ಕೇಂದ್ರಕ್ಕೆ ನಾವು ಕೊಡ್ತಿರುವ ತೆರಿಗೆ ಎಷ್ಟು..? ; ಅಲ್ಲಿಂದ ನಮಗೆ ಬರ್ತಿರೋದೆಷ್ಟು..?; ಸಿದ್ದರಾಮಯ್ಯ
ಬೆಂಗಳೂರು; ಕೇಂದ್ರ ಸರ್ಕಾರದವರು ನಮ್ಮ ರಾಜ್ಯಕ್ಕೆ ಬರಬೇಕಿರುವ ತೆರಿಗೆ ಹಣವನ್ನು ಕೊಡದೆ ವಂಚಿಸುತ್ತಿದ್ದಾರೆ ಎಂದು ನೂತನ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಮೊದಲ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?
ನಾವು ರಾಜ್ಯದಿಂದ ಪ್ರತಿ ವರ್ಷ ಸುಮಾರು 4 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುತ್ತೇವೆ
ಅದರಲ್ಲಿ ಕೇಂದ್ರ ಸರ್ಕಾರದವರು ನಮಗೆ ಕೊಡುತ್ತಿರೋದು ಕೇವಲ ಐವತ್ತು ಸಾವಿರ ಕೋಟಿ ರೂಪಾಯಿ
ನಿಯಮದ ಪ್ರಕಾರ ನಮಗೆ ಕೇಂದ್ರ ಸರ್ಕಾರ ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಕೊಡಬೇಕು
ಆದ್ರೆ, ಕೇಂದ್ರದವರು 27 ಸಾವಿರ ಕೋಟಿ ರೂ ತೆರಿಗೆ ಪಾಲು, 13 ಸಾವಿರ ಕೋಟಿ ರೂ. ಕೇಂದ್ರದ ಸಹಾಯಧನ ಎಂದು ಕೊಡುತ್ತಿದ್ದಾರೆ
ಈ ವರ್ಷ ವಿಶೇಷ ಅನುದಾನದಡಿಯಲ್ಲಿ ನಮ್ಮ ರಾಜ್ಯಕ್ಕೆ 5495 ಕೋಟಿ ರೂಪಾಯಿ ನೀಡಬೇಕೆಂದು 15ನೇ ಪೈನಾನ್ಸ್ ಕಮೀಷನ್ ರೆಕಮೆಂಡ್ ಮಾಡಿತ್ತು
ನಮ್ಮ ಸಿಎಂ ಬೊಮ್ಮಾಯಿಯವರು ಸಮರ್ಥವಾಗಿ ವಾದ ಮಾಡಿ ಈ ಹಣ ಪಡೆದುಕೊಲ್ಳಬೇಕಿತ್ತು
ಆದ್ರೆ ಸಿಎಂ ಬೊಮ್ಮಾಯಿಯವರು ಸರಿಯಾಗಿ ಬೇಡಿಕೆ ಇಡದ ಕಾರಣ ಆ ಹಣ ಕೇಂದ್ರದಲ್ಲೇ ಉಳಿಯಿತು