CinemaHealth

Dangal Movie; ದಂಗಲ್‌ ಸಿನಿಮಾದ ಬಾಲನಟಿ ಸುಹಾನಿ ಇನ್ನಿಲ್ಲ!

ಬಾಲಿವುಡ್‌ನಿಂದ ದುಃಖದ ಸುದ್ದಿಯೊಂದು ಬಂದಿದೆ. ಆಮೀರ್‌ ಖಾನ್‌  ಅವರ ಬ್ಲಾಕ್ ಬಸ್ಟರ್ ಚಿತ್ರ ‘ದಂಗಲ್’ನಲ್ಲಿ ನಟಿಸಿದ್ದ ಬಾಲನಟಿ ಸುಹಾನಿ ಭಟ್ನಾಗರ್ ಸಾವನ್ನಪ್ಪಿದ್ದಾರೆ. ದಂಗಲ್‌ ಚಿತ್ರದಲ್ಲಿ ಬಬಿತಾ ಫೋಗಟ್ ಪಾತ್ರದಲ್ಲಿ ಸುಹಾನಿ ಮನೋಜ್ಞವಾಗಿ ಅಭಿನಯಿಸಿದ್ದರು. ಅವರಿಗೆ ಈಗ 19 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಹಾನಿ, ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಈ ಸುದ್ದಿ ಕೇಳಿ ಇಡೀ ಚಿತ್ರರಂಗ ಕಣ್ಣೀರಾಕುತ್ತಿದೆ. ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ.

ಅಪಘಾತ ಹಾಗೂ ಔಷಧಿಗಳ ಅಡ್ಡ ಪರಿಣಾಮ ಕಾರಣ!;

ಸುಹಾನಿ ನಿಧನರಾದಾಗ ಅವರ ದೇಹದ ತುಂಬಾ ನೀರು ತುಂಬಿತ್ತು.. ಔಷಧಿಗಳ ಅಡ್ಡಪರಿಣಾಮದಿಂದ ಸುಹಾನಿಗೆ ಈ ಸ್ಥಿತಿ ಬಂದಿತ್ತು ಎಂದು ಹೇಳಲಾಗುತ್ತಿದೆ. ಅಂದಹಾಗೆ 19 ವರ್ಷದ ಸುಹಾನಿ ಇತ್ತೀಚೆಗೆ ನಡೆದ ಅಪಘಾತವೊಂದರಲ್ಲಿ ಗಾಯಗೊಂಡಿದ್ದಳು. ಕಾಲು ಮುರಿತವಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ನೀಡಿದ ಔಷಧಿಗಳಿಂದ ಆಕೆ ಆರೋಗ್ಯದ ಮೇಲೆ ಅಡ್ಡ ಪರಿಣಾಮವಾಗಿತ್ತೆಂದು ತಿಳಿದುಬಂದಿದೆ.

ದೇಹದಲ್ಲಿ ನೀರು ತುಂಬಿಕೊಂಡಿತ್ತು..!

ಸುಹಾನಿ ದೇಹದ ತುಂಬಾ ನೀರು ತುಂಬಿಕೊಂಡಿತ್ತು. ಸಾಕಷ್ಟು ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗಲಿಲ್ಲ. ಕೆಲ ದಿನಗಳಿಂದ ಸುಹಾನಿ ತೀವ್ರ ಅಸ್ವಸ್ಥಳಾಗಿದ್ದಳು ಎಂದು ತಿಳಿದುಬಂದಿದೆ. ಸುಹಾನಿ ಹಲವು ದಿನಗಳಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಇಂದು ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.  ಸುಹಾನಿ ಸಾವಿಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ದೊಡ್ಡ ಹೆಸರು ಮಾಡಿದ್ದ ಸುಹಾನಿ;

ಚಿಕ್ಕ ವಯಸ್ಸಿನಲ್ಲೇ ಸುಹಾನಿ ದೊಡ್ಡ ಹೆಸರು ಮಾಡಿದವರು. ಆಮೀರ್ ಖಾನ್ ಅವರ ಬ್ಲಾಕ್‌ ಬಸ್ಟರ್‌ ಚಿತ್ರ ‘ದಂಗಲ್’ (2016) ನಲ್ಲಿ ಬಬಿತಾ ಫೋಗಟ್ ಪಾತ್ರವನ್ನು ನಿರ್ವಹಿಸಿದ್ದರು. ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದರು. ಚಿತ್ರದಲ್ಲಿ ಆಕೆಯ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದಲ್ಲದೆ, ಅವರು ಹಲವಾರು ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ‘ದಂಗಲ್’ ನಂತರ ಸುಹಾನಿ ಅನೇಕ ಚಿತ್ರಗಳಿಂದ ಆಫರ್‌ಗಳನ್ನು ಪಡೆದಿದ್ದರೂ ನಟನೆಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆಕೆ ತನ್ನ ಅಧ್ಯಯನದತ್ತ ಗಮನ ಹರಿಸಲು ಬಯಸಿದ್ದರು. ಅನೇಕ ಸಂದರ್ಶನಗಳಲ್ಲಿ, ಸುಹಾನಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಚಿತ್ರರಂಗಕ್ಕೆ ಮರಳಲು ಯೋಚಿಸುತ್ತಿರುವುದಾಗಿ ಹೇಳಿದ್ದರು. ಆದರೆ ಅದು ಈಡೇರದ ಆಸೆಯಾಗಿಯೇ ಉಳಿದಿದೆ.

Share Post