Politics

Loksabha election; ಕರಾವಳಿಯ 3 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಬದಲು..?

ಕರ್ನಾಟಕದ ಕರಾವಳಿ ಭಾಗದ ರಾಜಕೀಯ ವಿಭಿನ್ನವಾಗಿರುತ್ತದೆ. ಇಲ್ಲಿ ಅಭಿವೃದ್ಧಿ ವಿಚಾರಗಳಿಗಿಂತ ಧರ್ಮ, ಜಾತಿ ವಿಚಾರವೇ ಹೆಚ್ಚು ಕೆಲಸ ಮಾಡುತ್ತದೆ.. ಕೋಮು ದ್ವೇಷ, ಕೋಮು ಗಲಭೆಗಳು ಇಲ್ಲಿ ಹೆಚ್ಚು.. ಕರ್ನಾಟಕದ ಕರಾವಳಿ ಭಾಗದಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಕೂಡಾ ಬಿಜೆಪಿ ತೆಕ್ಕೆಯಲ್ಲಿವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸಾಕಷ್ಟು ಪ್ರಾಬಲ್ಯ ಹೊಂದಿದೆ. ಹಿಂದುತ್ವದ ಕಾರಣಕ್ಕಾಗಿ ಇಲ್ಲಿ ಅಭಿವೃದ್ಧಿ ಮಾಡದಿದ್ದರೂ ಜನ ಬಿಜೆಪಿಗೆ ಮತ ಹಾಕುತ್ತಾರೆ. ಆದ್ರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ.. ಈ ಹಿನ್ನೆಲೆಯಲ್ಲಿ ಈ ಮೂರು ಕ್ಷೇತ್ರಗಳಲ್ಲಿ ಯಾರು ಗೆಲ್ತಾರೆ ಅನ್ನೋದರ ಬಗ್ಗೆ ಕುತೂಹಲ ಇದೆ.

ಇದನ್ನೂ ಓದಿ; DK Shivakumar; ಬೆಂಗಳೂರಿನ ನೀರಿನ ಸಮಸ್ಯೆ ನೀಗಿಸಲು ಕ್ರಮ; ಡಿಕೆಶಿ

ದಕ್ಷಿಣ ಕನ್ನಡದಲ್ಲಿ ಯಾರು ಗೆಲ್ತಾರೆ..?;

ದಕ್ಷಿಣ ಕನ್ನಡದಲ್ಲಿ ಯಾರು ಗೆಲ್ತಾರೆ..?; ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ವರ್ಷದ ಹಿಂದೆ ಹಿಂದೂ ಪರ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯಾಗಿತ್ತು.. ಈ ಘಟನೆ ಸಾಕಷ್ಟು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿತ್ತು.. ಇದಲ್ಲದೆ, ಇಲ್ಲಿ ಉಗ್ರ ಚಟುವಟಿಕೆಗಳು, ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ, ಲವ್‌ ಜೀಹಾದ್‌ ಇಂತಹ ವಿಚಾರಗಳು ಇಲ್ಲಿನ ಚುನಾವಣೆಗಳಲ್ಲಿ ಸಾಕಷ್ಟು ಕೆಲಸ ಮಾಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟರು ಹಾಗೂ ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಚುನಾವಣಾ ಫಲಿತಾಂಶವನ್ನು ಇವರಿಂದಲೇ ನಿರ್ಧಾರವಾಗುತ್ತದೆ. ಸದ್ಯ ಇಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಸಂಸದರಾಗಿದ್ದಾರೆ. ಸತತ ಮೂರು ಬಾರಿ ಅವರು ಇಲ್ಲಿ ಸಂಸದರಾಗಿದ್ದಾರೆ. ಆದ್ರೆ ಈ ಬಾರಿ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಡೊದು ಡೌಟು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; Actress Trisha; 25 ಲಕ್ಷ ರೂಪಾಯಿ ಪಡೆದು ರೆಸಾರ್ಟ್‌ಗೆ ಬಂದಿದ್ದರಾ ತ್ರಿಷಾ..?

ಉತ್ತರ ಕನ್ನಡದಲ್ಲಿ ಅನಂತ್‌ಕುಮಾರ್‌ ಸಿಗುತ್ತಾ ಟಿಕೆಟ್‌..?;

ಉತ್ತರ ಕನ್ನಡದಲ್ಲಿ ಅನಂತ್‌ಕುಮಾರ್‌ ಸಿಗುತ್ತಾ ಟಿಕೆಟ್‌..?; ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳೇಪೈಕ ಎಂಬ ಸಮುದಾಯದವರು ಹೆಚ್ಚಿದ್ದಾರೆ. ಇಲ್ಲಿನ ಸಂಸದ ಅನಂತ್‌ಕುಮಾರ್‌ ಹೆಗ್ಡೆ ಎರಡು ವರ್ಷದಿಂದ ಹೊರಗೇ ಬಂದಿರಲಿಲ್ಲ. ಇದೀಗ ಅವರೇ ಪ್ರಚಾರ ಮಾಡಲು ಶುರು ಮಾಡಿದ್ದಾರೆ. ಇನ್ನು ಶಾಸಕ ಸುನಿಲ್‌ ಕುಮಾರ್‌ ಅವರು ಕಾರ್ಕಳದಲ್ಲಿ ಪರಶುರಾಮನ ಥೀಮ್‌ ಪಾರ್ಕ್‌ನಲ್ಲಿ ಅಕ್ರಮ ಮಾಡಿದ್ದಾರೆಂಬ ಆರೋಪವಿದೆ. ಇನ್ನು ಈ ಬಾರಿ ಈ ಕ್ಷೇತ್ರದಲ್ಲಿ ಒಂದಷ್ಟು ಕಾಂಗ್ರೆಸ್‌ ಶಾಸಕರು ಗೆದ್ದಿದ್ದಾರೆ. ಹೀಗಾಗಿ, ಈ ವಿಚಾರಗಳು ಫಲಿತಾಂಶವನ್ನು ನಿರ್ಧರಿಸುತ್ತವೆ.

ಇದನ್ನೂ ಓದಿ; Dangal Movie; ದಂಗಲ್‌ ಸಿನಿಮಾದ ಬಾಲನಟಿ ಸುಹಾನಿ ಇನ್ನಿಲ್ಲ!

ಉಡುಪಿ-ಚಿಕ್ಕಮಗಳೂರಲ್ಲಿ ಶೋಭಾಗೆ ಮತ್ತೆ ಚಾನ್ಸ್‌ ಇದೆಯಾ..?

ಉಡುಪಿ-ಚಿಕ್ಕಮಗಳೂರಲ್ಲಿ ಶೋಭಾಗೆ ಮತ್ತೆ ಚಾನ್ಸ್‌ ಇದೆಯಾ..?; ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿದ್ದಾರೆ.. ಇಲ್ಲಿ ಒಕ್ಕಲಿಗ ಮತಗಳು ಹೆಚ್ಚು.. ಇಲ್ಲೂ ಕೂಡಾ ಹಿಂದುತ್ವ ಹೆಚ್ಚು ಕೆಲಸ ಮಾಡುತ್ತದೆ. ಜೊತೆಗೆ ಉಡುಪಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವ ವಿಚಾರ ಸಂಬಂಧ ದೊಡ್ಡ ವಿವಾದವಾಗಿತ್ತು. ಇನ್ನೊಂದೆಡೆ ಬಾಬಾ ಬುಡನ್‌ ಗಿರಿ ವಿಚಾರವೂ ಇಲ್ಲಿ ಆಗ ವಿವಾದಕ್ಕೆ ಕಾರಣವಾಗುತ್ತದೆ. ಈ ಎಲ್ಲಾ ವಿಚಾರಗಳು ಈ ಬಾರಿ ಚುನಾವಣೆಯ ವಿಷಯವಾಗಲಿವೆ.

Share Post