Politics

ಮೈಸೂರಿಗೆ ʻಯಧುವೀರಾʼಧಿ ವೀರ; ಟಿಕೆಟ್‌ ಬೇಟೆಯ ಹೋಪ್‌ ಕಳೆದುಕೊಳ್ತಾ ʻಸಿಂಹʼ?

ಬೆಂಗಳೂರು; ಮೈಸೂರು ರಾಜವಂಶಸ್ಥ ಯಧುವೀರ್‌ ಒಡೆಯರ್‌ ಬಿಜೆಪಿ ಅಭ್ಯರ್ಥಿಯಾಗೋದು ಬಹುತೇಕ ಪಕ್ಕಾ ಆಗಿದೆ.. ಹಾಲಿ ಸಂಸದ ಪ್ರತಾಪ ಸಿಂಹ ಅವರ ಬೆಂಬಲಿಗರ ಗಡಿಬಿಡಿ, ಸಂಸದ ಪ್ರತಾಪ ಸಿಂಹ ಅವರ ಕಳೆಗುಂದಿನ ಮುಖ ಬೇರೇನೋ ಹೇಳುತ್ತಿದೆ.. ಕಳೆದ ಹತ್ತು ವರ್ಷಗಳಿಂದ ಮೈಸೂರು-ಕೊಡಗು ಕ್ಷೇತ್ರಕ್ಕಾಗಿ ಸಮರ್ಥವಾಗಿ ದುಡಿದ, ಹತ್ತಾರು ಜನಮೆಚ್ಚುವ ಕೆಲಸ ಮಾಡಿದ ಪ್ರತಾಪ ಸಿಂಹ, ಅನಿವಾರ್ಯ ಕಾರಣಕ್ಕಾಗಿ ಕ್ಷೇತ್ರ ಕಳೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ಭಾನುವಾರವಾದ ಇಂದು ಸಾಕಷ್ಟು ಬೆಳವಣಿಗೆಗಳಾಗಿವೆ.. ರಾಜಸ್ಥಾನದಿಂದ ಬಂದ ಆ ಕರೆಗೆ ಓಗೊಟ್ಟು ಯಧುವೀರ್‌ ಅವರು ಚುನಾವಣಾ ಅಖಾಡಕ್ಕಿಳಿಯೋದಕ್ಕೆ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಯಧುವೀರ್‌ ಸ್ಪರ್ಧೆಗೆ ರಾಜಮಾತೆ ಪ್ರಮೋದಾದೇವಿ ಕೂಡಾ ಗ್ರೀನ್‌ ಸಿಗ್ನಲ್‌ ತೋರಿಸಿದ್ದರೆಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ ಮೈಸೂರು ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ..

ಯಾವುದೇ ಕಾರಣಕ್ಕೂ ಮಾತಾಡಲ್ಲ;

ಯಾವುದೇ ಕಾರಣಕ್ಕೂ ಮಾತಾಡಲ್ಲ; ಭಾನುವಾರದ ಇಂದು ಬೆಳಗ್ಗೆಯಷ್ಟೇ ಟಿವಿಗಳ ಮುಂದೆ ಪ್ರತಾಪ ಸಿಂಹ ಹೇಳಿಕೆ ಕೊಟ್ಟಿದ್ದರು.  ಆದ್ರೆ ಸಂಜೆಯಾಗೋ ವೇಳೆಗೆ ಅವರ ವರಸೆಯೇ ಬದಲಾಗಿದೆ. ಬೆಳಗ್ಗೆ ಮಾತಾಡಿದ್ದೇ ಸಾಕಾಗಿದೆ.. ಇನ್ನು ನಾನು ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ ಎನ್ನುತ್ತಲೇ ಪ್ರತಾಪ ಸಿಂಹ ಗಡಿಬಿಡಿಯಲ್ಲಿ ಕಾರು ಹತ್ತಿ ಹೊರಟರೆಂದು ಮೈಸೂರು ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಇನ್ನು ವಿಜಯನಗರ ಸಂಸದ ಪ್ರತಾಪ ಸಿಂಹ ಅವರ ಮನೆಯ ಮುಂದೆ ಅವರ ಬೆಂಬಲಿಗರು ಕೂಡಾ ಬೇಸರದಿಂದ ಇದ್ದರು. ಇದೇ ಸಂದರ್ಭದಲ್ಲಿ ಮಾತನಾಡಿರುವ ಪ್ರತಾಪ ಸಿಂಹ ಅವರ ಆಪ್ತ ಕಿರಣ್‌ ಗೌಡ ಅವರು, ಯಧುವೀರ್‌ ಅವರು ನಮ್ಮ ಮಹಾರಾಜರು. ಅವರು ಸಿಂಹ ಅವರನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಏನೋ ದೊಡ್ಡ ಬೆಳವಣಿಗೆಯಾದಂತೆ ಕಾಣುತ್ತಿದೆ.

ʻರಾಜಸ್ಥಾನʼದ ಕರೆಗೆ ಎಸ್‌ ಎಂದರಾ ಯಧುವೀರ್‌..?;

ʻರಾಜಸ್ಥಾನʼದ ಕರೆಗೆ ಎಸ್‌ ಎಂದರಾ ಯಧುವೀರ್‌..?; ಯಧುವೀರ್‌ ಒಡೆಯರ್‌ ಅವರ ಪತ್ನಿ ತ್ರಿಷಿಕಾ ದೇವಿ ಒಡೆಯರ್‌ ಅವರು ರಾಜಸ್ಥಾನದ ಡುಂಗರ್‌ಪುರ್‌ ರಾಜಮನೆತನದವರು.. ಅವರ ತಂದೆ ಹರ್ಷವರ್ದನ್‌ ಸಿಂಗ್‌ ಅವರು ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದವರು.. ಮೈಸೂರು-ಕೊಡಗು ಕ್ಷೇತ್ರದಲ್ಲಿ ಯಧುವೀರ್‌ ಅವರನ್ನು ಚುನಾವಣಾ ಕಣಕ್ಕಿಳಿಸಲು ಮೋದಿ, ಅಮಿತ್‌ ಷಾ ಸೇರಿ ಬಿಜೆಪಿ ಹೈಕಮಾಂಡ್‌ ಆಸೆ ಪಟ್ಟಿತ್ತು.. ಆದ್ರೆ, ಯಧುವೀರ್‌ ರಾಜಕಾರಣಕ್ಕೆ ಬರಲು ಒಪ್ಪಿರಲಿಲ್ಲ.. ಹೀಗಾಗಿ, ತ್ರಿಷಿಕಾ ದೇವಿ ಒಡೆಯರ್‌ ಅವರ ತಂದೆ ಹರ್ಷವರ್ಧನ್‌ ಮೂಲಕ ಯಧುವೀರ್‌ ಅವರನ್ನು ಒಪ್ಪಿಸಿ ಲೈನ್‌ ಕ್ಲಿಯರ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಮೈಸೂರಿನಲ್ಲಿ ಭಾನವಾರವಾದ ಇಂದು ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.

ಎರಡು ಬಾರಿ ಗೆದ್ದು ಉತ್ತಮ ಕೆಲಸ ಮಾಡಿರುವ ಪ್ರತಾಪ ಸಿಂಹ;

ಎರಡು ಬಾರಿ ಗೆದ್ದು ಉತ್ತಮ ಕೆಲಸ ಮಾಡಿರುವ ಪ್ರತಾಪ ಸಿಂಹ; ಪ್ರತಾಪ ಸಿಂಹ ಅವರು ಪತ್ರಕರ್ತರಾಗಿದ್ದವರು.. ಬಿಜೆಪಿ ಹೈಕಮಾಂಡ್‌ ಇವರನ್ನು ಗುರುತಿಸಿ ರಾಜಕೀಯಕ್ಕೆ ಕರೆತಂದಿತ್ತು.. ಎರಡು ಬಾರಿ ಸಂಸದರಾಗಿರುವ ಪ್ರತಾಪ ಸಿಂಹ, ಕ್ಷೇತ್ರದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಬೆಂಗಳೂರು-ಮೈಸೂರು ದಶಪಥ ರಸ್ತೆಯೇ ಇದಕ್ಕೊಂದು ಉದಾಹರಣೆ.. ಇದಿಷ್ಟೇ ಅಲ್ಲ, ನೂರಾರು ಕೆಲಸಗಳು ಪ್ರತಾಪ ಸಿಂಹ ಕಾಲದಲ್ಲಿ ಆಗಿದೆ. ಅಷ್ಟೇ ಏಕೆ, ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ನೂರಾರು ರೋಗಿಗಳಿಗೆ ಕೋಟ್ಯಂತರ ರೂಪಾಯಿ ಪರಿಹಾರ ಕೊಡಿಸಿದ್ದಾರೆ. ಮೂರನೇ ಬಾರಿ ಕೂಡಾ ಪ್ರತಾಪ ಸಿಂಹಗೆ ಗೆಲ್ಲುವ ಶಕ್ತಿ ಇದೆ.. ಅದು ಬಿಜೆಪಿ ಹೈಕಮಾಂಡ್‌ಗೂ ಗೊತ್ತಿದೆ. ಹೀಗಿದ್ದರೂ, ಪ್ರತಾಪ ಸಿಂಹ ಅವರಿಗೆ ಬದಲಾಗಿ ಯಧುವೀರ್‌ ಅವರಿಗೆ ಮಣೆ ಹಾಕುತ್ತಿರುವುದರ ಹಿಂದಿನ ಲೆಕ್ಕಾಚಾರವೇ ಒಂದು ಕುತೂಹಲ.

ಹಳೇ ಮೈಸೂರು ಭಾಗದಲ್ಲಿ ಬಲವಾಗುವುದೇ ಉದೇಶ;

ಹಳೇ ಮೈಸೂರು ಭಾಗದಲ್ಲಿ ಬಲವಾಗುವುದೇ ಉದೇಶ; ಪ್ರತಾಪ ಸಿಂಹ ಅವರು ಸಾಕಷ್ಟು ಕೆಲಸ ಮಾಡಿದರು.. ತಮ್ಮ ಶಕ್ತಿ ಮೀರಿ ದುಡಿದರು.. ಹಿರಿಯ ಸಚಿವರನ್ನು ಒಪ್ಪಿಸಿ ನೂರಾರು ಕೆಲಸಗಳನ್ನು ತಂದರು.. ಅವರು ಕೆಲಸಗಾರರಾದರೆ ಹೊರತು ಲೀಡರ್‌ ಆಗಲೇ ಇಲ್ಲ.. ಲೀಡರ್‌ ಆಗಿ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕಾದವರು, ಅವರದೇ ಪಕ್ಷದ ಶಾಸಕರ ಜೊತೆ ಕಿತ್ತಾಡಿಕೊಂಡರು.. ಬಿಜೆಪಿಯ ಒಂದಷ್ಟು ಶಾಸಕರಿಗೆ ಪ್ರತಾಪ ಸಿಂಹ ಅಂದ್ರೆ ಅಷ್ಟೆಕ್ಕಷ್ಟೇ.. ಇದು ಬಿಟ್ಟರೆ ಪ್ರತಾಪ ಸಿಂಹ ಜನಕ್ಕೆ ಬೇಕಾದ ನಾಯಕ.. ಆದ್ರೆ ಬಿಜೆಪಿಗೆ ಹಳೇ ಮೈಸೂರು ಭಾಗದಲ್ಲಿ ಒಬ್ಬ ನಾಯಕ ಬೇಕಿದೆ.. ಆ ನಾಯಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬೇರೂರಿಸಬೇಕಿದೆ.. ಅದ್ರಲ್ಲೂ ಮಂಡ್ಯ, ಹಾಸನ ಭಾಗದಲ್ಲಿ ಬಿಜೆಪಿಗೆ ಭದ್ರಕೋಟೆ  ನಿರ್ಮಿಸಬೇಕಿದೆ.. ಈ ಕಾರಣಕ್ಕಾಗಿಯೇ ಬಿಜೆಪಿ ಹೈಕಮಾಂಡ್‌ ಯಧುವೀರ್‌ ಅವರನ್ನು ಆಯ್ಕೆ ಮಾಡಿಕೊಂಡಂತೆ ಕಾಣುತ್ತಿದೆ.

ಸಂಸದರಾಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್‌;

ಸಂಸದರಾಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್‌; ರಾಜ ವಂಶಸ್ಥರು ರಾಜಕೀಯಕ್ಕೆ ಬರುತ್ತಿರುವುದು ಇದೇ ಮೊದಲೇನಲ್ಲ.. ಈ ಹಿಂದಿನ ಮೈಸೂರು ರಾಜವಂಶಸ್ಥರಾದ ಶ್ರೀಕಂಠದತ್ತ ಒಡೆಯರ್‌ ಅವರು ಕೂಡಾ ರಾಜಕೀಯಕ್ಕೆ ಬಂದಿದ್ದರು.. ಕಾಂಗ್ರೆಸ್‌ ಪಕ್ಷದಿಂದ ಸಂಸದರೂ ಆಗಿದ್ದರು.. ಕಳೆದ ಚುನಾವಣೆ ಸಮಯದಲ್ಲೇ ಯಧುವೀರ್‌ ರನ್ನು ರಾಜಕೀಯಕ್ಕೆ ಕರೆತರೋ ಪ್ರಯತ್ನ ನಡೆದಿತ್ತು. ಕಾಂಗ್ರೆಸ್‌ ನಾಯಕರೇ ಪ್ರಯತ್ನ ಮಾಡಿದ್ದರು. ಆದ್ರೆ ಆಗ ಕಾಂಗ್ರೆಸ್‌ಗೆ ಒತ್ತಡಕ್ಕೆ ಯಧುವೀರ್‌ ಮಣಿದಿರಲಿಲ್ಲ. ಅನಂತರ ಪ್ರಧಾನಿ ಮೋದಿಯವರು ಅರಮನೆಗೆ ಭೇಟಿ ನೀಡಿ ಮಾತನಾಡಿದ್ದರು. ಆಗಲೇ ಮೋದಿ, ಯಧುವೀರ್‌ರನ್ನು ರಾಜಕೀಯಕ್ಕೆ ಕರೆತರುವ ಬಗ್ಗೆ ಯೋಚನೆ ಮಾಡಿದ್ದರು ಅನಿಸುತ್ತೆ.. ಅದು ಈಗ ಕೈಗೂಡಿದಂತೆ ಕಾಣುತ್ತಿದೆ. ಯಧುವೀರ್‌ ರಾಜಕೀಯಕ್ಕೆ ಬಂದರೆ ಕೇಂದ್ರದಲ್ಲಿ ಸಚಿವರೂ ಆಗುವ ಎಲ್ಲಾ ಚಾನ್ಸಸ್‌ ಕೂಡಾ ಇದೆ..

 

 

Share Post