾಡಿಲ್ಲ.. ಹೀಗಿರುವಾಗಲೇ ರಾಬರ್ಟ್ ವಾದ್ರಾ ಅವರು ಅಮೇಥಿ ಜನರ ಜೊತೆ ನಾನು ಸಂಪರ್ಕದಲ್ಲಿದ್ದೇನೆ.. ನಾನೇ ಅಲ್ಲಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ.. ಕಳೆದ ಬಾರಿ ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತಿದ್ದರಿಂದ ನನಗೆ ಬೇಸರವಾಗಿದೆ.. ಹೀಗಾಗಿ ನಾನು ಸ್ಪರ್ಧೆಗೆ ರೆಡಿ ಎಂದು ವಾದ್ರಾ ಹೇಳಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಪತ್ನಿ ಪ್ರಿಯಾಂಕಾ ಗಾಂಧಿ ಕೂಡಾ ಈ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡಬೇಕು ಎಂದು ವಾದ್ರಾ ಹೇಳಿದ್ದಾರೆ..
ಇದನ್ನೂ ಓದಿ;ಬೋರ್‌ವೆಲ್‌ನಿಂದ ಎದ್ದು ಬಂದ ಸಾತ್ವಿಕ್; ಆರಾಮಾಗಿದ್ದಾನೆ ಬಾಲಕ!
ಗಾಂಧಿ ಕುಟುಂಬದವರ ಸ್ಪರ್ಧೆ ಅಗತ್ಯ;
ವಯನಾಡಿನಿಂದ ಈ ಬಾರಿಯೂ ಸ್ಪರ್ಧೆ ಮಾಡಿರುವ ರಾಹುಲ್ ಗಾಂಧಿ ಈ ಬಾರಿ ಅಮೇಥಿಯಿಂದ ಸ್ಪರ್ಧೆ ಮಾಡದಿರಲು ನಿರ್ಧಾರ ಮಾಡಿದ್ದರು.. ಹೀಗಿರುವಾಗಲೇ ಪ್ರಿಯಾಂಕಾ ಗಾಂಧಿಯವರು ಅಮೇಥಿಯಿಂದ ಸ್ಪರ್ಧೆ ಮಾಡಬೇಕೆಂಬ ಒತ್ತಡ ಬರುತ್ತಿದೆ.. ಆದ್ರೆ ಪ್ರಿಯಾಂಕಾ ಗಾಂಧಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.. ಹೀಗಿರುವಾಗಲೇ ರಾಬರ್ಟ್ ವಾದ್ರಾ ಅವರು ನಾನು ಸ್ಪರ್ಧೆಗೆ ಸಿದ್ಧ ಎಂದು ಹೇಳಿದ್ದಾರೆ.. ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶ ಬಹಳ ಮುಖ್ಯವಾದುದು.. ಯಾಕಂದ್ರೆ ಇಲ್ಲಿ ಒಟ್ಟು 80 ಲೋಕಸಭಾ ಕ್ಷೇತ್ರಗಳಿವೆ.. ಹೀಗಾಗಿ ಉತ್ತರ ಪ್ರದೇಶದಿಂದ ಗಾಂಧಿ ಕುಟುಂಬದವರು ಸ್ಪರ್ಧೆ ಮಾಡಿದರೆ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಿದಂತಾಗುತ್ತದೆ ಅನ್ನೋದು ರಾಬರ್ಟ್ ವಾದ್ರಾ ಅಭಿಪ್ರಾಯ..
ಇದನ್ನೂ ಓದಿ; ಡಾ.ಕೆ.ಸುಧಾಕರ್ ಭರ್ಜರಿ ತಂತ್ರಗಾರಿಕೆ; ಮಾಜಿ ಸಚಿವ ಗೆಲ್ಲೋದು ಫಿಕ್ಸ್..?
ಪ್ರಿಯಾಂಕ ಮೊದಲು ಸಂಸದೆಯಾಗಬೇಕೆಂದ ವಾದ್ರಾ..!;
ಒಂದು ಕಡೆ ವಾದ್ರಾ ನಾನೇ ಅಮೇಥಿಯಲ್ಲಿ ಸ್ಪರ್ಧೆಗೆ ಸಿದ್ಧ ಎಂದು ಹೇಳುತ್ತಿದ್ದಾರೆ.. ಇನ್ನೊಂದೆಡೆ ತಮ್ಮ ಪತ್ನಿ ಮೊದಲು ಸಂಸದೆಯಾದರೆ ಒಳ್ಳೆಯದು ಎಂದು ಹೇಳುತ್ತಿದ್ದಾರೆ.. ಹೀಗಿರುವಾಗಲೇ ರಾಬರ್ಟ್ ವಾದ್ರಾ ಪ್ರಸ್ತಾವನೆಗೆ ಸೋನಿಯಾಗಾಂಧಿ ಇನ್ನೂ ಏನೂ ಹೇಳಿಲ್ಲ.. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ರಾಯ್ ಬರೇಲಿಯನ್ನು ಪ್ರತಿನಿಧಿಸಿದ್ದರು. ಆದರೆ ಈ ಬಾರಿ ಅವರು ರಾಜ್ಯಸಭೆಗೆ ಆಯ್ಕೆಯಾದ ಕಾರಣ ಲೋಕಸಭೆ ಚುನಾವಣೆಯಿಂದ ದೂರ ಉಳಿದಿದ್ದಾರೆ.. ಗಾಂಧಿ ಕುಟುಂಬ ಮೊದಲಿನಿಂದಲೂ ಅಮೇಥಿ ಹಾಗೂ ರಾಯ್‌ಬರೇಲಿ ಕ್ಷೇತ್ರಗಳಿಂದ ಕ್ಷೇತ್ರ ಮಾಡುತ್ತಿತ್ತು.. ಇದೀಗ ಒಂದು ಕ್ಷೇತ್ರದಿಂದ ವಾದ್ರಾ, ಇನ್ನೊಂದು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಾರಾ ಎಂಬುದರ ಬಗ್ಗೆ ಅನುಮಾನ ಮೂಡಿದೆ..
ಇದನ್ನೂ ಓದಿ; ಶಿವಮೊಗ್ಗದಲ್ಲಿ 2009ರ ಸೋಲಿನ ಸೇಡು ತೀರಿಸಿಕೊಳ್ತಾರಾ ಬಂಗಾರಪ್ಪ ಅಭಿಮಾನಿಗಳು..?
ಕಾಂಗ್ರೆಸ್ ಅಮೇಥಿ ಅಭ್ಯರ್ಥಿ ಮೇಲೆ ಉತ್ಸಾಹ;
ಉತ್ತರ ಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಸ್ಥಾನಗಳಿವೆ.. ಇದರಲ್ಲಿ ಕಾಂಗ್ರೆಸ್ ಪಕ್ಷ 17 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.. ಉಳಿದ 63 ಸ್ಥಾನಗಳಲ್ಲಿ ಭಾರತದ ಮೈತ್ರಿಕೂಟದ ಮಿತ್ರ ಪಕ್ಷವಾದ ಸಮಾಜವಾದಿ ಪಕ್ಷ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಸ್ಪರ್ಧಿಸುತ್ತಿವೆ. ಆದ್ರೆ ಕಾಂಗ್ರೆಸ್ ಪಕ್ಷ ಸದ್ಯ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅಮೇಥಿ ಮತ್ತು ರಾಯ್ ಬರೇಲಿ ಅಭ್ಯರ್ಥಿಗಳ ಬಗ್ಗೆ ಪಕ್ಷ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.. ವಾದ್ರಾ ಹೇಳಿಕೆ ಗಮನಿಸಿದರೆ ಅಮೇಥಿಯಿಂದ ವಾದ್ರಾ, ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ..
ಇದನ್ನೂ ಓದಿ;ಚಾಮರಾಜನಗರದಲ್ಲಿ 98 ಕೋಟಿ ಮೌಲ್ಯದ ಮದ್ಯ ಪತ್ತೆ; ಯಾರಿಗೆ ಸೇರಿದ್ದು ಗೊತ್ತಾ..?