Politics

`ನಾರಿ ನ್ಯಾಯʼ ಮಾಡುತ್ತಾರಂತೆ ಕಾಂಗ್ರೆಸ್ಸಿಗರು; ಲೋಕಸಭಾ ಚುನಾವಣೆಗೂ ಕಾಂಗ್ರೆಸ್‌ ಗ್ಯಾರೆಂಟಿ!

ಬೆಂಗಳೂರು; ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಉಚಿತ ಘೋಷಣೆಗಳನ್ನು ಮಾಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಪಕ್ಷ ಈಗ ಲೋಕಸಭಾ ಚುನಾವಣೆಗೂ ಅದೇ ರೀತಿಯ ಭರವಸೆಗಳನ್ನು ಘೋಷಣೆ ಮಾಡಿದೆ. ಇಂದು ಐದು ಘೋಷಣೆಗಳ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಪಕ್ಷ ರಿಲೀಸ್‌ ಮಾಡಿದೆ. ಇದಕ್ಕೆ `ನಾರಿ ನ್ಯಾಯ್‌ʼ ಎಂದು ಹೆಸರಿಡಲಾಗಿದೆ. ಕರ್ನಾಟಕ, ತೆಲಂಗಾಣದಲ್ಲಿ ನಡೆದ ಚುನಾವಣೆ ವೇಳೆಯೂ ಮಹಿಳೆಯರಿಗೆ ಹೆಚ್ಚಿನ ಯೋಜನೆಗಳನ್ನು ಘೋಷಿಸೋದಾಗಿ ಭರವಸೆ ನೀಡಲಾಗಿತ್ತು. ಗ್ಯಾರೆಂಟಿಗಳನ್ನು ನೀಡಲಾಗಿತ್ತು.. ಈಗ ಲೋಕಸಭೆಯಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ.

ಇದನ್ನೂ ಓದಿ; ಶಂಕಿತ ಉಗ್ರನನ್ನು ಸಂಪರ್ಕಿಸಿದ್ದ ಯುವಕ ಸಿಕ್ಕಿಬಿದ್ದ; ಬಾಂಬರ್‌ ಹಿಡಿಯೋದು ಈಗ ಸುಲಭ!

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗಯವರು ಸಾಮಾಜಿಕ ಜಾಲತಾಣದಲ್ಲಿ ಈ ಘೋಷಣೆಗಳ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಬಡ ಮಹಿಳೆಯರಿಗೆ ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ನೋಡೋದಾಗಿ ಹೇಳಿಕೊಳ್ಳಲಾಗಿದೆ. ಜೊತೆಗೆ ಸರ್ಕಾರಿ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಹಕ್ಕು ನೀಡೋದಾಗಿ ಹೇಳಿಕೊಂಡಿದೆ.

ಇದನ್ನೂ ಓದಿ; ಸಂಜೆ ವೇಳೆಗೆ ಬಿಜೆಪಿ 2ನೇ ಪಟ್ಟಿ ರಿಲೀಸ್‌?; ರಾಜ್ಯದಲ್ಲಿ ಇವರಿಗೇ ನೋಡಿ ಟಿಕೆಟ್‌..!

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮಾಡಿರುವ 5 ಘೋಷಣೆಗಳು;

1. ಮಹಾಲಕ್ಷ್ಮಿ ಗ್ಯಾರಂಟಿ: ಇದರ ಅಡಿಯಲ್ಲಿ, ಬಡ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ನೀಡಲಾಗುತ್ತದೆ.

2. ಆದಿ ಆಬಾಧಿ ಪೂರಾ ಹಕ್​: ಇದರ ಅಡಿಯಲ್ಲಿ, ಕೇಂದ್ರ ಸರ್ಕಾರದ ಹೊಸ ನೇಮಕಾತಿಗಳಲ್ಲಿ ಮಹಿಳೆಯರಿಗೆ ಅರ್ಧದಷ್ಟು ಹಕ್ಕುಗಳು ಸಿಗುತ್ತವೆ.

3. ಶಕ್ತಿ ಕಾ ಸಮ್ಮಾನ್: ಈ ಯೋಜನೆಯಡಿ ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನಕ್ಕೆ ಕೇಂದ್ರ ಸರ್ಕಾರದ ಕೊಡುಗೆಯನ್ನು ದ್ವಿಗುಣಗೊಳಿಸಲಾಗುವುದು.

4. ಅಧಿಕಾರ ಮೈತ್ರಿ: ಇದರ ಅಡಿಯಲ್ಲಿ, ಮಹಿಳೆಯರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅಗತ್ಯ ಸಹಾಯವನ್ನು ಒದಗಿಸಲು ಪ್ರತಿ ಪಂಚಾಯತ್‌ನಲ್ಲಿ ಪ್ಯಾರಾ-ಲೀಗಲ್ ಅಂದರೆ ಕಾನೂನು ಸಹಾಯಕರನ್ನು ಅಧಿಕಾರ ಮೈತ್ರಿಯಾಗಿ ನೇಮಿಸಲಾಗುತ್ತದೆ.

5. ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್: ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗಿ ಮಹಿಳೆಯರಿಗಾಗಿ ಕನಿಷ್ಠ ಒಂದು ಹಾಸ್ಟೆಲ್ ಅನ್ನು ನಿರ್ಮಿಸಲಾಗುವುದು ಮತ್ತು ಇಡೀ ದೇಶದಲ್ಲಿ ಈ ಹಾಸ್ಟೆಲ್ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು.

ಇದನ್ನೂ ಓದಿ; ನಾಳೆಯೇ ಬಿಜೆಪಿ ಸೇರಲಿದ್ದಾರೆ ದೇವೇಗೌಡರ ಅಳಿಯ; ಬೆಂಗಳೂರು ಗ್ರಾ.ಕ್ಕೆ ಡಾ.ಸಿ.ಎನ್‌.ಮಂಜುನಾಥ್‌ ಗೆ ಟಿಕೆಟ್‌ ಕನ್ಫರ್ಮ್‌!

ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಮಾಡಿದ್ದ ಘೋಷಣೆಗಳು; ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ, ಹೆಣ್ಣು ಮಕ್ಕಳಿಗೆ ಉಚಿತ ಬಸ್‌ ಪ್ರಯಾಣ, ನಿರುದ್ಯೋಗಿಗಳಿಗೆ ಎರಡು ವರ್ಷ ನಿರುದ್ಯೋಗಿ ಭತ್ಯೆ, ಉಚಿತ ವಿದ್ಯುತ್‌ ಹೀಗೆ ಹಲವು ಯೋಜನೆಗಳನ್ನು ಜಾರಿ ಮಾಡೋದಾಗಿ ಹೇಳಲಾಗಿತ್ತು. ಅವುಗಳನ್ನು ಎರಡೂ ಸರ್ಕಾರಗಳು ಜಾರಿ ಮಾಡಿವೆ.. ಈ ಗ್ಯಾರೆಂಟಿಗಳಿಂದಾಗಿ ಜನ ಕಾಂಗ್ರೆಸ್‌ಗೆ ಮತ ಹಾಕಿದ್ದರು.. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ ಗ್ಯಾರೆಂಟಿಗಳ ಮೊರೆ ಹೋಗಿದೆ. ಇದರಿಂದ ಕಾಂಗ್ರೆಸ್‌ಗೆ ಅನುಕೂಲವಾಗುತ್ತೋ ಇಲ್ಲವೋ ನೋಡಬೇಕು.

 

Share Post