DistrictsPolitics

ಸಿದ್ದರಾಮಯ್ಯ, ಖರ್ಗೆ ವಿರುದ್ಧ ಸಿಎಂ ಬೊಮ್ಮಾಯಿ ಗರಂ

ಬೀದರ್‌; ಸಿದ್ದರಾಯ್ಯ ಅವರು ಲಿಂಗಾಯತ ನಾಯಕರನ್ನು ಭ್ರಷ್ಟರು ಎಂದು ಕರೆಯುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೀದರ್‌ನಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಕಾಲದಲ್ಲೇ ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗಿರೋದು ಎಂದು ಹೇಳಿದರು.

ಮೋದಿಯವರನ್ನು ಖರ್ಗೆಯವರು ಕೆಟ್ಟ ಪದ ಬಳಸಿ ಟೀಕಿಸಿದ್ದಾರೆ. ಸೋಲುವ ಹತಾಶೆಯಿಂದ ಕಾಂಗ್ರೆಸ್‌ ನಾಯಕರು ಕೆಟ್ಟದಾಗಿ ಮಾತನಾಡುತ್ತುದ್ದಾರೆ. ಮೋದಿಯವರು ವಿಷವನ್ನು ಕುಡಿದು ಜನರಿಗೆ ಒಳ್ಳೆಯದನ್ನೇ ಮಾಡುವ ನಾಯಕ ಎಂದು ಬೊಮ್ಮಾಯಿ ಹೇಳಿದ್ದಾರೆ.

Share Post