ಈಶ್ವರಪ್ಪ ಬಂಡಾಯವೇಳೋದು ಪಕ್ಕಾನಾ..?; ಕುತೂಹಲ ಕೆರಳಿಸಿದ ನಾಳಿನ ಸಭೆ!
ಶಿವಮೊಗ್ಗ; ಕಳೆದ ವಿಧಾನಸಭಾ ಚುನಾವಣೆ ವೇಳೆಯಲ್ಲೇ ಟಿಕೆಟ್ ಸಿಗದಿದ್ದಕ್ಕೆ ರೆಬೆಲ್ ಆಗಿದ್ದ ಬಿಜೆಪಿ ನಾಯಕ ಈಶ್ವರಪ್ಪ ಈ ಬಾರಿ ಬಹುತೇಕ ಬಂಡಾಯವೇಳುವ ಎಲ್ಲಾ ಲಕ್ಷಣ ಕಾಣುತ್ತಿದೆ. ತಮ್ಮ ಪುತ್ರ ಕಾಂತೇಶ್ ಹಾವೇರಿ ಕ್ಷೇತ್ರದಿಂದ ಈಶ್ವರಪ್ಪ ಟಿಕೆಟ್ ಕೇಳಿದ್ದರು.. ಆದ್ರೆ ಕಾಂತೇಶ್‌ಗೆ ಟಿಕೆಟ್ ಮಿಸ್ ಆಗೋದು ಬಹುತೇಕ ಫಿಕ್ಸ್ ಆಗಿದೆ.. ಇದರಿಂದಾಗಿ ಆಕ್ರೋಶಗೊಂಡಿರುವ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ; ಸಂಜೆ ವೇಳೆಗೆ ಬಿಜೆಪಿ 2ನೇ ಪಟ್ಟಿ ರಿಲೀಸ್?; ರಾಜ್ಯದಲ್ಲಿ ಇವರಿಗೇ ನೋಡಿ ಟಿಕೆಟ್..!
ನಾಳೆ ಬೆಂಬಲಿಗರ ಸಭೆ ಕರೆದಿರುವ ಈಶ್ವರಪ್ಪ;
ಹೈಕಮಾಂಡ್ ಬಗ್ಗೆ ಕೋಪಿಸಿಕೊಂಡಿರುವ ಈಶ್ವರಪ್ಪ ಅವರು ನಾಳೆ ಬೆಂಬಲಿಗರ ಸಭೆ ನಡೆಸಲು ಮುಂದಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ಬೆಂಬಲಿಗರನ್ನೂ ಸೇರಿಸುತ್ತಿರುವ ಈಶ್ವರಪ್ಪ ಅವರು ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚೆ ಮಾಡಲು ಮುಂದಾಗಿದ್ದಾರೆ. ಈಶ್ವರಪ್ಪ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಅಥವಾ ತಮ್ಮ ಮಗನಿಗೆ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಕೇಳಿದ್ದರು.. ಆದ್ರೆ ಬಿಜೆಪಿ ಹೈಕಮಾಂಡ್ ನಿರಾಕರಣೆ ಮಾಡಿತ್ತು. ಇದರಿಂದ ಈಶ್ವರಪ್ಪ ಸಾಕಷ್ಟು ಮುನಿಸಿಕೊಂಡಿದ್ದರು.. ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಅನಂತರ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದು ಈಶ್ವರಪ್ಪ ಅವರೊಂದಿಗೆ ಕರೆ ಮಾಡಿ ಮಾತನಾಡಿ ಸಮಾಧಾನ ಮಾಡಿದ್ದರು.. ಆದ್ರೆ ಈ ಬಾರಿಯೂ ಟಿಕೆಟ್ ಮಿಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬಿ.ವೈ,ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೋದಕ್ಕೆ ಈಶ್ವರಪ್ಪ ಅವರೇ ಚಿಂತನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ; ಕೋಮುಭಾವನೆ ಕೆರಳಿಸಲು ಕಾಂಗ್ರೆಸ್ಸಿಗರಿಂದ ಸಿಎಎ ಬಳಕೆ; ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್
ನಾನು ಪಕ್ಷೇತರ ಅಭ್ಯರ್ಥಿಯಾಗ್ತೀನಿ ಅಂತಾ ಹೇಳಿದೀನಾ..? ನನ್ನ ಬೆಂಬಲಿಗರು ಪಕ್ಷೇತರ ಅಭ್ಯರ್ಥಿಯಾಗುವಂತೆ ಒತ್ತಾಯ ಮಾಡ್ತಿದ್ದಾರೆ ಅಷ್ಟೆ. ನನ್ನ ಬೆಂಬಲಿಗರು ನಾಳೆ ಸಭೆ ಕರೆದಿದ್ದಾರೆ. ಅದಕ್ಕೆ ನಾನು ಹೋಗುತ್ತಿದ್ದೇನೆ. ಈಗ ಏನೂ ತೀರ್ಮಾನ ಮಾಡಿಲ್ಲ. ಸಭೆಯ ನಂತರ ನಾನು ನನ್ನ ನಿಲುವು ತಿಳಿಸುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಹೀಗಾಗಿ, ಇದನ್ನು ನೋಡಿದರೆ ಅವರು ಬಂಡಾಯವೇಳೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಇನ್ನು ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡಾ ಈಶ್ವರಪ್ಪ ಮನೆಗೆ ಹೋಗಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಇದ್ರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಹೇಳಲಾಗುತ್ತಿದೆ.
ಶೆಟ್ಟರ್‌ಗೆ ಕರೆದು ಟಿಕೆಟ್ ಕೊಡುತ್ತಿರುವುದಕ್ಕೆ ಈಶ್ವರಪ್ಪ;
ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡದಿದ್ದರೂ ಪಕ್ಷದ ಪರವಾಗಿ ಕೆಲಸ ಮಾಡಿದ್ದೆ. ಆದ್ರೆ ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಹೋದರು. ಆದರೂ ಕೂಡಾ ಅವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಂಡಿರಿ. ಪಕ್ಷ ಬಿಟ್ಟು ಹೋಗಿ ಪಕ್ಷದ ಸೋಲಿಗೆ ಕಾರಣವಾದವರಿಗೆ ಈಗ ಬೆಳಗಾವಿಯಿಂದ ಟಿಕೆಟ್ ಕೊಟ್ಟಿದ್ದೀರಿ. ನನ್ನ ಮಗನಿಗೆ ಯಾಕೆ ಟಿಕೆಟ್ ನಿರಾಕರಿಸುತ್ತಿದ್ದೀರಿ ಎಂದು ಈಶ್ವರಪ್ಪ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಸಂಜೆ ವೇಳೆಗೆ ಪಟ್ಟಿ ಬಿಡುಗಡೆಯಾದರೆ, ಈಶ್ವರಪ್ಪ ಮಗನಿಗೆ ಟಿಕೆಟ್ ಸಿಗದೇ ಹೋಗಿದ್ದರೆ ನಾಳಿನ ಸಭೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಲಿದೆ.
ಇದನ್ನೂ ಓದಿ; ಶಂಕಿತ ಉಗ್ರನನ್ನು ಸಂಪರ್ಕಿಸಿದ್ದ ಯುವಕ ಸಿಕ್ಕಿಬಿದ್ದ; ಬಾಂಬರ್ ಹಿಡಿಯೋದು ಈಗ ಸುಲಭ!