ಬೋರ್‌ವೆಲ್‌ನಿಂದ ಎದ್ದು ಬಂದ ಸಾತ್ವಿಕ್; ಆರಾಮಾಗಿದ್ದಾನೆ ಬಾಲಕ!
ವಿಜಯಪುರ; ಸತತ 20 ಗಂಟೆಗಳ ಕಾಲ ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಎರಡು ವರ್ಷದ ಬಾಲಕ ಸಾತ್ವಿಕ್ ಈಗ ಆರಾಮಗಿದ್ದಾನೆ.. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನಿಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.. ಸಾತ್ವಿಕ್ ಸಾವು ಗೆದ್ದು ಬಂದಿದ್ದು ನೋಡಿ ವೈದ್ಯರೇ ಅಚ್ಚರಿಗೊಂಡಿದ್ದಾರೆ. ತಲೆಕೆಳಗಾಗಿ ಬೋರ್‌ವೆಲ್‌ಗೆ ಬಿದ್ದರೂ ಕೂಡಾ ಸಾತ್ವಿಕ್ ಬದುಕಿ ಬಂದಿರುವುದು ಒಂದು ಪವಾಡ ಎಂದು ಎಲ್ಲರೂ ಹೇಳುತ್ತಿದ್ದಾರೆ…
ಇದನ್ನೂ ಓದಿ; ಶೂಟಿಂಗ್ ವೇಳೆ ನಟ ಅಜಿತ್ ಇದ್ದ ಕಾರು ಪಲ್ಟಿ; ಬಚಾವಾಗಿದ್ದೇ ಒಂದು ಪವಾಡ!
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಹೊಲದಲ್ಲಿದ್ದ ಬೋರ್ ವೆಲ್ ನಲ್ಲಿ 2 ವರ್ಷದ ಮಗು ಬಿದ್ದಿತ್ತು. ನಿನ್ನೆ ಸಂಜೆಯಿಂದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡಗಳು ನಿನ್ನೆಯಿಂದ ನಿರಂತರ ಕಾರ್ಯಾಚರಣೆ ನಡೆಸಿದ್ದವು.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಮಗು ಬೋರ್ ವೆಲ್ ಗೆ ಬಿದ್ದಿತ್ತು. ಸುಮಾರು 20 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿತ್ತು. ಮಗುವನ್ನು ಹೊರ ತೆಗೆದ ತಕ್ಷಣ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಆಂಬುಲೆನ್ಸ್‌ನಲ್ಲಿ ಮಗುವನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ; ಬೇಸಿಗೆಯಲ್ಲಿ ವಿದ್ಯುತ್ ಬಿಲ್ ಜಾಸ್ತಿ ಬರ್ತಿದೆಯಾ..?; ಹಾಗಾದ್ರೆ ಈ ಕೆಲಸ ಮಾಡಿ..
ಸಿಟಿ ಸ್ಕ್ಯಾನ್ ಮಾಡಿಸಲು ಜಿಲ್ಲಾಸ್ಪತ್ರೆಗೆ;
ಸಾತ್ವಿಕ್ ಆರೋಗ್ಯವಾಗಿದ್ದಾನೆ.. ಆದ್ರೆ ತಲೆ ಕೆಳಗಾಗಿ ಬಿದ್ದಿದ್ದರಿಂದ ತಲೆಗೆ ಏನಾದರೂ ಪೆಟ್ಟಾಗಿದೆಯಾ ಎಂಬುದರ ಬಗ್ಗೆ ಪರೀಕ್ಷೆ ಮಾಡಬೇಕಾಗಿದೆ.. ಈ ಹಿನ್ನೆಲೆಯಲ್ಲಿ ಸಾತ್ವಿಕ್‌ನನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.. ಅಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿ ಮತ್ತೆ ವಾಪಸ್ ಕರೆತರಲಾಗುತ್ತದೆ.. ಸಾತ್ವಿಕ್ ಆರಾಮಾಗಿದ್ದು, ಆರೋಗ್ಯವಾಗಿದ್ದಾನೆ. ಯಾವುದೇ ಗಾಬರಿಯಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ..
ಇದನ್ನೂ ಓದಿ; ಲಕ್ಸುರಿ ಹೋಟೆಲ್‌ನಲ್ಲಿ ವಾಸ್ತವ್ಯ, ನಕಲಿ ಪೇಮೆಂಟ್; ಸಿಕ್ಕಿಬಿದ್ದ ಹೈಟೆಕ್ ವಂಚಕ