Politics

ನಾಳೆಯೇ ಬಿಜೆಪಿ ಸೇರಲಿದ್ದಾರೆ ದೇವೇಗೌಡರ ಅಳಿಯ; ಬೆಂಗಳೂರು ಗ್ರಾ.ಕ್ಕೆ ಡಾ.ಸಿ.ಎನ್‌.ಮಂಜುನಾಥ್‌ ಗೆ ಟಿಕೆಟ್‌ ಕನ್ಫರ್ಮ್‌!

ಬೆಂಗಳೂರು; ದೇವೇಗೌಡರ ಅಳಿಯ ಹಾಗೂ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಸಿ.ಎನ್‌.ಮಂಜುನಾತ್‌ ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅಖಾಡಕ್ಕಿಳಿಯೋದು ಬಹುತೇಕ ಫಿಕ್ಸ್‌ ಆಗಿದೆ.. ಅವರು ನಾಳೆಯೇ ಬಿಜೆಪಿ ಸೇರುತ್ತಿದ್ದಾರೆ.. ಈಗಾಗಲೇ ಅವರ ಪರವಾಗಿ ಪ್ರಚಾರ ಕೂಡಾ ಶುರುವಾಗಿದೆ. ಬಿಜೆಪಿ ಹೈಕಮಾಂಡ್‌ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.. ಮಾರ್ಚ್‌ 15ರಂದು ಬಿಜೆಪಿ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಅದಕ್ಕೂ ಮೊದಲು ಡಾ.ಸಿ.ಎನ್‌.ಮಂಜುನಾಥ್‌ ಬಿಜೆಪಿ ಸೇರುತ್ತಿದ್ದಾರೆ.

ಇದನ್ನೂ ಓದಿ; ಶಂಕಿತ ಉಗ್ರನನ್ನು ಸಂಪರ್ಕಿಸಿದ್ದ ಯುವಕ ಸಿಕ್ಕಿಬಿದ್ದ; ಬಾಂಬರ್‌ ಹಿಡಿಯೋದು ಈಗ ಸುಲಭ!

ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ಸೇರಲಿರುವ ಡಾ.ಸಿ.ಎನ್‌.ಮಂಜುನಾಥ್‌!;

ನಾಳೆ ಬೆಳಗ್ಗೆ 10 ಗಂಟೆಗೆ ಡಾ.ಸಿ.ಎನ್‌.ಮಂಜುನಾಥ್‌ ಬಿಜೆಪಿ ಸೇರ್ಪಡೆಗೆ ಸಮಯ ಫಿಕ್ಸ್‌ ಆಗಿದೆ. ಈ ಕಾರ್ಯಕ್ರಮದಲ್ಲಿ‌ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭಾ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್‌, ಬ್ಯಾನರ್‌ಗಳನ್ನು ಕೂಡಾ ರೆಡಿ ಮಾಡಲಾಗಿದೆ.

ಇಂದೇ ಪ್ರಚಾರದಲ್ಲಿ ಭಾಗಿಯಾಗುವ ಡಾ.ಸಿ.ಎನ್‌.ಮಂಜುನಾಥ್‌;

ಡಾ.ಸಿ.ಎನ್‌.ಮಂಜುನಾಥ್‌ ಅವರು ನಾಳೆ ಪಕ್ಷ ಸೇರ್ಪಡೆ ಬಳಿಕ ಅವರಿಗೆ ಅಧಿಕೃತವಾಗಿ ಬಿಜೆಪಿ ಟಿಕೆಟ್‌ ಘೋಷಣೆ ಮಾಡುತ್ತೆ.. ಆದ್ರೆ ಅದಕ್ಕೂ ಮುಂಚೆಯೇ ಡಾ.ಸಿ.ಎನ್‌.ಮಂಜುನಾಥ್‌ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡುತ್ತಿದ್ದಾರೆ. ಇಂದು ಸಂಜೆ 5 ಗಂಟೆಗೆ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಸಿದ್ಧತಾ ಸಭೆಗಳನ್ನು ಇಂದು ಸಂಜೆ ನಡೆಸಲಾಗುತ್ತದೆ. ಡಾ. ಸಿ.ಎನ್. ಮಂಜುನಾಥ್, ಶಾಸಕರಾದ ಮುನಿರತ್ನ, ಕೃಷ್ಣಪ್ಪ, ವಿಧಾನ‌ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಇತರರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ; ಮಾಜಿ ಸಿಎಂ ಸದಾನಂದಗೌಡ ಕಾಂಗ್ರೆಸ್‌ ಸೇರುತ್ತಾರಾ..?; ಡಿ.ಕೆ.ಶಿವಕುಮಾರ್‌ ಈ ಬಗ್ಗೆ ಹೇಳಿದ್ದೇನು..?

ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ವಿರುದ್ಧ ಬಿಗ್‌ ಫೈಟ್‌;

ಡಾ.ಸಿ.ಎನ್‌.ಮಂಜುನಾಥ್‌ ಅವರು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರಾಗಿ ಅವರು ಸಾಕಷ್ಟು ಜನ ಸಾಮಾನ್ಯರ ಪರವಾಗಿ ಕೆಲಸ ಮಾಡಿದ್ದಾರೆ. ಬಡವರಿಗೆ ಉಚಿತ ಸೇವೆ ನೀಡಿ ನೆರವಾಗಿದ್ದಾರೆ.. ಹೀಗಾಗಿ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಪಕ್ಷಾತೀತವಾಗಿ ಅವರನ್ನು ಬೆಂಬಲಿಸುವ ಸಾಕಷ್ಟು ಜನರಿದ್ದಾರೆ. ಇನ್ನು ಸಿ.ಎನ್‌.ಮಂಜುನಾಥ್‌ ಅವರು ದೇವೇಗೌಡರ ಅಳಿಯರಾಗಿದ್ದಾರೆ. ಹೀಗಾಗಿ ಜೆಡಿಎಸ್‌ ಮತಗಳು ಕೂಡಾ ಅವರಿಗೆ ಸಿಗಲಿವೆ.. ಜೆಡಿಎಸ್‌ ಹಾಗೂ ಬಿಜೆಪಿಗೆ ಉತ್ತಮ ವಾತಾವರಣವಿದೆ. ಇದರ ಜೊತೆಗೆ ಸಿ.ಎನ್‌.ಮಂಜುನಾಥ್‌ ಅವರಿಗೆ ಒಳ್ಳೆಯ ಇಮೇಜ್‌ ಇದೆ.. ಈ ಕಾರಣಕ್ಕಾಗಿ ಕಾಂಗ್ರೆಸ್‌ನ ಡಿ.ಕೆ.ಸುರೇಶ್‌ಗೆ ಮಂಜುನಾಥ್‌ ಬಿಗ್‌ ಫೈಟ್‌ ನೀಡಲಿದ್ದಾರೆ..

ಇದನ್ನೂ ಓದಿ; ಮತ್ತೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡೆನ್‌, ಟ್ರಂಪ್‌ ಫೈಟ್‌

ಬೇಕಂತಲೇ ಬಿಜೆಪಿಯಿಂದ ಡಾ.ಸಿ.ಎನ್‌.ಮಂಜುನಾಥ್‌ ಸ್ಪರ್ಧೆ;

ದೇವೇಗೌಡರ ಅಳಿಯರಾಗಿದ್ದರಿಂದ ಜೆಡಿಎಸ್‌ನಿಂದಲೇ ಕಣಕ್ಕಿಳಿಸಬಹುದಿತ್ತು.. ಆದ್ರೆ ಹಾಗೆ ಮಾಡಿದ್ದರೆ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆಪಾದನೆ ಬರುತ್ತಿತ್ತು.. ಈ ಕಾರಣದಿಂದಾಗಿ ಬಿಜೆಪಿ ಹೈಕಮಾಂಡ್‌ ನಾಯಕರೇ ಮಂಜುನಾಥ್‌ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದರು.. ಮೊದಲಿಗೆ ರಾಜಕೀಯಕ್ಕೆ ಬರಲು ಇಷ್ಟವಿಲ್ಲ ಎಂದು ಹೇಳುತ್ತಿದ್ದ ಡಾ.ಸಿ.ಎನ್‌.ಮಂಜುನಾಥ್‌ ಅವರು ಈಗ ಅಖಾಡಕ್ಕೆ ರೆಡಿಯಾಗಿ ನಿಂತಿದ್ದಾರೆ. ಪ್ರಬಲ ಅಭ್ಯರ್ಥಿ ಡಿ.ಕೆ.ಸುರೇಶ್‌ ವಿರುದ್ಧವೇ ತೊಡೆ ತಟ್ಟಿ ನಿಂತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹೋದರನನ್ನು ಸೋಲಿಸಲು ಮಂಜುನಾಥ್‌ ಪಣ ತೊಟ್ಟಿದ್ದಾರೆ. ಅವರಿಗೆ ಇದೊಂದು ಸವಾಲೇ ಆಗಿದೆ..

ಇದನ್ನೂ ಓದಿ; Water Crisis; ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ; ಇವರಿಗೆಲ್ಲಾ ಶೇ.20ರಷ್ಟು ನೀರು ಕಟ್‌!

Share Post