ಡಾ.ಕೆ.ಸುಧಾಕರ್ ಭರ್ಜರಿ ತಂತ್ರಗಾರಿಕೆ; ಮಾಜಿ ಸಚಿವ ಗೆಲ್ಲೋದು ಫಿಕ್ಸ್..?
ಚಿಕ್ಕಬಳ್ಳಾಪುರ; ಇಂದು ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಗೆ ದಿನ .. ಹೀಗಾಗಿ ಎಲ್ಲೆಡೆ ನಾಮಪತ್ರ ಭರಾಟೆ ಜೋರಾಗಿದೆ.. ಮೊನ್ನೆಯೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಇಂದು ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸುತ್ತಿದ್ದಾರೆ.. ಇದು ಅವರ ಶಕ್ತಿ ಪ್ರದರ್ಶನ ಕೂಡಾ ಹೌದು.. ಟಿಕೆಟ್ ಘೋಷಣೆಯಾದ ಮೇಲೆ ಹಲವು ವಿರೋಧಗಳನ್ನು ಎದುರಿಸಿದ್ದ ಡಾ.ಕೆ.ಸುಧಾಕರ್ ಈಗ ಎಲ್ಲವನ್ನೂ ಶಮನ ಮಾಡಿಕೊಂಡಿದ್ದಾರೆ.. ಚುನಾವಣೆ ಗೆಲ್ಲೋದಕ್ಕೆ ಬೃಹತ್ ಗೇಮ್ ಪ್ಲ್ಯಾನ್ ಜೊತೆ ಅವರು ಅಖಾಡಕ್ಕಿಳಿದಿದ್ದಾರೆ..
ಇದನ್ನೂ ಓದಿ; ರಶ್ಮಿಕಾಗಾಗಿ ಅಬುದಾಬಿಗೆ ಹೊರಟರಾ ನಟ ವಿಜಯ್ ದೇವರಕೊಂಡ..?
ಮೊರಸು ಒಕ್ಕಲಿಗ ಟ್ರಂಪ್ ಕಾರ್ಡ್;
ಕಳೆದ 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಬಚ್ಚೇಗೌಡರು, ಕ್ಷೇತ್ರದಲ್ಲಿನ ಒಕ್ಕಲಿಗ ಮತಗಳನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಿದ್ದರು.. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕೂವರೆ ಲಕ್ಷ ಒಕ್ಕಲಿಗ ಮತಗಳು ಹೆಚ್ಚಿದ್ದು, ಅದರಲ್ಲಿ ಮೊರಸು ಒಕ್ಕಲಿಗರ ಸಂಖ್ಯೆಯೇ ಹೆಚ್ಚಿದೆ.. ಸುಧಾಕರ್ ಅದೇ ಸಮುದಾಯಕ್ಕೆ ಸೇರಿದವರು.. ಕಳೆದ ಚುನಾವಣೆಯಲ್ಲೇ ಬಚೇಗೌಡರು ಒಕ್ಕಲಿಗ ಮತಗಳನ್ನು ಒಂದು ಮಾಡಿದ್ದರು.. ಇದೀಗ ಸುಧಾಕರ್ ಕೂಡಾ ಒಳಗೊಳಗೇ ಒಕ್ಕಲಿಗ ಮತಗಳನ್ನು ಬಿಗಿ ಮಾಡುತ್ತಿದ್ದಾರೆ.. ಇದರ ಜೊತೆಗೆ ಹಿಂದುಳಿದ ಹಾಗೂ ದಲಿತ ಮತಗಳನ್ನು ಸೆಳೆಯಲು ಭಾರೀ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದ್ದಾರೆ ಎನ್ನಲಾಗಿದೆ..
ಇದನ್ನೂ ಓದಿ; ಮತ್ತೊಬ್ಬ ನಟಿ ಜೊತೆ ಫ್ಲರ್ಟ್ ಮಾಡ್ತಿದ್ದಾರಾ ಶೋಯೆಬ್ ಮಲಿಕ್..?
ಒಕ್ಕಲಿಗರು, ದಲಿತ ಮತಗಳೇ ಹೆಚ್ಚು;
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ನಾಲ್ಕೂವರೆ ಲಕ್ಷದಷ್ಟಿವೆ.. ದಲಿತ ಮತಗಳು ಸುಮಾರು ಆರೂವರೆ ಲಕ್ಷ ಮತಗಳಿವೆ.. ಇವೆರಡೂ ಒಂದಾಗಿಬಿಟ್ಟರೆ ಗೆಲುವು ಗ್ಯಾರೆಂಟಿ.. ಸುಧಾಕರ್ ಅವರು ಈ ಮತಗಳನ್ನು ಒಟ್ಟುಗೂಡಿಸುವ ಸಲುವಾಗಿ ಹೆಚ್ಚು ಶ್ರಮ ವಹಿಸಿದ್ದಾರೆ.. ಇದಕ್ಕಾಗಿ ಒಕ್ಕಲಿಗ ಮುಖಂಡರು, ದಲಿತ ಮುಖಂಡರ ಜೊತೆ ನಿರಂತರ ಚರ್ಚೆಯಲ್ಲಿದ್ದಾರೆ..
ಇದನ್ನೂ ಓದಿ; ಬೆಂಗಳೂರಿನಲ್ಲಿ ಕಾಲರಾ ಭೀತಿ; ಮಲ್ಲೇಶ್ವರಂನಲ್ಲಿ ವ್ಯಕ್ತಿಯೊಬ್ಬರಿಗೆ ದೃಢ
ಚಿಕ್ಕಬಳ್ಳಾಪುರದಲ್ಲಿ ಲೀಡ್ ಪಡೆಯಲು ತಂತ್ರಗಾರಿಕೆ;
ಬೇರೆ ಕ್ಷೇತ್ರಗಳಲ್ಲಿ ಸುಧಾಕರ್‌ಗೆ ಉತ್ತಮ ವಾತಾವರಣವಿದೆ.. ಆದ್ರೆ ಕಳೆದ ವಿಧಾನಸಭಾ ಚುನಾವಣೆ ಸೇಡು ತೀರಿಸಿಕೊಳ್ಳಲು ಸುಧಾಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಲೀಡ್ ಗಳಿಸಲು ತಂತ್ರಗಾರಿಕೆ ಮಾಡುತ್ತಿದ್ದಾರೆ.. ಅದಕ್ಕಾಗಿ ಬೂತ್ ಮಟ್ಟದ ಮುಖಂಡರನ್ನು ಬಿಗಿ ಮಾಡುತ್ತಿದ್ದಾರೆ.. ಏನು ಮಾಡುತ್ತೀರೋ ಗೊತ್ತಿಲ್ಲ, ನನಗೆ ಚಿಕ್ಕಬಳ್ಳಾಪುರದಲ್ಲಿ ಹೆಚ್ಚಿನ ಲೀಡ್ ಬೇಕು ಎಂದು ಮುಖಂಡರಿಗೆ ಹೇಳಿದ್ದಾರೆ ಎನ್ನಲಾಗಿದೆ.. ತಂತ್ರಗಾರಿಕೆ ಸಾಕಷ್ಟು ಹೆಸರಾಗಿರುವ ಸುಧಾಕರ್ ಅವರಿಗೆ ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ಸಿಂಪಥಿ ಕೂಡಾ ಇದೆ.. ಇದನ್ನೂ ಬಳಸಿಕೊಂಡು ಸುಧಾಕರ್ ಅವರು ಚಿಕ್ಕಬಳ್ಳಾಪುರ ಲೀಡ್ ಗಳಿಸಿಕೊಳ್ಳಲು ವರದಾನವಾಗುತ್ತದೆ ಎಂದೇ ಹೇಳಲಾಗುತ್ತಿದೆ..
ಇದನ್ನೂ ಓದಿ; ತೀವ್ರ ಜ್ವರದಿಂದ ಬಳಲುತ್ತಿರುವ ಪವನ್ ಕಲ್ಯಾಣ್; ಪ್ರಚಾರ ಮುಂದೂಡಿಕೆ
ಬಲಿಜ ಮತಗಳೂ ಸುಧಾಕರ್‌ಗೆ ಬರುವ ಸಾಧ್ಯತೆ;
ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಬಲಿಜ ಸಮುದಾಯಕ್ಕೆ ಸೇರಿದವರು.. ಈ ಕ್ಷೇತ್ರದಲ್ಲಿ ಬಲಿಜ ಸಮುದಾಯದ ಮತಗಳು 1.80 ಲಕ್ಷದಷ್ಟಿವೆ.. ಈ ಮತಗಳ ಮೇಲೆ ರಕ್ಷಾ ರಾಮಯ್ಯ ಕಣ್ಣಿಟ್ಟಿದ್ದಾರೆ.. ಆದ್ರೆ ಈ ಭಾಗದ ಬಲಿಜ ಮುಖಂಡರಾದ ನವೀನ್ ಕಿರಣ್ ಹಾಗೂ ಬಾಗೇಪಲ್ಲಿ ಮುನಿರಾಜು ಅವರು ಬಿಜೆಪಿಯಲ್ಲಿದ್ದಾರೆ.. ಹೀಗಾಗಿ ಹೆಚ್ಚಿನ ಬಲಿಜ ಸಮಯದಾಯದ ಮತಗಳು ರಕ್ಷಾ ರಾಮಯ್ಯ ಅವರಿಗಿಂತ ಸುಧಾಕರ್‌ಗೇ ಹೆಚ್ಚಾಗಿ ಬರುತ್ತವೆ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ; ಚಾಮರಾಜನಗರದಲ್ಲಿ 98 ಕೋಟಿ ಮೌಲ್ಯದ ಮದ್ಯ ಪತ್ತೆ; ಯಾರಿಗೆ ಸೇರಿದ್ದು ಗೊತ್ತಾ..?