ಸಿದ್ದರಾಮಯ್ಯಗೆ ಕುರ್ಚಿ ಕಂಟಕ, ಡಿಕೆಶಿ ಮುಂದಿನ ಸಿಎಂ; ಪೂಜಾರಿ ಭವಿಷ್ಯ
ಬೆಂಗಳೂರು(Bengaluru); ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಳ್ಳಲಿದ್ದು, ಡಿ.ಕೆ.ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಯಾದಗಿರಿ ಜಿಲ್ಲೆ ಗೋನಾಳ ಗ್ರಾಮದ ಗಡೇ ದುರ್ಗಾದೇವಿ ದೇಗುಲದ ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ನುಡಿದಿದ್ದಾರೆ.. ಜಾರಕಿಹೊಳಿ ಸಹೋದರರಿಂದ ಸಿದ್ದರಾಮಯ್ಯ ಸರ್ಕಾರ ಪತನವಾಗಲಿದ್ದು, ಸತೀಶ್ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಹುದ್ದೆಗಾಗಿ ಫೈಟ್ ನಡೆಯಲಿದೆ ಎಂದು ಅವರು ಹೇಳಿದ್ದಾರೆ..
ಇದನ್ನೂ ಓದಿ; ಮೈಸೂರು ಬಳಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ!
ವಿಧಾನಸಭಾ ಚುನಾವಣೆಗೂ ಮುಂಚೆ ಅರ್ಚಕ ಮಹಾದೇವಪ್ಪ ಪೂಜಾರಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ಭವಿಷ್ಯ ನುಡಿದಿದ್ದರು.. ಅದು ನಿಜವಾಗಿತ್ತು.. ಡಿ.ಕೆ.ಶಿವಕುಮಾರ್ ಅವರು ಈ ದೇವಸ್ಥಾನಕ್ಕೂ ನಡೆದುಕೊಳ್ಳುತ್ತಾರೆ.. ಈ ಹಿಂದೆ ಅವರು ದೇಗುಲಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಕೂಡಾ ಪಡೆದಿದ್ದರು.. ಇನ್ನು ಸಿಎಂ ಸ್ಥಾನದ ಬಗ್ಗೆ ಮಾತನಾಡಿರುವ ಮಹಾದೇವಪ್ಪ ಪೂಜಾರಿ, ನನ್ನ ಕನಸಿನಲ್ಲಿ ದೇವಿ ಬಂದು 9 ಜನ ಸಿಎಂ ಆಕಾಂಕ್ಷಿಗಳಿದ್ದಾರೆ, ಇದರಲ್ಲಿ ಇಬ್ಬರಿಗೆ ಸ್ಥಾನ ನೀಡಲು ನನಗೆ ದೇವಿ ಪ್ರೇರಣೆ ನೀಡಿದಳು.. ನಾನು ಡಿ.ಕೆ.ಶಿವಕುಮಾರ್‌ಗೆ ಹಾರ ಹಾಕು ಎಂದು ಹೇಳಿದ್ದೆ. ಆದ್ರೆ ದೇವಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದಳು.. ಹೀಗಾಗಿ ಮೊದಲ ಅವಧಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದು, ಈಗ ಡಿ.ಕೆ.ಶಿವಕುಮಾರ್‌ಗೆ ಸಿಎಂ ಆಗುವ ಸಮಯ ಬಂದಿದೆ ಎಂದು ಹೇಳಿದ್ದಾರೆ..
ಇದನ್ನೂ ಓದಿ; ನಿತ್ಯ ನೀವು ಮೊಸರು ಸೇವಿಸ್ತೀರಾ..?; ಹಾಗಾದ್ರೆ ಈ ಸುದ್ದಿ ಓದಲೇಬೇಕು!
ಇನ್ನೂ ಮುಂದುವರೆದು ಮಾತನಾಡಿರುವ ಅರ್ಚಕರು, ನನ್ನ ಕನಸಿನಲ್ಲಿ ಸಚಿವ ಎಂ.ಬಿ.ಪಾಟೀಲ್ ಬಂದಿದ್ದು, ಲಿಂಗಾಯತರನ್ನು ಪಕ್ಷದಲ್ಲಿ ಕಡೆಗಣಿಸುತ್ತಿದ್ದಾರೆ. ಸರ್ಕಾರ ಬೀಳಿಸುತ್ತೀರಾ ಎಂದು ಕೇಳಿದ್ದರು.. ಅದಕ್ಕೆ ನಾನು ಬೀಳುತ್ತೆ ಎಂದು ಹೇಳಿದ್ದೇನೆ ಎಂದು ಅರ್ಚಕರು ಹೇಳಿದ್ದಾರೆ..