Politics

ಸಂಜೆ ವೇಳೆಗೆ ಬಿಜೆಪಿ 2ನೇ ಪಟ್ಟಿ ರಿಲೀಸ್‌?; ರಾಜ್ಯದಲ್ಲಿ ಇವರಿಗೇ ನೋಡಿ ಟಿಕೆಟ್‌..!

ಬೆಂಗಳೂರು; ಬಿಜೆಪಿ ಎರಡನೇ ಪಟ್ಟಿ ಇಂದು ಬಹುತೇಕ ಬಿಡುಗಡೆಯಾಗುವ ಸಾಧ್ಯತೆ ಇದೆ.. ಎರಡನೇ ಪಟ್ಟಿಯಲ್ಲಿ ರಾಜ್ಯದ 15-18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ರಿಲೀಸ್‌ ಆಗುವ ಬಿಜೆಪಿ ಎರಡನೇ ಪಟ್ಟಿ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಿಜೆಪಿಗೆ ಕಗ್ಗಂಟಾಗಿದೆ.. ಇದರ ನಡುವೆಯೂ ಒಂದು ಪಟ್ಟಿ ರೆಡಿಯಾಗಿದೆ ಎಂದು ತಿಳಿದುಬಂದಿದ್ದು, ಸಂಜೆ ವೇಳೆಗೆ ಎರಡನೇ ಪಟ್ಟಿ ರಿಲೀಸ್‌ ಆಗಬಹುದು.

ಮಾಹಿತಿಗಳ ಪ್ರಕಾರ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಯಾರೆಂಬುದು ಬಯಲಾಗಿದೆ.. ಬಹುತೇಕ ಅವರೇ ಅಭ್ಯರ್ಥಿಗಳು, ಅಧಿಕೃತ ಘೋಷಣೆಯೊ೦ದೇ ಬಾಕಿ ಎಂದು ಹೇಳಲಾಗುತ್ತಿದೆ. ಆದ್ರೆ ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ; ನಾಳೆಯೇ ಬಿಜೆಪಿ ಸೇರಲಿದ್ದಾರೆ ದೇವೇಗೌಡರ ಅಳಿಯ; ಬೆಂಗಳೂರು ಗ್ರಾ.ಕ್ಕೆ ಡಾ.ಸಿ.ಎನ್‌.ಮಂಜುನಾಥ್‌ ಗೆ ಟಿಕೆಟ್‌ ಕನ್ಫರ್ಮ್‌!

ಯಾರ್ಯಾರಿಗೆ ಸಿಗಬಹುದು ಟಿಕೆಟ್‌..?

========================

ಬೆಳಗಾವಿ – ಜಗದೀಶ್‌ ಶೆಟ್ಟರ್‌

ಬೆಂಗಳೂರು ಗ್ರಾಮಾಂತರ – ಡಾ.ಸಿ.ಎನ್‌.ಮಂಜುನಾಥ್‌

ಮೈಸೂರು-ಕೊಡಗು – ಯದುವೀರ್‌ ಕೃಷ್ಣದತ್ತ ಒಡೆಯರ್‌

ವಿಜಯಪುರ – ಗೋವಿಂದ ಕಾರಜೋಳ

ಹಾವೇರಿ – ಬಸವರಾಜ ಬೊಮ್ಮಾಯಿ

ಚಿಕ್ಕೋಡಿ – ರಮೇಶ್‌ ಕತ್ತಿ

ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್‌

ಬೆಂಗಳೂರು – ದಕ್ಷಿಣ – ತೇಜಸ್ವಿ ಸೂರ್ಯ

ಇದನ್ನೂ ಓದಿ; ಶಂಕಿತ ಉಗ್ರನನ್ನು ಸಂಪರ್ಕಿಸಿದ್ದ ಯುವಕ ಸಿಕ್ಕಿಬಿದ್ದ; ಬಾಂಬರ್‌ ಹಿಡಿಯೋದು ಈಗ ಸುಲಭ!

ಇವರಿಗೆ ಟಿಕೆಟ್‌ ಕನ್ಫರ್ಮ್‌ ಆಗಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಇನ್ನೂ ಹತ್ತು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‌ ಆಗಿದ್ದು ಸಂಜೆ ವೇಳೆಗೆ ಘೋಷಣೆಯಾಗಬಹುದು ಎಂದು ತಿಳಿದುಬಂದಿದೆ.. ಉತ್ತರ ಕನ್ನಡದಲ್ಲಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಕಗಳ ಪ್ರಕಾರ ಹರಿಪ್ರಕಾಶ್‌ ಕೋಣೆಮನೆ ಅಥವಾ ಚಕ್ರವರ್ತಿ ಸೂಲಿಬೆಲೆಗೆ ಟಿಕೆಟ್‌ ನೀಡಿರಬಹುದು ಎಂದು ಹೇಳಲಾಗುತ್ತಿದೆ.

ಬೆಳಗಾವಿಗೆ ಟಿಕೆಟ್‌ ಬೇಡ ಎನ್ನುತ್ತಿರುವ ಶೆಟ್ಟರ್‌;

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ಗೆ ಬೆಳಗಾವಿಯಿಂದ ಟಿಕೆಟ್‌ ಸಿಗೋದು ಬಹುತೇಕ ಫಿಕ್ಸ್‌ ಆಗಿದೆ.. ಆದ್ರೆ ಈ ಶೆಟ್ಟರ್‌ ಅವರೇ ಟಿಕೆಟ್‌ ಬೇಡ ಎನ್ನುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಗೋಬ್ಯಾಕ್ ಅಭಿಯಾನ ಶುರುವಾಗಿದೆ. ಮಹಾಂತೇಶ್‌ ಕವಟಗಿಮಠ ಅವರಿಗೆ ಟಿಕೆಟ್‌ ನೀಡುವಂತೆ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಸ್ಪರ್ಧೆ ಮಾಡಲು ಶೆಟ್ಟರ್‌ ಹಿಂದೇಟು ಹಾಕುತ್ತಿದ್ದಾರೆ. ಬೆಳಗಾವಿಗೆ ಬದಲಾಗಿ ಧಾರವಾಡ ಕ್ಷೇತ್ರವನ್ನು ಶೆಟ್ಟರ್‌ ಕೇಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ ಬಿಜೆಪಿ ಹೈಕಮಾಂಡ್‌ ಯಾವ ತೀರ್ಮಾನ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ.

ಜೀವ ಇರೋವರೆಗೂ ಮೋದಿ ನನ್ನ ದೇವರು ಎಂದ ಪ್ರತಾಪ ಸಿಂಹ;

ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ ಸಿಂಹ ಬದಲಾಗಿ ಶ್ರೀಕಂಠದತ್ತ ಕೃಷ್ಣರಾಜ ಒಡೆಯರ್‌ಗೆ ಟಿಕೆಟ್‌ ಬಹುತೇಕ ಪಕ್ಕಾ ಆಗಿದೆ. ಇದರಿಂದಾಗಿ ಹಾಲಿ ಸಂಸದ ಪ್ರತಾಪ ಸಿಂಹ ಬೇಸರಗೊಂಡಿದ್ದರು.. ಅವರು ಬಂಡಾಯವೇಳುವ ಸಾಧ್ಯತೆ ಬಗ್ಗೆ ಮಾತುಗಳು ಕೇಳಿಬಂದಿದ್ದವು.. ಆದ್ರೆ ಪ್ರತಾಪ ಸಿಂಹ ಈಗ ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ. ಯಾರೇ ಅಭ್ಯರ್ಥಿಯಾದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳುತ್ತೇವೆ. ನಾನು ಯಾವುದೇ ಕಾರಣಕ್ಕೂ ಬಂಡಾಯವೇಳೋದಿಲ್ಲ. ನಾನು ಸಾಯುವವರೆಗೂ ನಾನು ಮೋದಿ ಅಭಿಮಾನಿಯಾಗಿಯೇ ಇರುತ್ತೇನೆ ಎಂದು ಪ್ರತಾಪ ಸಿಂಹ ಹೇಳಿದ್ದಾರೆ.

ಇದನ್ನೂ ಓದಿ; ಮಾಜಿ ಸಿಎಂ ಸದಾನಂದಗೌಡ ಕಾಂಗ್ರೆಸ್‌ ಸೇರುತ್ತಾರಾ..?; ಡಿ.ಕೆ.ಶಿವಕುಮಾರ್‌ ಈ ಬಗ್ಗೆ ಹೇಳಿದ್ದೇನು..?

ಮಗನಿಗೆ ಟಿಕೆಟ್‌ ಕೈತಪ್ಪುತ್ತಿರುವುದಕ್ಕೆ ಈಶ್ವರಪ್ಪ ಬೇಸರ;

ಇನ್ನೊಂದೆಡೆ ಹಾವೇರಿ ಕ್ಷೇತ್ರದಿಂದ ತಮ್ಮ ಮಗನಿಗೆ ಟಿಕೆಟ್‌ ನೀಡುವಂತೆ ಈಶ್ವರಪ್ಪ ಮನವಿ ಮಾಡಿದ್ದರು.. ಆದ್ರೆ ಈಶ್ವರಪ್ಪ ಮಗನಿಗೆ ಟಿಕೆಟ್‌ ಸಿಗೋದು ಬಹುತೇಕ ಡೌಟು. ಹೀಗಾಗಿ ಈಶ್ವರಪ್ಪ ಸಿಡಿದೆದ್ದಾರೆ.. ಅವರು ತಮ್ಮ ಬೆಂಬಲಿಗರ ಸಭೆ ಕೂಡಾ ನಡೆಸಿದ್ದಾರೆ. ಇದರಿಂದಾಗಿ ಈಶ್ವರಪ್ಪ ಅವರು ಬಂಡಾಯವೆದ್ದು ಶಿವಮೊಗ್ಗದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಾರಾ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

Share Post