CrimeNational

ತಂದೆ-ಸಹೋದರನ ದೇಹಗಳನ್ನು ಕತ್ತರಿಸಿ ಫ್ರೀಜರ್‌ನಲ್ಲಿಟ್ಟಿದ್ದ 16 ವರ್ಷದ ಮಗಳು!

ಹರಿದ್ವಾರ; ಹತ್ತನೇ ತರಗತಿ ಓದುತ್ತಿದ್ದ ಬಾಲಕಿ ತನ್ನ ತಂದೆ ಹಾಗೂ ತಮ್ಮನನ್ನು ಕೊಂದು ದೇಹಗಳನ್ನು ತುಂಡು ತುಂಡು ಮಾಡಿ ಫ್ರೀಜರ್‌ನಲ್ಲಿದ್ದ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.. ಜಬಲ್ಪುರದ ಸಿವಿಲ್ ಲೈನ್ಸ್ ಪ್ರದೇಶದ ಮಿಲೇನಿಯಮ್ ಸೊಸೈಟಿಯಲ್ಲಿ ಎರಡು ತಿಂಗಳ ಹಿಂದೆ ಈ ಘಟನೆ ನಡೆದಿತ್ತು.. ಈ ಕೊಲೆ ಮಾಡಿದವರು ಕೊಲೆಯಾದ ವ್ಯಕ್ತಿಯ ಮಗಳೇ ಅನ್ನೋದು ಈ ಸಾಬೀತಾಗಿದೆ.. ಇದೀಗ ಬಾಲಕಿಯನ್ನು ಬಂಧಿಸಿದ್ದಾರೆ..

16 ವರ್ಷದ ಬಾಲಕಿ 19 ವರ್ಷದ ಬಾಲಕ ಮುಕುಲ್‌ ಸಿಂಗ್‌ನನ್ನು ಪ್ರೀತಿ ಮಾಡುತ್ತಿದ್ದಳು.. ಅಷ್ಟೇ ಅಲ್ಲದೆ ಇಬ್ಬರೂ ಸೆಪ್ಟೆಂಬರ್‌ 2023ರಲ್ಲಿ ಮನೆ ಬಿಟ್ಟು ಓಡಿಹೋಗಿದ್ದರು.. ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರಿಂದ ಪೋಕ್ಸೋ ಕಾಯ್ದೆಯಡಿ ಮುಕುಲ್‌ ಸಿಂಗ್‌ ನನ್ನು ಜೈಲಿಗೆ ಕಳುಹಿಸಲಾಗಿತ್ತು.. ಈ ಕಾರಣಕ್ಕಾಗಿ ಆಕ್ರೋಶಗೊಂಡಿದ್ದ ಮುಕುಲ್‌ ಸಿಂಗ್‌ ತನ್ನ ಪ್ರಿಯತಮೆ ಸಹಕಾರದೊಂದಿಗೆ ಬಾಲಕಿಯ ತಂದೆ ಹಾಗೂ ಸಹೋದರನನ್ನು ಕೊಲೆ ಮಾಡಲು ಪ್ಲ್ಯಾನ್‌ ಮಾಡಿದ್ದರು.. ಅದರಂತೆ ಎರಡು ತಿಂಗಳ ಹಿಂದೆ ಅಂದರೆ ಮಾರ್ಚ್‌ 15ರಂದು ಇಬ್ಬರನ್ನೂ ಕೊಲೆ ಮಾಡಿ, ದೇಹಗಳನ್ನು ತುಂಡು ತುಂಡು ಮಾಡಿ ಫ್ರೀಜರ್‌ನಲ್ಲಿಟ್ಟು ಇಬ್ಬರೂ ಪರಾರಿಯಾಗಿದ್ದರು..

ಅನುಮಾನಾಸ್ಪದವಾಗಿ ಬಾಲಕಿ ತಿರುಗಾಡುತ್ತಿದ್ದಳು.. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರು ವಿಷಯ ತಿಳಿಸಿದ್ದರು.. ಆಕೆಯನ್ನು ಹಿಡಿದು ವಿಚಾರಣೆ ಮಾಡಿದಾಗ ಕೊಲೆ ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದಾಳೆ.. ಆಕೆಯ ಪ್ರಿಯಕರ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ..

 

Share Post