ಕಾರು ಕೊಡಿಸಲು ಹಣವಿಲ್ಲ ಎಂದಿದ್ದಕ್ಕೆ ಮಗಳೇ ತಾಯಿಗೆ ವಿಷ ಕುಡಿಸಿದಳು..!
ಬೆಂಗಳೂರು; ಕಾರು ಖರೀದಿ ಮಾಡೋದಕ್ಕೆ ಹಣ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಸ್ವಂತ ಮಗಳೇ ತನ್ನ ಗಂಡನ ಜೊತೆ ಸೇರಿಕೊಂಡು ತಾಯಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ.. ಬೆಂಗಳೂರಿನ ಕೆಂಗೇರಿ ಸಮೀಪದ ಅಂಚೆಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಕೀಟನಾಶಕ ಸೇವಿಸಿದ್ದ ಮಹಿಳೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ..
ಇದನ್ನೂ ಓದಿ; 7ನೇ ತರಗತಿ ಬಾಲಕಿ ಗ್ಯಾಸ್ ಡೆಲಿವರಿ ಬಾಯ್ ಮನೆಯಲ್ಲಿ ಅನುಮಾನಾಸ್ಪದ ಸಾವು!
37 ವರ್ಷದ ಆಶಾ ಎಂಬುವವರಿಗೆ ಅವರ ಮಗಳಾದ ಸುಶ್ಮಿತಾ ಹಾಗೂ ಸುಶ್ಮಿತಾ ಗಂಡ ಗಿರೀಶ್ ಎಂಬಾತ ಕಾರು ಕೊಡಿಸುವಂತೆ ಕೇಳಿದ್ದಾರೆ.. ಆದ್ರೆ ಇದಕ್ಕೆ ಹಣ ಇಲ್ಲ ಎಂದು ಅಶಾ ಹೇಳಿದ್ದಾರೆ.. ಇದರಿಂದ ಆಕ್ರೋಶಗೊಂಡ ಸುಶ್ಮಿತಾ ಹಾಗೂ ಗಿರೀಶ್ ಕೀಟನಾಶಕವನ್ನು ತಂದು ಆಶಾಗೆ ಬಲವಂತವಾಗಿ ಕುಡಿಸಿದ್ದಾರೆ ಎಂದು ತಿಳಿದುಬಂದಿದೆ.. ಆಶಾ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..
ಇದನ್ನೂ ಓದಿ; ಹೆಂಡತಿಯ ಈ ಮೂರು ಅಭ್ಯಾಸಗಳು ಗಂಡನಿಗೆ ಇಷ್ಟವಾಗೋದಿಲ್ಲವಂತೆ..!
ಆಶಾಗೆ ಕೀಟನಾಶಕ ಕುಡಿಸಿದ ನಂತರ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು.. ಆಶಾ ಕೂಡಲೇ ತನ್ನ ಸಹೋದರಿಗೆ ಕರೆ ಮಾಡಿ ಕರೆಸಿಕೊಂಡಿದ್ದರು.. ಆಶಾ ಸಹೋದರಿಯೇ ಆಶಾರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.. ಇನ್ನು ಪೊಲೀಸರು ಆಶಾ ಅಳಿಯ ಗಿರೀಶ್‌ನನ್ನು ಬಂಧಿಸಿದ್ದು, ಕೋರ್ಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.. ಆದ್ರೆ ಸುಶ್ಮಿತಾಗೆ ಮೂರು ತಿಂಗಳ ಮಗು ಇದೆ.. ಈ ಕಾರಣಕ್ಕಾಗಿ ಆಕೆಯ ಬಂಧನ ಪ್ರಕ್ರಿಯೆ ಇನ್ನೂ ನಡೆಸಿಲ್ಲ..
ಇದನ್ನೂ ಓದಿ; ಡ್ರಗ್ಸ್ ಕೇಸ್‌ನಲ್ಲಿ ನಟಿ ರಕುಲ್ ಪ್ರೀತ್‌ಸಿಂಗ್ ಸಹೋದರ ಅರೆಸ್ಟ್!