Astrology

ಕನಸಿನಲ್ಲಿ ದೀಪ ಕಾಣಿಸಿದರೆ ಇದು ಯಾವುದಕ್ಕೆ ಸಂಕೇತ..?

ಪ್ರತಿಯೊಬ್ಬರಿಗೂ ಕನಸುಗಳು ಬರುತ್ತವೆ.. ರಾತ್ರಿ ಗಾಢನಿದ್ರೆಯಲ್ಲಿರುವಾಗ ಕೆಲವೊಮ್ಮೆ ಒಳ್ಳೆಯ ಕನಸುಗಳು ಬರುತ್ತವೆ, ಕೆಲವೊಮ್ಮೆ ಕೆಟ್ಟ ಕನಸುಗಳು ಬರುತ್ತವೆ.. ಬಹುತೇಕರು ನಾವು ಬೆಳಗ್ಗೆ ನೋಡಿದ್ದು, ಯೋಚಿಸಿದ್ದೆಲ್ಲಾ ಕನಸಲ್ಲಿ ಬರುತ್ತದೆ ಎಂದು ಭಾವಿಸಿರುತ್ತಾರೆ.. ಆದ್ರೆ, ಕನಸಿನ ವಿಜ್ಞಾನದ ಪ್ರಕಾರ, ನಾವು ಕಾಣುವ ಪ್ರತಿಯೊಂದು ಕನಸಿಗೂ ಒಂದು ಅರ್ಥವಿದೆ.. ರಾತ್ರಿ ಬರುವ ಕನಸು ನಮ್ಮ ನಿಜ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕನಸಿನ ವಿಜ್ಞಾನದ ಪ್ರಕಾರ, ಪ್ರತಿಯೊಂದು ಕನಸಿಗೂ ವಿಭಿನ್ನ ಅರ್ಥವಿದೆಯಂತೆ..

ಇದನ್ನೂ ಓದಿ; ಮಾವುತನನ್ನು ತುಳಿದು ಸಾಯಿಸಿದ ದೇವಸ್ಥಾನದ ಆನೆ!

ಕನಸಿನಲ್ಲಿ ಒಮ್ಮೊಮ್ಮೆ ಕೆಲ ವಸ್ತುಗಳು ಕಾಣಿಸುತ್ತವೆ.. ಕೆಲವರ ಕನಸಿನಲ್ಲಿ ದೀಪ ಕೂಡಾ ಕಾಣಿಸುವುದುಂಟು.. ಒಂದು ವೇಳೆ ಕನಸಿನಲ್ಲಿ ದೀಪ ಕಾಣಿಸಿದರೆ ಅದು ಯಾವುದರ ಸಂಕೇತ..? ಅದರಿಂದ ಏನಾಗುತ್ತದೆ.. ಕನಸಿನ ವಿಜ್ಞಾನ ಏನು ಹೇಳುತ್ತದೆ..? ನೋಡೋಣ ಬನ್ನಿ…

 

 

ಇದನ್ನೂ ಓದಿ; ಪಾದ ನೋಡಿ ಮೈಯಲ್ಲಿರುವ ರೋಗ ಕಂಡು ಹಿಡಿಯಬಹುದು!

ದೀಪ ಹಚ್ಚುವುದು ಕಂಡರೆ ಏನಾಗುತ್ತದೆ..?;

ಕನಸಿನಲ್ಲಿ ದೀಪ ಕಾಣಿಸುವುದು ಆಗಾಗ ಆಗುತ್ತದೆ.. ಆದ್ರೆ ದೀಪ ಹೇಗೆ ಕಾಣಿಸಿತು ಎಂಬುದರ ಮೇಲೆ ನಮಗೆ ಒಳ್ಳೆಯದಾಗುತ್ತದಾ ಅಥವಾ ಕೆಟ್ಟದಾಗುತ್ತದಾ ಎಂಬುದು ನಿರ್ಧಾರವಾಗುತ್ತದೆ.. ಕನಸಿನಲ್ಲಿ ಕನಸು ಕಾಣುತ್ತಿರುವವರು ಅಥವಾ ಬೇರೆಯವರು ದೀಪವನ್ನು ಹಚ್ಚುತ್ತಿರುವುದು ಕಂಡರೆ ಅದು ಶುಭ ಸೂಚನೆ ಎಂದು ಹೇಳಲಾಗುತ್ತದೆ. ಈ ರೀತಿಯಾಗಿ ಕಾಣಿಸಿದರೆ ಅಂದಿನಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವ ಎಲ್ಲಾ ಸಾಧ್ಯತೆಯಿದೆ. ಮದುವೆ ಎಂದರೆ ಬೇಗ ಮದುವೆಯಾಗುತ್ತಾರೆ ಮತ್ತು ಕೆಲಸವಿಲ್ಲದವರಿಗೆ ಬೇಗ ಕೆಲಸ ಸಿಗುವುದಿಲ್ಲ.

ಇದನ್ನೂ ಓದಿ; ಕೆಂಪು ಮೊಟ್ಟೆ ಒಳ್ಳೆಯದಾ..?, ಬಿಳಿ ಮೊಟ್ಟೆ ಒಳ್ಳೆಯದಾ..?; ತಜ್ಞರು ಏನು ಹೇಳುತ್ತಾರೆ..?

ಆರಿದ ದೀಪ ಕನಸಿನಲ್ಲಿ ಕಂಡರೆ ಏನಾಗುತ್ತದೆ..?;

ಒಂದು ವೇಳೆ ಆರಿದ ದೀಪವನ್ನು ಕನಸಿನಲ್ಲಿ ಕಂಡರೆ ಏನಾಗುತ್ತದೆ..? ವಿದ್ವಂಸರು ಹೇಳುವ ಪ್ರಕಾರ ಆರಿದ ದೀಪ ಕನಸಿನಲ್ಲಿ ಕಂಡರೆ  ಒಳ್ಳೆಯದಲ್ಲವಂತೆ.. ಈ ರೀತಿ ನೋಡಿದರೆ ನೀವು ಹೆಚ್ಚು ಒತ್ತಡದಲ್ಲಿದ್ದೀರಿ ಎಂದರ್ಥ. ಸಮಾಜದಲ್ಲಿ ನಿಮಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂದರ್ಥ.  ನಿಮ್ಮ ಇಚ್ಛಾಶಕ್ತಿಯನ್ನು ನೀವು ಕಳೆದುಕೊಳ್ಳುತ್ತಿದ್ದೀರಿ ಎಂದರ್ಥ.

ಇದನ್ನೂ ಓದಿ; ಸೀರೆ ಕ್ಯಾನ್ಸರ್‌; ಸೀರೆ ಉಡೋದ್ರಿಂದಲೂ ಬರುತ್ತಂತೆ ಕ್ಯಾನ್ಸರ್‌!

ದೀಪವನ್ನು ಆರಿಸುತ್ತಿರುವುದು ಕಂಡರೆ ಏನರ್ಥ..?

ನೀವು ಕನಸಿನಲ್ಲಿ ದೀಪವನ್ನು ಆರಿಸುತ್ತಿರುವುದನ್ನು ನೋಡುತ್ತೀರಿ ಎಂದಿಟ್ಟುಕೊಳ್ಳಿ. ಆಗ ಏನಾಗುತ್ತದೆ..? ಜ್ಯೋತಿಷಿಗಳು ಹೇಳುವ ಪ್ರಕಾರ, ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸುತ್ತಿರುವಿರಿ ಎಂದರ್ಥ. ಅಥವಾ ನಿಮ್ಮ ಸಂಬಂಧಿಗಳು ಯಾರಾದರೂ ದೊಡ್ಡ ಅಪಾಯದಲ್ಲಿರಬಹುದು ಎಂಬುದರ ಸಂಕೇತ ಎಂದು ಹೇಳಲಾಗುತ್ತದೆ. ಇಲ್ಲವೇ ನಿಮ್ಮ ಹತ್ತಿರದ ಸಂಬಂಧಿಗಳು ಯಾರಾದರೂ ಸಾಯುತ್ತಾರೆ ಎಂದು ಸೂಚಿಸುವ ಸಂಕೇತವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ; ಮೊಸರನ್ನು ಹೀಗೆ ಸೇವಿಸಿದರೆ ಕೊಲೆಸ್ಟ್ರಾಲ್‌ ನಿಯಂತ್ರಿಸಬಹುದು!

ದೀಪ ಪ್ರಖರವಾಗಿ ಉರಿಯುತ್ತಿದ್ದರೆ ಏನಾಗುತ್ತದೆ..?

ಕನಸಿನಲ್ಲಿ ದೀಪ ಪ್ರಖರವಾಗಿ ಉರಿಯುತ್ತಿರುವುದು ಕಂಡುಬಂದರೆ ನಿಮಗೆ ಹಲವು ಅನಿರೀಕ್ಷಿತ ಲಾಭಗಳು ಆಗಲಿವೆ.. ನಿಮ್ಮ ಮುಂದಿನ ಜೀವನ ಉಜ್ವಲವಾಗಲಿದೆ.. ಆದ್ರೆ ದೀಪವು ಕ್ರಮೇಣ ಮಬ್ಬಾಗುತ್ತಿರುವಂತೆ ಕಂಡುಬಂದರೆ, ಭವಿಷ್ಯದಲ್ಲಿ ಸಮಸ್ಯೆಗಳು ಎದುರಾಗುವ ಸೂಚನೆಗಳಿವೆ ಎಂದು ತಿಳಿದುಕೊಳ್ಳಬಹುದು..

ದೀಪ ಕೆಳಗೆ ಬೀಳುವುದು ಕಂಡರೆ..?

ಕನಸಿನಲ್ಲಿ ಉರಿಯುವ ದೀಪ ಕೆಳಗೆ ಬೀಳುವುದನ್ನು ಕಂಡರೆ ಅಪಾಯಕಾರಿ ಸನ್ನಿವೇಶಗಳು ಎದುರಾಗುತ್ತವೆ. ನಿಮಗೆ ಏನೋ ತೊಂದರೆ, ಅಪಾಯ ಕಾದಿದೆ ಎಂದರ್ಥ ಎಂದು ಹೇಳುತ್ತಾರೆ..

ಇದನ್ನೂ ಓದಿ; ಕೋತಿಗಳಂತೆ ನಡೆಯುತ್ತಾರೆ ಈ ಜನ; ಪ್ರಪಂಚದಲ್ಲೇ ವಿಚಿತ್ರ ಕುಟುಂಬವಿದು!

Share Post