Politics

ನನ್ನ ಮಗನನ್ನು ಗೆಲ್ಲಿಗೇರಿಸಲಿ; ಸದನದಲ್ಲಿ ಎಚ್‌.ಡಿ.ರೇವಣ್ಣ ರೋಷಾವೇಶ!

ಬೆಂಗಳೂರು; ಮುಂಗಾರು ಅಧಿವೇಶನದಲ್ಲಿ ಕಲಾಪ ಗಲಾಟೆ ಗದ್ದಲದಲ್ಲೇ ಕಾಲಹರಣವಾಗುತ್ತಿದೆ.. ಅಧಿವೇಶನದಲ್ಲಿ ವಾಲ್ಮೀಕಿ ನಿಗಮದ ಹಗರಣ ಸಾಕಷ್ಟು ಸದ್ದು ಮಾಡುತ್ತಿದೆ.. ಈ ನಡುವೆ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರು ತಮ್ಮ ಮಗನ ಪ್ರಕರಣದ ವಿಚಾರವಾಗಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ನಾನು ನನ್ನ ಮಗನ ಬಗ್ಗೆ ವಹಿಸಿಕೊಂಡು ಮಾತನಾಡುವುದಿಲ್ಲ. ಆತ ತಪ್ಪು ಮಾಡಿರುವುದು ಸಾಬೀತಾದರೆ ಗಲ್ಲಿಗೆ ಏರಿಸಲಿ, ನಾನು ಅದಕ್ಕೆ ಬೇಡ ಎನ್ನುವುದಿಲ್ಲ. ನನ್ನ ವಿರುದ್ಧ ಯಾರ್ಯಾರೋ ಆರೋಪ ಮಾಡುತ್ತಿದ್ದಾರೆ.. ಆದ್ರೆ ನಾನು ನನ್ನ ಮಗನನ್ನು ವಹಿಸಿಕೊಂಡು ಮಾತನಾಡೋದಕ್ಕೆ ಇಲ್ಲಿಗೆ ಬಂದಿಲ್ಲ ಎಂದು ರೇವಣ್ಣ ಆಕ್ರೋಶವಾಗಿ ಮಾತನಾಡಿದ್ದಾರೆ..

ಇದನ್ನೂ ಓದಿ; ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಕುಲ್‌ ಪ್ರೀತ್‌ಸಿಂಗ್‌ ಸಹೋದರ ಅರೆಸ್ಟ್‌!

ಡಿಜಿ ಕಚೇರಿ ಹೆಣ್ಣು ಮಗಳನ್ನು ಕರೆಸಿಕೊಂಡು ಡಿಜಿಯೇ ಆಕೆಯಿಂದ ದೂರು ಬರೆಸಿಕೊಳ್ಳುತ್ತಾರೆ.. ಆತ ಡಿಜಿ ಆಗಲು ಲಾಯಕ್ಕಿದ್ದಾನಾ..? ಎಂದು ಏಕವಚನದಲ್ಲೇ ರೇವಣ್ಣ ಪ್ರಶ್ನೆ ಮಾಡಿದ್ದಾರೆ.. ರೇವಣ್ಣ ಏರುಧ್ವನಿಯಲ್ಲಿ ಮಾತನಾಡುತ್ತಿದ್ದಾಗ ಮಧ್ಯೆಪ್ರವೇಶ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌, ನಿಮಗೆ ಬಹಳ ಅನ್ಯಾಯ ಆಗಿದ್ದರೆ ನೋಟಿಸ್‌ ಕೊಡಿಸಿ, ಚರ್ಚೆ ಮಾಡೋಣ ಎಂದು ಹೇಳಿದರು..

ಇದನ್ನೂ ಓದಿ;ಕಾರು ಕೊಡಿಸಲು ಹಣವಿಲ್ಲ ಎಂದಿದ್ದಕ್ಕೆ ಮಗಳೇ ತಾಯಿಗೆ ವಿಷ ಕುಡಿಸಿದಳು..!

Share Post