CrimeNational

ಗಂಡ ಹಾಗೂ ಅತ್ತೆಗೆ ಮಾವಿನ ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿಕೊಟ್ಟ ಮಹಿಳೆ!

  ಮುಂಬೈ; ಎಂಥೆಂಥಾ ಸೊಸರೆಯರು ಇರ್ತಾರೋ ಏನೋ.. ಇಲ್ಲೊಬ್ಬ ರಾಕ್ಷಸಿ ಸೊಸೆ ತನ್ನ ಗಂಡ, ಅತ್ತೆ ಸೇರಿ ಗಂಡನ ಮನೆಯವರಿಗೆಲ್ಲಾ ಮಾವಿನ ಹಣ್ಣಿನ ಜ್ಯೂಸ್‌ ನಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿ ಕೊಟ್ಟಿದ್ದಾಳೆ.. ಮಹಾರಾಷ್ಟ್ರದ ತುಳಜಾಪುರ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಅದೃಷ್ಟವಶಾತ್‌ ಎಲ್ಲರೂ ಬದುಕುಳಿದಿದ್ದಾರೆ.. ಇದೀಗ ರಾಕ್ಷಸಿ ಸೊಸೆ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ..

ಮಹೇಶ್​ ಕುಮಾರ ಚಿಂಗುಂಡೆ ಹಾಗೂ ಅವರ ಅತ್ತೆ ಸೇರಿ ಮನೆ ಮಂದಿಗೆಲ್ಲಾ ಸೊಸೆ ಭಾಗ್ಯವತಿ ಚಿಂಗುಂಡೆ ಜ್ಯೂಸ್‌ ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಟ್ಟಿದ್ದಾಳೆ.. ಇದರಿಂದಾಗಿ ಎಲ್ಲರೂ ಗಾಢ ನಿದ್ದೆ ಮಾಡಿದ್ದಾರೆ.. ಅಸ್ವಸ್ಥರೂ ಆಗಿದ್ದಾರೆ.. ಆದ್ರೆ ಯಾರಿಗೂ ಪ್ರಾಣಕ್ಕೇನೂ ಅಪಾಯವಾಗಿಲ್ಲ.. ಆದ್ರೆ ಅವರಿಗೆ ಏನೋ ಆಗಿದೆ ಎಂದು ಅನುಮಾನ ಬಂದಿದೆ.. ದೇಹದಲ್ಲಿ ಹೆಚ್ಚಿನ ನೋವು ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಮಾಡಿಸಿದ್ದು, ನಿದ್ರೆ ಮಾತ್ರೆ ಸೇವಿಸಿದ್ದರ ಬಗ್ಗೆ ವರದಿ ಬಂದಿದೆ.. ಈ ಹಿನ್ನೆಲೆಯಲ್ಲಿ ಆ ಮಹಿಳೆ ವಿರುದ್ಧ ದೂರು ದಾಖಲಿಸಲಾಗಿದೆ..

 

Share Post