Politics

Rajyasabha; ನಾಳೆ ರಾಜ್ಯಸಭಾ ಚುನಾವಣೆ; ಕಾಂಗ್ರೆಸ್‌ ಪಕ್ಷಕ್ಕೆ 5ನೇ ಅಭ್ಯರ್ಥಿ ತಲೆನೋವು!

ಬೆಂಗಳೂರು; ರಾಜ್ಯ ವಿಧಾನಸಭೆಯಿಂದ ಆಯ್ಕೆಯಾಗುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಾಳೆ ಚುನಾವಣೆ ಇದೆ.. ಐದನೇ ಅಭ್ಯರ್ಥಿ ಕಣದಲ್ಲಿರುವುದರಿಂದ ಜೆಡಿಎಸ್‌-ಬಿಜೆಪಿ ಮೈತ್ರಿ ಪಕ್ಷಗಳು ಕಾಂಗ್ರೆಸ್‌ ತಲೆನೋವು ತಂದಿರಿಸಿವೆ. ನಾಲ್ಕು ಸ್ಥಾನಗಳ ಪೈಕಿ ಕಾಂಗ್ರೆಸ್‌ ಮೂರಲ್ಲಿ  ಗೆಲ್ಲಲು ಶಕ್ತವಾಗಿತ್ತು.. ಆದ್ರೆ ನಿನ್ನೆ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ಗೆ ಒಂದು ಮತ ಕಡಿಮೆಯಾದಂತಾಗಿದೆ. ಇದರಿಂದಾಗಿ ಮೂರನೇ ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್‌ ತಲೆಕೆಡಿಸಿಕೊಂಡಿದೆ. ಮೊದಲೇ ಅಡ್ಡಮತದಾನದ ಭೀತಿಯಲ್ಲಿದ್ದ ಕಾಂಗ್ರೆಸ್‌ಗೆ ಮತ್ತಷ್ಟು ಸಂಕಟ ಶುರುವಾಗಿದ್ದು, ನಾಳಿನ ಚುನಾವಣೆ ಕುತೂಹಲದ ಘಟಕ್ಕೆ ತಲುಪಿದೆ.

ಇದನ್ನೂ ಓದಿ; ಪೀನಟ್‌ ಬಟರ್‌ ಆರೋಗ್ಯಕ್ಕೆ ಒಳ್ಳೆಯದಾ..? ಅದರಲ್ಲಿ ಏನೆಲ್ಲಾ ಪೋಷಕಾಂಶಗಳಿವೆ..?

ಯಾರ್ಯಾರು ಕಣದಲ್ಲಿದ್ದಾರೆ..? ಎಷ್ಟು ಮತ ಬೇಕು..?;

ಯಾರ್ಯಾರು ಕಣದಲ್ಲಿದ್ದಾರೆ..? ಎಷ್ಟು ಮತ ಬೇಕು..?; ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇಲ್ಲಿ ಐದು ಮಂದಿ ಕಣದಲ್ಲಿದ್ದಾರೆ. ಗೆಲ್ಲಲು ಪ್ರತಿ ಶಾಸಕನಿಗೆ 45 ಮತ ಬೇಕು. ಇದಕ್ಕಾಗಿ ಕಾಂಗ್ರೆಸ್‌ ಪರವಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಅಜಯ್‌ ಮಾಕೇನ್‌, ಜಿ.ಸಿ.ಚಂದ್ರಶೇಖರ್‌, ಡಾ.ನಾಸೀರ್‌ ಹುಸೇನ್‌, ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಹಾಗೂ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ಜೆಡಿಎಸ್‌ಗೆ ಗೆಲ್ಲುವಷ್ಟು ಮತಗಳು ಇಲ್ಲದಿದ್ದರೂ ಕುಪೇಂದ್ರರೆಡ್ಡಿಯನ್ನು ಕಣಕ್ಕಿಳಿಸಲಾಗಿದೆ. ಹೀಗಾಗಿ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಎರಡೂ ಕಡೆಯವರು ಅಡ್ಡಮತದಾನದ ಭೀತಿಯಲ್ಲಿದ್ದಾರೆ.

ಇದನ್ನೂ ಓದಿ; Plov; ಇದು ಲೈಂಗಿಕ ಶಕ್ತಿ ಹೆಚ್ಚಿಸಲೆಂದೇ ಇರುವ ವಿಶೇಷ ಅಡುಗೆ!

ಯಾರ ಬಲಾಬಲ ಎಷ್ಟಿದೆ..?;

ಯಾರ ಬಲಾಬಲ ಎಷ್ಟಿದೆ..?; ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ 135 ಶಾಸಕರನ್ನು ಹೊಂದಿದೆ. ರಾಜ್ಯಸಭಾ ಚುನಾವಣೆಯಲ್ಲಿ ತನ್ನ ಮೂವರೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸರಿಯಾಗಿ 135 ಮತ ಬೇಕು.. ಆದ್ರೆ ಇದರಲ್ಲಿ ನಿನ್ನೆ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಮೂರನೇ ಅಭ್ಯರ್ಥಿ ಗೆಲ್ಲಲು ಇನ್ನೊಂದು ಮತದ ಅವಶ್ಯಕತೆ ಇದೆ. ಇನ್ನು ಬಿಜೆಪಿ 66 ಶಾಸಕರನ್ನು ಹೊಂದಿದ್ದು, ಬಿಜೆಪಿ ಅಭ್ಯರ್ಥಿಗೆ 45 ಮತಗಳು ಹೋದರೆ, ಹೆಚ್ಚುವರಿ 21 ಮತಗಳು ಜೆಡಿಎಸ್‌ ಅಭ್ಯರ್ಥಿಗೆ ಹಾಕಬಹುದು, ಜೊತೆಗೆ ಜೆಡಿಎಸ್‌ನ 19 ಶಾಸಕರಿದ್ದಾರೆ. ಇಷ್ಟೂ ಮತಗಳು ಸೇರಿದರೆ ಜೆಡಿಎಸ್‌ಗೆ 40 ಮತಗಳು ಆಗುತ್ತವೆ. ಆದ್ರೆ ಗೆಲ್ಲೋದಕ್ಕೆ ಇನ್ನೂ ಐದು ಮತಗಳು ಬೇಕು. ಪಕ್ಷೇತರ ಶಾಸಕರು ಐದು ಮಂದಿ ಇದ್ದು, ಅವರ ಮತಗಳಿಗಾಗಿ ಲಾಬಿ ನಡೆದಿದೆ. ಜೊತೆಗೆ ಕಾಂಗ್ರೆಸ್‌ ನಿಂದ ಕೆಲವರು ಅಡ್ಡ ಮತದಾನ ಮಾಡುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹೀಗಾಗಿ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಚಳ ತರಿಸಿದ್ದಾರೆ.

ಇದನ್ನೂ ಓದಿ; Honey; ಸಕ್ಕರೆ ಬದಲು ಜೇನು ಬಳಸಬಹುದೇ?; ಯಾರು ಬೇಕಾದರೂ ಜೇನು ಸೇವಿಸಬಹುದೇ..?

ಎಲೆಕ್ಷನ್‌ ಫಾರ್ಮ್‌ಗೆ ಸಹಿ ಹಾಕಿದ್ದರೆ ಅದು ಕೌಂಟ್‌ ಆಗುತ್ತಾ..?;

ಎಲೆಕ್ಷನ್‌ ಫಾರ್ಮ್‌ಗೆ ಸಹಿ ಹಾಕಿದ್ದರೆ ಅದು ಕೌಂಟ್‌ ಆಗುತ್ತಾ..?; ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ನಿನ್ನೆ ನಿಧನರಾಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ಗೆ ಒಂದು ಮತ ಕಡಿಮೆಯಾಗಿದೆ. ಆದ್ರೆ, ರಾಜಾ ವೆಂಕಟಪ್ಪ ನಾಯಕ ಅವರು ಸಾಯುವ ಮೊದಲೇ ರಾಜ್ಯಸಭಾ ಚುನಾವಣಾ ಫಾರಂಗೆ ಸಹಿ ಹಾಕಿದ್ದಾರಂತೆ. ಹೀಗಾಗಿ ಅವರ ಮತ ಕಾಂಗ್ರೆಸ್‌ಗೆ ಕೌಂಟ್‌ ಆಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್‌ ಹೇಳುತ್ತಿದ್ದಾರೆ. ಆದ್ರೆ ಚುನಾವಣಾ ಆಯೋಗ ಏನು ತೀರ್ಮಾನ ಮಾಡುತ್ತೆ ಅನ್ನೋದರ ಮೇಲೆ ಇದು ನಿರ್ಧಾರವಾಗುತ್ತದೆ.

ಪಕ್ಷೇತರರು ಕೈ ಹಿಡಿಯುತ್ತಾರಾ..?;

ಪಕ್ಷೇತರರು ಕೈ ಹಿಡಿಯುತ್ತಾರಾ..?;  ಹರಪನಹಳ್ಳಿ ಕ್ಷೇತ್ರದ ಲತಾ ಮಲ್ಲಿಕಾರ್ಜುನ್ ಈಗಾಗಲೇ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ದರ್ಶನ್ ಪುಟ್ಟಣಯ್ಯ ಅವರಿಗೆ ಕಾಂಗ್ರೆಸ್‌ ಬೆಂಬಲಿಸಿದ್ದರಿಂದ ಈ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ನಿಲ್ಲಬಹುದು ಹಾಗೂ ಇನ್ನು ಕಾಂಗ್ರೆಸ್‌ ಶಾಸಕ ಶರತ್‌ ಬಚ್ಚೇಗೌಡ ಅವರ ಮಾವ ಗೌರಿಬಿದನೂರು ಕ್ಷೇತ್ರದ ಪಕ್ಷೇತರ ಶಾಸಕರಾಗಿದ್ದಾರೆ. ಈ ಮೂವರೂ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್‌  ಅವರು ಬಿಜೆಪಿ ಶಾಸಕರಾದ ಎಸ್​ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಹಾಗೂ ಜೆಡಿಎಸ್​​ನ ಶರಣಗೌಡ ಕಂದಕೂರು ಅವರಿಗೆ ಗಾಳ ಹಾಕಿದ್ದಾರೆ. ಈ ಮೂವರೂ ಅಡ್ಡ ಮತದಾನ ಮಾಡಿದರೂ ಕಾಂಗ್ರೆಸ್‌ ನ ಮೂರನೇ ಅಭ್ಯರ್ಥಿ ಗೆಲ್ಲಲು ಸುಲಭವಾಗುತ್ತದೆ.

ಇದನ್ನೂ ಓದಿ; Andhra Election; ಟಿಡಿಪಿ-ಜನಸೇನಾ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕಾಂಗ್ರೆಸ್‌ ಅಡ್ಡಮತದಾನದ ಭೀತಿ;

ಕಾಂಗ್ರೆಸ್‌ ಅಡ್ಡಮತದಾನದ ಭೀತಿ; ಕಾಂಗ್ರೆಸ್‌ನಲ್ಲೂ ಕೆಲ ಶಾಸಕರು ಅಡ್ಡಮತದಾನ ಮಾಡುವ ಭೀತಿ ಇದೆ. ಇನ್ನು ಕುಪೇಂದ್ರ ರೆಡ್ಡಿ ಅತ್ಯಂತ ಶ್ರೀಮಂತರಾಗಿದ್ದಾರೆ.. ಹೀಗಾಗಿ ಕಾಂಗ್ರೆಸ್‌ಗೆ ಕುದುರೆ ವ್ಯಾಪಾರದ ಭೀತಿ ಕಾಡುತ್ತಿದೆ. ಹೀಗಾಗಿ, ಕಾಂಗ್ರೆಸ್‌ ಶಾಸಕರು ಅಡ್ಡ ಮತದಾನ ಮಾಡದಂತೆ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ.

 

Share Post