Cinema

Karimani maaleeka; ಇವರೇ ನೋಡಿ ʻಕರಿಮಣಿ ಮಾಲೀಕʼ ಹಾಡಿನ ಗಾಯಕಿ!

ಬೆಂಗಳೂರು; ಉಪೇಂದ್ರ ಹಾಗೂ ಪ್ರೇಮಾ ನಟನೆಯ `ಉಪೇಂದ್ರʼ ಚಿತ್ರದ ʻಕರಿಮಣಿ ಮಾಲೀಕ ನೀನಲ್ಲʼ  ಎಂಬ ಹಾಡು ಈಗ ಸಖತ್‌ ಟ್ರೆಂಡಿಂಗ್‌ನಲ್ಲಿದೆ. ಈ ಹಾಡನನ್ನು ಎಡಿಟ್‌ ಮಾಡಿ ಸಾಕಷ್ಟು ಟ್ರೆಂಡ್‌ ಮಾಡಲಾಗುತ್ತಿದೆ. 25 ವರ್ಷಗಳ ಹಿಂದೆ ಉಪೇಂದ್ರ ಸಿನಿಮಾ ರಿಲೀಸ್‌ ಆದಾಗ ಈ ಹಾಡು ಅಷ್ಟೊಂದು ಜನಪ್ರಿಯತೆ ಗಳಿಸಿರಲಿಲ್ಲ. ಆದ್ರೆ ಈಗ ಸಾಕಷ್ಟು ವೈರಲ್‌ ಆಗುತ್ತಿದೆ. ಅಂದಹಾಗೆ, ಈ ಹಾಡನ್ನು ಹಾಡಿದವರು ಪ್ರತಿಮಾ ರಾವ್‌… ಕೆಲ ದಿನಗಳಿಂದ ಕರಿಮಣಿ ಮಾಲೀಕ ಹಾಡು ಸಾಕಷ್ಟು ವೈರಲ್‌ ಆಗುತ್ತಿದ್ದರೂ, ಮೂಲ ಹಾಡಿನ ಗಾಯಕಿಯ ಸುಳಿವೇ ಸಿಕ್ಕಿರಲಿಲ್ಲ. ಇದೀಗ, ಮೂಲ ಗಾಯಕಿ ಸಿಕ್ಕಿದ್ದಾರೆ. ಅವರೀಗ ವಿದೇಶದಲ್ಲಿ ನೆಲೆಸಿದಿದ್ದಾರೆ.

ಇದನ್ನೂ ಓದಿ; Miss World 2024; ವಿಶ್ವಸುಂದರಿ ಆಗ್ತಾರಾ ಈ ಕನ್ನಡದ ಬ್ಯೂಟಿ..?

ವಿದೇಶದಲ್ಲಿ ನೆಲೆಸಿರುವ ಪ್ರತಿಮಾ ರಾವ್‌;

ವಿದೇಶದಲ್ಲಿ ನೆಲೆಸಿರುವ ಪ್ರತಿಮಾ ರಾವ್‌; ಉಪೇಂದ್ರ ಚಿತ್ರ 25 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಆಗ ಆ ಚಿತ್ರಕ್ಕಾಗಿ ಈ ಹಾಡನ್ನು ಹಾಡಿದವರು ಪ್ರತಿಮಾ ರಾವ್‌ ಎಂಬ ಗಾಯಕಿ.. ಅವರೀಗ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ.. ಹೆಸರು ಕೂಡಾ ಬದಲಾಯಿಸಿಕೊಂಡಿದ್ದಾರೆ.. ಇದೀಗ ಪ್ರತಿಮಾ ರಾವ್‌ ಅವರ ಹೆಸರು ರಾಧಿಕಾ ರಾವ್‌..

ರಾಧಿಕಾ ರಾವ್‌ ಈಗ ಭಾರತದಲ್ಲಿಲ್ಲ. ವಿದೇಶದಲ್ಲಿ ನೆಲೆಸಿದ್ದಾರೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅವರು ವಾಸ್‌  ಮಾಡುತ್ತಾರೆ.. ಹೀಗಾಗಿ ಹಾಡು ಇಷ್ಟು ವೈರಲ್‌ ಆಗುತ್ತಿದ್ದರೂ ಅವರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಹೆಸರು ಕೂಡಾ ಬದಲಾವಣೆ ಮಾಡಿಕೊಂಡಿದ್ದರಿಂದ ಹಾಡಿನ ಗಾಯಕಿ ಯಾರು ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಇತ್ತು. ಇದೀಗ ಹಾಡಿನ ಗಾಯಕಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ; Dhruva Sarja; ವಿಮಾನ ದುರಂತದಿಂದ ಪಾರಾದ ಧ್ರುವ ಸರ್ಜಾ & ಮಾರ್ಟಿನ್‌ ಟೀಂ

ರೀಲ್ಸ್‌ನಲ್ಲಿ ಹೆಚ್ಚು ಟ್ರೆಂಡಿಂಗ್‌;

ರೀಲ್ಸ್‌ನಲ್ಲಿ ಹೆಚ್ಚು ಟ್ರೆಂಡಿಂಗ್‌; ಉಪೇಂದ್ರ ಸಿನಿಮಾದ ʻಏನಿಲ್ಲ ಏನಿಲ್ಲʼ ಹಾಡಿನ ಒಂದೆರಡು ಸಾಲುಗಳು ಮಾತ್ರ ಟ್ರೆಂಡಿಂಗ್‌ನಲ್ಲಿದೆ. ಅದೂ ಕೂಡಾ ಕರಿಮಣಿ ಮಾಲೀಕ ನೀನಲ್ಲ ಎಂಬ ಲೈನ್‌ ಸಖತ್‌ ವೈರಲ್‌ ಆಗುತ್ತಿದೆ. ಈ ಸಾಲುಗಳನ್ನಿಟ್ಟುಕೊಂಡು ನೆಟ್ಟಿಗರು, ರೀಲ್ಸ್‌ ಮಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಇದೇ ಹಾಡು ಕೇಳಿಸುತ್ತಿದೆ. ಕೆಲವರು ಇದನ್ನು ರಿ ಮಿಕ್ಸ್‌ ಕೂಡಾ ಮಾಡಿ ವೈರಲ್‌ ಮಾಡುತ್ತಿದ್ದಾರೆ.

 

ರೀಲ್ಸ್‌ ಮಾಡಿದ್ದರಿಂದ ಒಬ್ಬ ಆತ್ಮಹತ್ಯೆ;

ರೀಲ್ಸ್‌ ಮಾಡಿದ್ದರಿಂದ ಒಬ್ಬ ಆತ್ಮಹತ್ಯೆ; ಚಾಮರಾಜನಗರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಗಂಡನ ಜೊತೆ ಸೇರಿ ಇದೇ ಹಾಡಿಗೆ ರೀಲ್ಸ್‌ ಮಾಡಿದ್ದರು. ಇದನ್ನು ನೋಡಿದ ಗ್ರಾಮದ ಜನ ಕರಿಮಣಿ ಮಾಲೀಕ ನೀನಲ್ಲವೇನೋ ಅಂತ ಗಂಡನನ್ನು ರೇಗಿಸುತ್ತಿದ್ದರಂತೆ. ಇದರಿಂದ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡಾ ನಡೆದಿತ್ತು.

ಇದನ್ನೂ ಓದಿ; Miss World 2024; ವಿಶ್ವಸುಂದರಿ ಆಗ್ತಾರಾ ಈ ಕನ್ನಡದ ಬ್ಯೂಟಿ..?

 

Share Post