Politics

Pakistan Slogan; ಪಾಕಿಸ್ತಾನ ಪರ ಘೋಷಣೆ ವಿಚಾರ; ವಿಧಾನಸಭೆಯಲ್ಲಿ ವಾಗ್ಯುದ್ಧ

ಬೆಂಗಳೂರು; ಕಾಂಗ್ರೆಸ್‌ ಸೆಲೆಬ್ರೇಷನ್‌ ವೇಳೆ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ವಿಚಾರ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ವಿಪಕ್ಷಗಳು ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಕಾಂಗ್ರೆಸ್‌ ಬೆಂಬಲಿಗರು ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ್ದಾರೆ. ಅವರ ವಿರುದ್ಧ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದರಿಂದಾಗಿ ಕೆಲಕಾಲ ಕೋಲಾಹಲ ಸೃಷ್ಟಿಯಾಗಿತ್ತು.

ಇದನ್ನೂ ಓದಿ; Pakistan Slogan; ಪಾಕಿಸ್ತಾನ ಪರ ಘೋಷಣೆ ವಿವಾದ; ಕಾಂಗ್ರೆಸ್‌ ನಾಯಕರು ಏನಂತಾರೆ..?

ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚಗೆ ಅವಕಾಶ;

ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚಗೆ ಅವಕಾಶ; ಇಂದಿನ ಸದನ ಆರಂಭವಾಗುತ್ತಿದ್ದಂತೆ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಯಿತು. ಇದೇ ವೇಳೆ ಮಾತನಾಡಿರುವ ಸ್ಫೀಕರ್‌ ಯು.ಟಿ.ಖಾದರ್, ಅಧಿಕಾರಿಗಳು ಮೂಲಕ ನನಗೆ ಕೆಲವು ವಿಚಾರಗಳು ಗಮನಕ್ಕೆ ಬಂದಿವೆ. ನನಗೆ ಬೇಕಾದರೆ ಅವಮಾನ ಮಾಡಿ, ಆದ್ರೆ ದೇಶಕ್ಕೆ ಅವಮಾನ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಖಂಡಿತವಾಗಿಯೂ ಆಗಲಿವೆ. ಯಾರೂ ಕೂಡಾ ಇದರಲ್ಲಿ ರಾಜಕೀಯ ಮಾಡಬಾರದು. ಯಾರೂ ಇದನ್ನು ಲಘುವಾಗಿ ಪರಿಗಣಿಸಬಾರದು ಎಂದೂ ಸ್ಪೀಕರ್‌ ಖಾದರ್‌ ಹೇಳಿದ್ದಾರೆ.

ಇದನ್ನೂ ಓದಿ;ವಿಪ್‌ ಉಲ್ಲಂಘನೆ; ಎಸ್‌.ಟಿ.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಅನರ್ಹರಾಗ್ತಾರಾ..?

ಘೋಷಣೆ ಕೂಗಿದ್ದರೂ ಯಾಕೆ ಇನ್ನೂ ಕ್ರಮ ಆಗಿಲ್ಲ?;

ಘೋಷಣೆ ಕೂಗಿದ್ದರೂ ಯಾಕೆ ಇನ್ನೂ ಕ್ರಮ ಆಗಿಲ್ಲ?; ವಿಪಕ್ಷ ನಾಯಕ ಆರ್‌.ಅಶೋಕ್‌ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.. ಕಾಂಗ್ರೆಸ್‌ ಶಾಸಕರು ಈ ಹಿಂದೆ ಕಿವಿ ಮೇಲೆ ಹೂವು ಇಟ್ಟುಕೊಂಡು ಸದನಕ್ಕೆ ಬಂದಿದ್ದರು.. ಈಗ ನಮ್ಮ ಕಿವಿ ಮೇಲೆ ಹೂವು ಇಡಲು ನೋಡುತ್ತಿದ್ದಾರೆ. ಘೋಷಣೆ ಕೂಗಿರುವುದು ನಾವು ನೋಡೇ ಇಲ್ಲ. ನಾವು ಅದನ್ನು ಕೇಳೇ ಇಲ್ಲ ಎಂದು ಹೇಳುತ್ತಿದದಾರೆ. ಹಾಗೆ ಘೋಷನೆ ಕೂಗಿದವರು ಪಾಕಿಸ್ತಾನದವರೇ ಎಂದು ಪ್ರಶ್ನೆ ಮಾಡಿದ ಆರ್‌.ಅಶೋಕ್‌, ಇಲ್ಲಿ ಇನ್ನೂ ಎಷ್ಟು ಮಂದಿ ಪಾಕಿಸ್ತಾನದವರು ಇದ್ದಾರೋ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಘೋಷಣೆ ಕೂಗಿರುವುದು ನಿಜವಾಗಿದ್ದರೂ ಇನ್ನೂ ಯಾರ ವಿರುದ್ಧವೂ ಕ್ರಮ ಆಗಿಲ್ಲ. ಒಂದು ವೇಳೆ ಈ ವಿಚಾರದಲ್ಲಿ ನಾನು ತಪ್ಪು ಮಾಡಿದ್ದರೂ ನನ್ನನ್ನೂ ಜೂಲಿಗೆ ಹಾಕಬಹುದು ಎಂದು ಆರ್‌.ಅಶೋಕ್‌ ಹೇಳಿದರು.

ಇದನ್ನೂ ಓದಿ; ಕರ್ಕಶವಾದ ಲೌಡ್‌ ಸ್ಪೀಕರ್‌ ಅವನು..!; ಮೋದಿಯನ್ನು ಏಕವಚನದಲ್ಲಿ ಟೀಕಿಸಿದ ನಟ ಪ್ರಕಾಶ್‌ ರಾಜ್‌

ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂದು ಕೂಗಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಯಾರು ಏಳು ಕೋಟಿ ಕನ್ನಡಿಗರಿಗೆ ರಕ್ಷಣೆ ಕೊಡಬೇಕಿತ್ತೋ ಅವರೇ ಆರೋಪಿಗಳಿಗೆ ರೆಡ್‌ ಕಾರ್ಪೆಟ್‌ ಹಾಕಿದಾರೆ ಎಂದೂ ಆರ್‌.ಅಶೋಕ್‌ ಕಾಂಗ್ರೆಸ್‌ ವಿರುದ್ದ ಕೂಗಾಡಿದರು.

ನೀವೇ ಯಾಕೆ ಮಾಡಿಸಿರಬಾರದು ಎಂದ ದಿನೇಶ್‌ ಗುಂಡೂರಾವ್‌;

ನೀವೇ ಯಾಕೆ ಮಾಡಿಸಿರಬಾರದು ಎಂದ ದಿನೇಶ್‌ ಗುಂಡೂರಾವ್‌; ಅಶೋಕ್‌ ಮಾತಿಗೆ ಸಚಿವ ದಿನೇಶ್‌ ಗುಂಡೂರಾವ್‌ ಮಧ್ಯಪ್ರವೇಶ ಮಾಡಿದರು.. ನೀವೇ ಯಾಕೆ ಹೀಗೆ ಮಾಡಿಸಿರಬಾರದು. ಕಾಂಗ್ರೆಸ್‌ಗೆ ಕೆಟ್ಟ ಹೆಸರು ತರಲು ಹೀಗೆ ಕೂಗಿಸಿರಬಹುದಲ್ಲವೇ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರೂ ಧ್ವನಿಗೂಡಿಸಿದರು. ತನಿಖೆಯಾಗಲಿ, ಯಾರಾದರೂ ತಪ್ಪು ಮಾಡಿದ್ದರೆ ಕ್ರಮ ಆಗುತ್ತದೆ ಎಂದು ಹೇಳಿದರು. ಇದರಿಂದಾಗಿ ಎರಡೂ ಕಡೆಯಿಂದ ವಾಗ್ಯುದ್ಧಗಳು ನಡೆದವು.

ಇದನ್ನೂ ಓದಿ; Breathing Exercises; ಉಸಿರಾಟ ವ್ಯಾಯಾಮದ 7 ಪ್ರಯೋಜನಗಳೇನು..?

 

Share Post